Snails: ಈ ಊರಿನಲ್ಲಿ ಎಲ್ಲಿ ನೋಡಿದ್ರೂ ಶಂಖದ ಹುಳುಗಳು; ಇವುಗಳ ಉಪಟಳಕ್ಕೆ ಬೇಸತ್ತ ದೇವಿನಗರದ ನಿವಾಸಿಗಳು

ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು. ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ.

ಶಂಖದ ಹುಳು

ಶಂಖದ ಹುಳು

  • Share this:
ಈ ಊರು ತುಂಬಾ ಬರೇ ಹುಳುಗಳು (Snail). ಅಂಗಳ, ಹಿತ್ತಲು ,ಮರ,  ಗಿಡ, ಬಳ್ಳಿ ಹೂವು ಎಲ್ಲಿ ಕಣ್ಣಾಡಿಸಿದರೂ ಅದೇ ಹುಳುಗಳ ರಾಶಿ. ಕೆ.ಜಿಗಟ್ಟಲೆ ಹುಳುಗಳನ್ನು ನಾಶಮಾಡಿದರೆ ಮರುದಿನ ಲೋಡುಗಟ್ಟಲೆ ಹುಳು ಮನೆಯಂಗಳದಲ್ಲಿ ಬಂದುಬೀಳುತ್ತಿದೆ. ಉಡುಪಿ ಜಿಲ್ಲೆ , ಪರ್ಕಳ ದೇವಿ ನಗರದ (Parkaladevi, udupi) ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿಹೋಗಿದ್ದಾರೆ. ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ ವಾರ್ಡಿನ ನಿವಾಸಿಗಳಿಗೆ ಮತ್ತೊಮ್ಮೆ ವಿಚಿತ್ರ ಹುಳುವಿನ ಭಾಧೆ ಶುರುವಾಗಿದೆ. ವಿದೇಶದಿಂದ ಆಮದಾಗಿರುವ ಮಣ್ಣು ಮರಳಿನ ಜೊತೆಗೆ ಬಂದಿರುವ ಈ ಬಸವನ ಹುಳುವಿನ (Snails) ಸಂತತಿ ಇದೀಗ ಈ ಭಾಗದ ಜನರ ನಿದ್ದೆ ಗೆಡಿಸಿದೆ. ರಕ್ತಬೀಜಾಸುರ ನಂತೆ ನಿರಂತರ ಸಂತಾನೋತ್ಪತ್ತಿಯಿಂದ ಊರಿನ ಯಾವ ಮೂಲೆಗೆ ಹೋದರೂ ಬರೇ ಹುಳುಗಳೇ ಕಾಣಿಸುತ್ತವೆ.

ಹಾಲಿವುಡ್ ಸಿನಿಮಾಗಳಲ್ಲಿ ರಾಶಿರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿರಾಶಿ ಕಾಣಸಿಗುತ್ತಿದೆ.

ಹುಳುವಿನ ಬಾಧೆ

ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ. ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆ ಗಂಟಿ ಮಲಗಿಬಿಡುತ್ತವೆ. ಇಲ್ಲವೇ ಭೂಗತವಾಗಿ ಕಣ್ಮರೆಯಾಗುತ್ತವೆ. ಆದರೆ ರಾತ್ರಿಯಾದರೆ ಸಾಕು ಆಕ್ಟಿವ್ ಆಗ್ತಾವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು.. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ.

ಇದನ್ನೂ ಓದಿ:  Kodagu Landslide: ಮಡಿಕೇರಿ ನಗರದ 6 ಪ್ರದೇಶಗಳಲ್ಲಿ ಈ ಬಾರಿಯೂ ಭೂಕುಸಿತವಾಗುವ ಆತಂಕ

ಇವುಗಳ ಜೀವಿತಾವಧಿ 3-5 ವರ್ಷ

ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು. ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5ವರ್ಷಗಳಾಗಿವೆ.

ಮಳೆಗಾಲದಲ್ಲಿ  ಎಲೆಗಳು, ಕಾಂಡ, ಹಣ್ಣು ಹಾಗೂ ಹೂವು ಗಳನ್ನು ತಿಂದು ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎನ್ನುತ್ತಾರೆ ಕೀಟ ತಜ್ಞರು. ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೆ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು.

ಹುಳುಗಳ ರಾಶಿಗೆ ಜನರು  ಹೈರಾಣು

ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಿಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿ ಯಾಗಿದೆ. ಮೈಯೆಲ್ಲಾ ಅಂಟು,  ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶ ಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ.ಮನೆಗಳ ಗೋಡೆ, ತೆಂಗಿನಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ. ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ.

ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿ ಉಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ:  Bengaluru Rain: ರಾಜಕಾಲುವೆಯಲ್ಲಿ ಕೊಚ್ಚಿ ಹೋದ 24 ವರ್ಷದ ಯುವಕ

ಸ್ಥಳೀಯರ ಮನವಿಗೆ ಸ್ಪಂದಿಸದ ನಗರಸಭೆ

ಈ ಬಗ್ಗೆ ನಗರಸಭೆಗೆ ಪ್ರತೀ ಮಳೆಗಾಲದಲ್ಲಿ ಮನವಿ ನೀಡಿದ್ರೂ ನಗರಸಭೆ ಸ್ಪಂದಿಸುತ್ತಿಲ್ಲ. ಇನ್ನಾದರೂ ಸ್ಪಂದಿಸಿ ಹುಳ ಭಾದೆಯಿಂದ ಮುಕ್ತಿ ನೀಡಲಿ ಅನ್ನೋದು ಸ್ಥಳೀಯರ ಆಗ್ರಹ. ಒಟ್ಟಾರೆ ದೇವಿನಗರದ ನಿವಾಸಿಗಳು ಪ್ರತಿದಿನ ಗೋಣಿ ತುಂಬಾ ಹುಳುಗಳನ್ನು ತೆಗೆದರೂ, ಮತ್ತೆ ಮತ್ತೆ ಬಂದು ರಾಶಿ ಬೀಳುತ್ತಿದೆ.ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಔಷಧಿ ಸಿಂಪಡಿಸುವ ಮೂಲಕ ಈ ಹುಳುಬಾಧೆ ಇಂದ ಜನರಿಗೆ ಮುಕ್ತಿ ನೀಡಬೇಕಾಗಿದೆ.
Published by:Mahmadrafik K
First published: