• Home
  • »
  • News
  • »
  • state
  • »
  • Bandemutt Swamy Case: ಬಂಡೇಮಠ ಸ್ವಾಮಿ ಆತ್ಮಹತ್ಯೆ ಕೇಸ್; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಅರೆಸ್ಟ್

Bandemutt Swamy Case: ಬಂಡೇಮಠ ಸ್ವಾಮಿ ಆತ್ಮಹತ್ಯೆ ಕೇಸ್; ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಅರೆಸ್ಟ್

ಬಂಡೆಮಠ ಸ್ವಾಮೀಜಿ ಕೇಸ್​

ಬಂಡೆಮಠ ಸ್ವಾಮೀಜಿ ಕೇಸ್​

ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಸಹೋದರರಾಗಿದ್ದು, ಮೊದಲಿನಿಂದಲೂ ಇಬ್ಬರು ಶ್ರೀಗಳ ನಡುವೆ ಮನಸ್ತಾಪವಿತ್ತು ಎಂದು ತಿಳಿದು ಬಂದಿದೆ.

  • News18 Kannada
  • Last Updated :
  • Ramanagara, India
  • Share this:

ಬಂಡೇಮಠದ ಬಸವಲಿಂಗ ಸ್ವಾಮೀಜಿ (Basavalinga Swamjii Suicide Case) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಣ್ಣೂರು ಮಠದ (Kannur Mutt Swamiji) ಮೃತ್ಯುಂಜಯ ಸ್ವಾಮೀಜಿ (Mrityunjaya swamiji Arrest) ಬಂಧಿಸಿದ್ದಾರೆ.  ಪ್ರಕರಣದಲ್ಲಿ  ಮೃತ್ಯುಂಜಯ ಸ್ವಾಮೀಜಿ A1 ಆರೋಪಿಯಾಗಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿನಿ‌ ನೀಲಾಂಬಿಕಾ ಅಲಿಯಾಸ್  ಚಂದು ಮತ್ತು ಸಿದ್ಧಗಂಗಾ ಮಠದಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದ 62 ವರ್ಷದ ಮಹಾದೇವಯ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.  ಫೆಬ್ರವರಿಯಲ್ಲಿ ವಿಡಿಯೋ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ನಂತರ ಏಪ್ರಿಲ್​ನಲ್ಲಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರು. 


ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಸಹೋದರರಾಗಿದ್ದು, ಮೊದಲಿನಿಂದಲೂ ಇಬ್ಬರು ಶ್ರೀಗಳ ನಡುವೆ ಮನಸ್ತಾಪವಿತ್ತು ಎಂದು ತಿಳಿದು ಬಂದಿದೆ.


ಬಂಡೆಮಠ ಸ್ವಾಮೀಜಿ ಕೇಸ್​


ನೀಲಾಂಬಿಕೆ ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ. ಯಾವ ಕಾರಣಕ್ಕೆ ಸ್ವಾಮೀಜಿಗೆ ಬೆದರಿಕೆ ಹಾಕಿದ್ರು ಎಂಬುದು ತಿಳಿದು ಬಂದಿಲ್ಲ.


ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ. ಸದ್ಯ ಮೂವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು. ಸ್ವಾಮೀಜಿಗಳಿಬ್ಬರು ಸೋದರ ಸಂಬಂಧಿಗಳಾಗಿದ್ದು, ಇಬ್ಬರ ಮಧ್ಯೆ ಮನಸ್ತಾಪ ಇತ್ತು. ಈ ಹಿನ್ನೆಲೆ ಮೂವರು ಸೇರಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ರಾಮನಗರ ಎಸ್​ಪಿ ಹೇಳಿದ್ದಾರೆ.


ಕಣ್ಣೂರು ಶ್ರೀ ಬಗ್ಗೆ ಸ್ಫೋಟಕ ಮಾಹಿತಿ


ಬಂಧನಕ್ಕೆ ಒಳಗಾಗಿರುವ ಕಣ್ಣೂರು ಶ್ರೀ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕಣ್ಣೂರು ಮಠದ ಸ್ವಾಮಿ ಪ್ರತಿಷ್ಠಿತ ಮಠದ ವಿದ್ಯಾಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ವೇಳೆ ಲಕ್ಷ ಲಕ್ಷ ಹಣಕ್ಕೆ ಡೀಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.


ರಾಜ್ಯದ ಎಲ್ಲಾ ಸಂಸ್ಕೃತ ವಿದ್ಯಾಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದ ಕಣ್ಣೂರು ಶ್ರೀ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲೂ ಪ್ರಾಬಲ್ಯ ಹೊಂದಿರುವ ಆರೋಪ ಕೇಳಿ ಬಂದಿದೆ. ನೇಮಕಾತಿ, ಟ್ರಾನ್ಸ್​ಫರ್ ದಂಧೆಯಲ್ಲಿ ಕಣ್ಣೂರು ಶ್ರೀ ಎತ್ತಿದ ಕೈ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  Bengaluru Pothole: ಬೆಂಗಳೂರಲ್ಲಿ ರಸ್ತೆಗುಂಡಿಗೆ ಮತ್ತೊಂದು ಬಲಿ; ಬೈಕ್ ಸವಾರ ಸಾವು


ಮಠದಲ್ಲಿ ಆಸ್ತಿ ಲೆಕ್ಕ


ಬಂಡೆಮಠದ ಬಸವಲಿಂಗ ಸ್ವಾಮಿ ಸಾವನ್ನಪ್ಪಿದ್ದಕ್ಕೆ ಮಠದಲ್ಲಿ ಲೆಕ್ಕಪತ್ರಗಳ ಪರಿಶೋಧನೆ ಮಾಡಲಾಗಿದೆ. ತುಮಕೂರಿನ‌ ಸಿದ್ದಲಿಂಗಾ ಶ್ರೀಗಳ ಸೂಚನೆಯಂತೆ ಮಠದ ಆಡಳಿತ ಮಂಡಳಿ ಪರಿಶೀಲನೆ ಮಾಡಿದೆ.


ಮಠದ ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳು, ಲೆಕ್ಕ ವ್ಯವಹಾರದ ಪತ್ರಗಳು, ಆಯವ್ಯಯ ದಾಖಲೆಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನ ಪರಿಶೀಲನೆ ಮಾಡಲಾಗಿದೆ.


ಇನ್ನು ಬಸವಲಿಂಗ ಸ್ವಾಮೀಜಿ ಸಾವಿನ ಬಳಿಕ ಕಂಚುಗಲ್​ ಮಠಕ್ಕೆ ಬೆಂಗಳೂರಿನ ಗುರುವಣ್ಣ ಮಠದ ಶ್ರೀಗಳನ್ನ ಉಸ್ತುವಾರಿಯನ್ನಾಗಿ ನೇಮಿಸಿ, ಜವಾಬ್ದಾರಿ ವಹಿಸಲಾಗಿದೆ.


ಗುರುವಣ್ಣ ಮಠದ ಶ್ರೀಗಳಿಗೆ ಜವಾಬ್ದಾರಿ


ಇನ್ನು ಬಸವಲಿಂಗಸ್ವಾಮೀಜಿ ಸಾವಿನ ಬಳಿಕ ಕಂಚುಗಲ್​ ಮಠದಲ್ಲಿ ವೀರಶೈವ ಮುಖಂಡರ ಸಭೆ ನಡೆಸಿದರು. ಮಠದ ಮುಂದಿನ ಕೆಲಸ ಹಾಗೂ ಪೀಠಾಧಿಪತಿ ಬಗ್ಗೆ ಚರ್ಚಿಸಲಾಯ್ತು. ಮಠದ ಜವಬ್ದಾರಿನ್ನು ಬೆಂಗಳೂರಿನ ಗುರುವಣ್ಣ ಮಠದ ಶ್ರೀಗಳಿಗೆ ವಹಿಸಲಾಯ್ತು.


ಇದನ್ನೂ ಓದಿ:  KSRTC ಬಸ್​ಗಳಲ್ಲಿ ಇಷ್ಟು ಕೆಜಿ ಲಗೇಜ್​ ಸಾಗಣೆ ಉಚಿತ! ನಾಯಿ ಸಾಗಣೆಗೆ ಶುಲ್ಕವೆಷ್ಟು?


ಆತ್ಮಹತ್ಯೆ ಬಗ್ಗೆ ಮಾಹಿತಿ ಇರಲಿಲ್ಲ


ಶ್ರೀಗಳ ಸಾವಿನ ಬಗ್ಗೆ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಬಂಡೆಮಠದ ಶ್ರೀಗಳು ಯುವಕರು, ಸಮಾಜದ ಕಳಕಳಿ ಉಳ್ಳವಾರಾಗಿದ್ದರು. ಅವರು ಎಂದಿಗೂ ನಮ್ಮ ಬಳಿ ತಮ್ಮ ನೋವುಗಳ ಬಗ್ಗೆ ಚರ್ಚೆ ಮಾಡಿರಲಿಲ್ಲ ಎಂದಿದ್ದಾರೆ. ಇನ್ನೂ ಹೊನ್ನಮಗವಿ ಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾತನಾಡಿ, ಅವರ ಆತ್ಮವನ್ನೇ ಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ಸಂಕಟ ಅವರಿಗಾಗಿದೆ ಎಂದು ಹೇಳಿದರು.

Published by:Mahmadrafik K
First published: