• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress ಅಧಿಕಾರಕ್ಕೆ ಬರ್ತಿದ್ದಂತೆ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ: ಕೆಎಸ್ ಈಶ್ವರಪ್ಪ

Congress ಅಧಿಕಾರಕ್ಕೆ ಬರ್ತಿದ್ದಂತೆ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ: ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ, ಮಾಜಿ ಸಚಿವ

ಕೆಎಸ್ ಈಶ್ವರಪ್ಪ, ಮಾಜಿ ಸಚಿವ

KS Eshwarappa: ಶಿವಮೊಗ್ಗ ಮತದಾರರು ಯಾವುದೇ ಜಾತಿಯ ಒತ್ತಡಕ್ಕೆ ಮಣಿಯದೆ ಗೆಲುವು ನೀಡಿದ್ದಾರೆ. ಇದಕ್ಕೆ ಕಾರಣ ನಮ್ಮ ಸಂಘಟನೆ.

  • Share this:

ಶಿವಮೊಗ್ಗ: ನಗರದ ಬಿಜೆಪಿ ಕಚೇರಿಯಲ್ಲಿ (BJP) ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ (Former Minister KS Eshwarappa), ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆರೋಪಿಸಿದ್ದಾರೆ.  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದೆ. ಬೆಳಗಾವಿಯ (Belagavi) ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೇ ದೂರು ನೀಡಿದ್ದಾರೆ. ಶಿರಸಿಯಲ್ಲೂ (Sirsi) ಹಸಿರು ಬಾವುಟ ಹಾರಾಡಿದೆ ಎಂದು ಹೇಳಿದರು.


ರಾತ್ರಿ ಬೆದರಿಕೆ ಕರೆ


ನಿನ್ನೆ ರಾತ್ರಿ ಕಝಕಸ್ತಾನದಿಂದ ರಾತ್ರಿ 12 ಗಂಟೆಗೆ. ನನಗೆ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದ್ದೇನೆ. ನಾನು ಕಾಲ್ ರಿಸೀವ್ ಮಾಡಿಲ್ಲ. ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೆ. ಈ ಹಿಂದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರನ್ನು ಬಂಧಿಸಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಎಂದು ಗೊತ್ತಾಗಿತ್ತು ಆತ ಶಾಹೀರ್ ಶೇಖ್ . ಆತನ ಡೈರಿಯಲ್ಲಿ ನನ್ನ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನನಗೆ +7 (678)815 415 ನಂಬರ್ ನಿಂದ ಕರೆ ಬಂದಿದೆ.


threat call to former minister ks eshwarappa mrq
ಕೆಎಸ್ ಈಶ್ವರಪ್ಪ, ಮಾಜಿ ಸಚಿವ


ಬಿಜೆಪಿಗೆ ಮತದಾರರ ಬೆಂಬಲ


ಶಿವಮೊಗ್ಗ ಮತದಾರರು ಯಾವುದೇ ಜಾತಿಯ ಒತ್ತಡಕ್ಕೆ ಮಣಿಯದೆ ಗೆಲುವು ನೀಡಿದ್ದಾರೆ. ಇದಕ್ಕೆ ಕಾರಣ ನಮ್ಮ ಸಂಘಟನೆ. ಪ್ರತಿಬೂತ್ ನಲ್ಲೂ ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ಅಭಿವೃದ್ಧಿ ಕೆಲಸ ನೋಡಿ ಮತ ನೀಡಿದ್ದಾರೆ. ನಮ್ಮ ನಾಯಕರು ಬಂದು ಪ್ರಚಾರ ಮಾಡಿದ್ದು ಹೆಚ್ಚು ಅನುಕೂಲವಾಗಿದೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿಗೆ ಮತದಾರರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.


ಕಳೆದ ಬಾರಿ ಶೇ.36 ರಷ್ಟು ಮತ ಬಂದಿತ್ತು. ಈ ಬಾರಿ ಶೇ.36.4 ರಷ್ಟು ಮತ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮತದಾರರು ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಕಾವಲು ನಾಯಿ ರೀತಿಯಲ್ಲಿ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡುತ್ತೇವೆ ಎಂದರು.




ಸಿದ್ದರಾಮಯ್ಯ-ಡಿಕೆಶಿ ವಿರುದ್ಧ ವಾಗ್ದಾಳಿ


ಸಿದ್ದು-ಡಿಕೆಶಿ ಚುನಾವಣೆಗೆ ಮೊದಲು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದಿದ್ದರು. ಆದರೆ ಈಗ ಸಿದ್ದರಾಮಯ್ಯ ಪರವಾಗಿ ಕುರುಬರು ಹಾಗೂ ಡಿ.ಕೆ.ಶಿವಕುಮಾರ್ ಪರವಾಗಿ ಒಕ್ಕಲಿಗರು ಲಾಬಿ ಮಾಡುತ್ತಿದ್ದಾರೆ. ಇದರಿಂದ  ಸಿದ್ದು ಮತ್ತು ಡಿಕೆಶಿ ಜಾತಿವಾದ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Chikkaballapur: ಚುನಾವಣೆಯಲ್ಲಿ ಸೋಲು; ಆತ್ಮಹತ್ಯೆಗೆ ಶರಣಾದ ಸುಧಾಕರ್ ಅಭಿಮಾನಿ


ಜೆಡಿಎಸ್ ಅಭ್ಯರ್ಥಿ ವಿರುದ್ಧ ಚಿಕ್ಕಮಗಳೂರಿನ ಭೋಜೇಗೌಡ ಕೆಲಸ ಮಾಡಿದ್ದು ಇಂದು ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದಾರೆ. ಇಂದು ಲಜ್ಜೆಗೇಡಿ ವರ್ತನೆಯಾಗಿದ್ದು ಜೆಡಿಎಸ್ ನಾಯಕರು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.

top videos
    First published: