ಆಪರೇಷನ್ ಕಮಲಕ್ಕೆ ಬಿಜೆಪಿಯವರು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ; ಮಾಜಿ ಶಾಸಕ ಅನಿಲ್ ಲಾಡ್​​ ಆರೋಪ

ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆ ಅಂತ ಆರೋಪ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಬಹುಮತ ಸಾಬೀತು ಮಾಡುವ ವಿಚಾರದಲ್ಲಿ ರಾಜ್ಯಪಾಲರ ನಡೆ ಅವರ ಹುದ್ದೆಗೆ ಗೌರವ ತಂದುಕೊಡುವಂತಹದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದೆ

G Hareeshkumar | news18
Updated:July 20, 2019, 7:29 PM IST
ಆಪರೇಷನ್ ಕಮಲಕ್ಕೆ ಬಿಜೆಪಿಯವರು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ; ಮಾಜಿ ಶಾಸಕ ಅನಿಲ್ ಲಾಡ್​​ ಆರೋಪ
ಮಾಜಿ ಶಾಸಕ ಅನಿಲ್​​ ಲಾಡ್
  • News18
  • Last Updated: July 20, 2019, 7:29 PM IST
  • Share this:
ಬಳ್ಳಾರಿ(ಜುಲೈ 20) : ನಮ್ಮ ಪಕ್ಷದ ಶಾಸಕರಿಗೆ ಕೋಟಿಗಟ್ಟಲೇ ಹಣದ ಆಮಿಷ ಒಡ್ಡಿ ಬಿಜೆಪಿಯವರು ಕರೆದೊಯ್ದಿದ್ದಾರೆ. ಆಪರೇಷನ್​ ಕಮಲಕ್ಕಾಗಿಯೇ ಅವರು ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು  ಮಾಜಿ ಶಾಸಕ ಅನಿಲ್ ಲಾಡ್ ಆರೋಪಿಸಿದ್ದಾರೆ.

ಬಿಜೆಪಿ ನಾಯಕರೇ ನಮ್ಮ ಶಾಸಕರನ್ನು ಮುಂಬೈನಲ್ಲಿ ಇಟ್ಟಿದ್ದಾರೆ. ನಮ್ಮ ಸಚಿವ ಡಿ ಕೆ ಶಿವಕುಮಾರ್​​ ಅವರಿಗೆ ಮುಂಬೈ ಹೋಟೆಲ್ ಒಳಗೆ ಹೋಗಲು ಬಿಡಲಿಲ್ಲ. ತಾಯಿ ಪಕ್ಷದಲ್ಲಿ ಸಿಗುವ ಮರ್ಯಾದೆ ನಿಮಗೆ ಬೇರೆ ಕಡೆ ಸಿಗಲ್ಲ ಎಂದು ಅತೃಪ್ತರ ಶಾಸಕರಿಗೆ ಹೇಳಿದರು. ಹಾಗೆಯೇ, ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರಾ ಬಗ್ಗೆ  ಹಾಗೂ ಸದನಕ್ಕೆ ಗೈರಾಗಿದ್ದರ ಬಗ್ಗೆ ನಾನು ಮಾತನಾಡೋಲ್ಲ. ಅವರನ್ನು ನಾನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆ ಅಂತ ಆರೋಪ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಬಹುಮತ ಸಾಬೀತು ಮಾಡುವ ವಿಚಾರದಲ್ಲಿ ರಾಜ್ಯಪಾಲರ ನಡೆ ಅವರ ಹುದ್ದೆಗೆ ಗೌರವ ತಂದುಕೊಡುವಂತಹದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

 ಅತೃಪ್ತರು ವಾಪಸ್​​ ಬಂದ್ರೆ ಗೆಲ್ಲುತ್ತೇವೆ; ಶಾಮನೂರು

ಇನ್ನು ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್​ನ ಮತ್ತೊಬ್ಬ ಹಿರಿಯ ಮುಖಂಡ, ಶಾಮನೂರು ಶಿವಶಂಕರಪ್ಪ, 'ಸೋಮವಾರ ಸಿಎಂ ವಿಶ್ವಾಸ ಮತಯಾಚಿಸಲಿದ್ದಾರೆ. ಅತೃಪ್ತರು ವಾಪಸ್ ಬಂದ್ರೆ ಗೆಲ್ಲುತ್ತೇವೆ. ಇಲ್ಲ ಅಂದ್ರೆ ಸೋಲುತ್ತೇವೆ. ಹೋದವರು ಸಗಣಿ ತಿಂದು ಹೋಗಿದ್ದಾರೆ. ಅವರೇನು ಸಾಮೂಹಿಕವಾಗಿ ಹೋಗಿಲ್ಲ. ಬಿಜೆಪಿಯವರೇ ಕರೆದುಕೊಂಡು ಹೋಗಿದ್ದಾರೆ. ಎಲ್ಲರನ್ನು ತೃಪ್ತಿಪಡಿಸುವುದು ಅಸಾಧ್ಯ. 16 ಜನರಿಗೂ ಮಂತ್ರಿಗಿರಿ ಕೊಡುವುದು ಸಾಧ್ಯವಿಲ್ಲ' ಎಂದರು.

ಇದನ್ನೂ ಓದಿಸೋಮವಾರವಾದರೂ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಿ; ಮೈತ್ರಿ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ

ಶಾಸಕರು ಓಡಿ ಹೋಗುತ್ತಾರೆಂದು ಬಿಜೆಪಿ ಕೂಡಿ ಹಾಕಿದೆ. ಮುಂದೆ ಬಿಜೆಪಿ ಸರ್ಕಾರ ರಚನೆಯಾದರೆ ಬಹಳ ದಿನ ಉಳಿಯುವುದಿಲ್ಲ. ಕುದುರೆ ವ್ಯಾಪಾರ ಹೀಗೆ ಮುಂದುವರಿಯಲಿದೆ. ಈಗ ಬಿಜೆಪಿಯವರು ಮಾಡಿದ್ದಾರೆ. ಮುಂದೆ ಇವರು ಮಾಡುತ್ತಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
First published:July 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ