Threat: ಬಿಜೆಪಿ‌ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ

ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ (Yashpal Suvarna) ಹಾಗೂ ಪ್ರಮೋದ್ ಮುತಾಲಿಕ್ (Pramod Mutalik) ತಲೆ ಕಡಿದರೆ 20 ಲಕ್ಷ ಬಹುಮಾನ ಘೋಷಣೆ ಮಾಡಿ ಇನ್ ಸ್ಟಾಗ್ರಾಂನ (Instgram) ಮಾರಿಗುಡಿ ಪೇಜಿನಲ್ಲಿ (Marigdui Page) ಬಹಿರಂಗ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಪೋಸ್ಟ್

ಬೆದರಿಕೆ ಪೋಸ್ಟ್

  • Share this:
ಬಿಜೆಪಿ‌ ಮುಖಂಡ (BJP Leader), ಶ್ರೀರಾಮಸೇನೆ ಮುಖ್ಯಸ್ಥನ (Sriramasena Founder) ತಲೆಗೆ ತಲಾ 10 ಲಕ್ಷ ಘೋಷಣೆ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Post) ಆಗಿದೆ. ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ (Yashpal Suvarna) ಹಾಗೂ ಪ್ರಮೋದ್ ಮುತಾಲಿಕ್ (Pramod Mutalik) ತಲೆ ಕಡಿದರೆ 20 ಲಕ್ಷ ಬಹುಮಾನ ಘೋಷಣೆ ಮಾಡಿ ಇನ್ ಸ್ಟಾಗ್ರಾಂನ (Instagram) ಮಾರಿಗುಡಿ ಪೇಜಿನಲ್ಲಿ (Marigdui Page) ಬಹಿರಂಗ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಕಾಪು (Kapu) ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು  ಇನ್ ಸ್ಟಾಗ್ರಾಂ ಪೇಜ್ ವಿರುದ್ಧ ದೂರು ನೀಡಿದ್ದಾರೆ. ಮಾರಿಗುಡಿ ಪೇಜ್ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು (BJP Activists) ಆಗ್ರಹಿಸಿದ್ದಾರೆ.

ಈ ಬೆದರಿಕೆ ಕುರಿತು ನ್ಯೂಸ್ 18 ಕನ್ನಡಕ್ಕೆ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪೇಜ್ ಬಗ್ಗೆ ತಲೆ‌ ಕೆಡಿಸಿಕೊಳ್ಳಲ್ಲ. ಆದರೆ ನನ್ನ ತಲೆಗೆ ಬೆಲೆ ಕಟ್ಟಿದವನ ಯಾರೆಂದು ಗೊತ್ತಾದರೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

ಬೆದರಿಕೆ ಹಾಕಿದವರು ಯಾರೆಂದು ಗೊತ್ತಿಲ್ಲ

ನನಗೆ ಬೆದರಿಕೆ ಹಾಕಿದವ ಯಾರು ಎಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ನಾನು ದುಡಿದು ತಿನ್ನುವವನು. ನಾನು ದೇಶ ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಹಾಗೂ ಮುಂದೆ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  Karnataka Politics: ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ; ‘ಮೂರು ಪಕ್ಷಗಳಲ್ಲಿ ಪ್ರಾಮಾಣಿಕರೇ ಅಸ್ಪೃಶ್ಯರು’

ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ದೇವರಿಗೆ ಸರಿಯಾಗಿ ಹೋರಾಟ ಮಾಡಿದ್ದೇನೆ. ಹಿಜಾಬ್ ವಿಚಾರವಾಗಿ ಬೆದರಿಕೆ ಹಾಕಲಿ ಹಾಕದೆ ಇರಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಇಂತಹ ಬೆದರಿಕೆಯಿಂದ ನನ್ನ ವೇಗಕ್ಕೆ ತಡೆಯಾಗುತ್ತೆ ಎನಿಸಿದ್ದರೆ ಆ ಆಲೋಚನೆ ಬದಿಗಿಡಿ ಎಂದು ಪೋಸ್ಟ್ ಮಾಡಿದವರಿಗೆ ತಿರುಗೇಟು ನೀಡಿದರು.

ಗನ್ ಮ್ಯಾನ್ ಕೇಳುವ ಪ್ರಮೇಯವೇ ಇಲ್ಲ

ಇಂತಹ ಬೆದರಿಕೆ ಹಿನ್ನೆಲೆ ಗನ್ ಮ್ಯಾನ್ ಕೇಳುವ ಪ್ರಮೇಯ ಇಲ್ಲ. ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು. ಸಾಮಾಜಿಕ ‌ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್ ಗಳಿಂದ ನಾನು ಹೆದರಿ ಮನೆಯಲ್ಲಿ ಕೂರುವವನಲ್ಲ ಎಂದು ಗುಡುಗಿದರು.

ಮಾರಿಗುಡಿ ಪೇಜ್ ಹಿಂದೆ ಇರೋರನ್ನ ಪತ್ತೆ ಮಾಡಬೇಕು

ಹೊರ ರಾಜ್ಯ ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು. ಆದರೆ ನಮ್ಮ ಜಿಲ್ಲೆಯಲ್ಲಿದ್ದು ಸಂದೇಶ ರವಾನಿಸುವವರನ್ನ ಪತ್ತೆ ಹಚ್ಚುವ ಕೆಲಸ‌ ಆಗಬೇಕು. ಇಂತಹ ಪೇಜ್ ಗಳೊಂದಿಗೆ ತೊಡಗಿಸಿಕೊಂಡವರು ನಮ್ಮ ಊರಿನಲ್ಲಿದ್ದರೆ ಮಾರಕ. ಇಂತವರಿಂದ ನಮ್ಮ ಕಾರ್ಯಕರ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತೆ. ಮನೆಯಲ್ಲೇ‌ ಮನಸ್ಥಾಪ ಸೃಷ್ಟಿಯಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಬಹುದು. ಹೀಗಾಗಿ ಮಾರಿಗುಡಿ ಪೇಜ್ ಹಿಂದೆ ಇರುವವರನ್ನ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.

ಬೆದರಿಕೆ ಹಾಕಿದವರಿಗೆ ಎಚ್ಚರಿಕೆ

ಜಮ್ಮು ಕಾಶ್ಮೀರದ ಉಗ್ರಗಾಮಿ ಬೆಂಗಳೂರಿನಲ್ಲಿ ಹತ್ತು ವರ್ಷದ ಹಿಂದೆ ರಿಕ್ಷಾ ಬಿಡುತ್ತಿದ್ದ. ಹೀಗೆ ಗಡ್ಡ ಬಿಟ್ಟು ಟೋಪಿ ಹಾಕಿ ನಾಟಕ ಮಾಡುವವರು ಇಂತಹ ಪೇಜ್ ಹಿಂದೆ ಇರಬಹುದು. ಹಿಂದುಗಳಿಗೆ ಬೆದರಿಕೆ ಹಾಕಿ ಅವರ ವೇಗ ನಿಯಂತ್ರಣ ಮಾಡಿ ಅವರ ಬೇಳೆ ಬೇಯಿಸುವವರು ಇರಬಹುದು ಎಂದು ಯಶ್ ಪಾಲ್ ಅನುಮಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಉಡುಪಿ ಜಿಲ್ಲೆ ಸಂಘಟನಾತ್ನಕವಾಗಿದೆ ಯಾವ ಸಂದರ್ಭದಲ್ಲಿ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ. ಜೀವ ಬೆದರಿಕೆ ಹಾಕಿದವರಿಗೆ ನ್ಯೂಸ್ 18 ಕನ್ನಡ ಮೂಲಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದರು ,
Published by:Mahmadrafik K
First published: