Namaste Trump : ಟ್ರಂಪ್​ ಔತಣಕೂಟಕ್ಕೆ ಬಿಎಸ್​ವೈಗೂ ಆಹ್ವಾನ; ಬಜೆಟ್​ ಹಿನ್ನೆಲೆ ಸಿಎಂ ದೆಹಲಿ ಪ್ರವಾಸ ಅನುಮಾನ

Namaste Trump : ಔತಣಕೂಟಕ್ಕೆ ರಾಷ್ಟ್ರಪತಿಗಳಿಂದ ಆಹ್ವಾನವಿದೆ. ಆದರೆ, ನನಗೆ ನಾಳೆ ಹಲವು ಕಾರ್ಯಕ್ರಮಗಳು ಇರುವ ಹಿನ್ನೆಲೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಬಗ್ಗೆ ಅಂತಿಮವಾಗಿ ತೀರ್ಮಾನಿಸಿಲ್ಲ

ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

  • Share this:
ಶಿವಮೊಗ್ಗ(ಫೆ. 24): ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿರುವ ಟ್ರಂಪ್​ ಸ್ವಾಗತಕ್ಕೆ ದೇಶ ಸಜ್ಜುಗೊಂಡಿದೆ. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ರಂಪ್​ ರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಿದ್ದಾರೆ. ಇದೇ ವೇಳೆ ಟ್ರಂಪ್​ ಔತಣಕೂಟಕ್ಕೆ ಯಡಿಯೂರಪ್ಪ ಸೇರಿದಂತೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ. 

ಇಂದು ವಿವಿಧ ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗಿಯಾಗಲಿರುವ ಟ್ರಂಪ್​ ಅವರಿಗಾಗಿ ನಾಳೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಿಗೂ ಆಹ್ವಾನಿಸಲಾಗಿದೆ. ಸಿಎಂ ಯಡಿಯೂರಪ್ಪ ಅವರಿಗೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ರಾಷ್ಟ್ರಪತಿ ಕಚೇರಿಯಿಂದ ಕರೆ ಬಂದಿದೆ.

ಈ ಕುರಿತು ಮಾತನಾಡಿದ ಯಡಿಯೂರಪ್ಪ. ಔತಣಕೂಟಕ್ಕೆ ರಾಷ್ಟ್ರಪತಿಗಳಿಂದ ಆಹ್ವಾನವಿದೆ. ಆದರೆ, ನನಗೆ ನಾಳೆ ಹಲವು ಕಾರ್ಯಕ್ರಮಗಳು ಇರುವ ಹಿನ್ನೆಲೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಬಗ್ಗೆ ಅಂತಿಮವಾಗಿ ತೀರ್ಮಾನಿಸಿಲ್ಲ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷರ ಭೇಟಿ ಸಾಮಾನ್ಯ ವಿಷಯವಲ್ಲ. ಇದರಿಂದ ರಾಷ್ಟ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ದ್ವಿ ರಾಷ್ಟ್ರಗಳ ಸಂಬಂಧವೃದ್ಧಿಗೆ ಸಹಾಯಕವಾಗಲಿದೆ ಎಂದರು.

ಇದನ್ನು ಓದಿ: Donald Trump Team: ಭಾರತಕ್ಕೆ ಬರುತ್ತಿರುವ ಟ್ರಂಪ್ ನಿಯೋಗದಲ್ಲಿ ಕನ್ನಡಿಗ ಅಜಿತ್ ಪೈ

ಮಾರ್ಚ್​ 5ರಂದು ರಾಜ್ಯ ಬಜೆಟ್​ ಮಂಡನೆಯಾಗಬೇಕಾಗಿದ್ದು, ಸಿಎಂ ಬಿಎಸ್​ ಯಡಿಯೂರಪ್ಪ ಅವರು ಅದರಲ್ಲಿ ತಲ್ಲೀನರಾಗಿದ್ದಾರೆ. ವಿವಿಧ ಇಲಾಖೆಗಳೊಂದಿಗೆ ಸಭೆ ನಿರಂತರ ಸಭೆ ನಡೆಸುತ್ತಿದ್ದು, ಈ ಹಿನ್ನೆಲೆ ಅವರು ದೆಹಲಿಗೆ ತೆರಳುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.
First published: