JDS Fan: ಜೆಡಿಎಸ್‌ಗೆ ಮತಹಾಕಿ, ಫ್ರೀ ಆಗಿ ಹೇರ್‌ಕಟ್, ಶೇವಿಂಗ್ ಮಾಡಿಸ್ಕೊಳ್ಳಿ! ಎಚ್‌ಡಿಕೆ ಅಭಿಮಾನಿಯಿಂದ ಆಫರ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕುಡಿಯನೂರು ಗ್ರಾಮದ ಕ್ಷೌರಿಕ ವೃತ್ತಿ ಮಾಡುವ ರಾಜೇಶ್, ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಅವರ ಅಭಿಮಾನಿಯಾಗಿದ್ದಾರೆ. ರಾಜೇಶ್ ಅವರು ರಾಮೇಗೌಡ ಗೆಲುವಿಗಾಗಿ, ತಮ್ಮ ಕೈಲಾದಷ್ಟು ಸಹಕಾರ ನೀಡಲು ತಮ್ಮ ಸಲೂನ್ ಶಾಪ್‌ನಲ್ಲಿ ವಿಭಿನ್ನವಾದ ಕ್ಯಾಂಪೇನ್ ಆರಂಭಿಸಿದ್ದಾರೆ‌.

ಜೆಡಿಎಸ್ ಅಭಿಮಾನಿಯ ಶಾಪ್

ಜೆಡಿಎಸ್ ಅಭಿಮಾನಿಯ ಶಾಪ್

  • Share this:
ಮಾಲೂರು, ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆಗೆ (State Assembly Election) ಇನ್ನೇನು 8 ರಿಂದ 10 ತಿಂಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಹಾಲಿ, ಮಾಜಿ ಶಾಸಕರು (Ex MLA’s) ಮತ್ತೊಮ್ಮೆ ಸಮಾಜಸೇವೆಗೆ (Social Service) ಮರಳಿದ್ದಾರೆ. ಕೋಲಾರ (Kolar) ಜಿಲ್ಲೆಯಲ್ಲೂ ವಿಧಾನಸಭೆ ಚುನಾವಣೆ ಪ್ರಚಾರ ಬಹಿರಂಗವಾಗಿ ಆರಂಭವಾಗದಿದ್ದರು, ಹಾಲಿ ಮಾಜಿ ಶಾಸಕರ ಕಾರ್ಯಕ್ರಮಗಳು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಕೋಲಾರ ಜಿಲ್ಲೆಯ ಜಿದ್ದಾಜಿದ್ದಿಯ ಮತಕ್ಷೇತ್ರ ಎಂದು ಹೆಸರುವಾಸಿಯಾಗಿರೊ ಮಾಲೂರು (Malur) ವಿಧಾನಸಭೆ ಕ್ಷೇತ್ರದಲ್ಲಿ ಮತ್ತೊಮ್ಮೆ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಮುಖಾ-ಮುಖಿ ಆಗಲಿದ್ದಾರೆ, ಆದರೆ ಇಬ್ಬರಿಗೆ ಪೈಪೋಟಿ ನೀಡಲು ಜೆಡಿಎಸ್ ಅಭ್ಯರ್ಥಿ (JDS Candidate) ರಾಮೇಗೌಡ ತಮ್ಮದೇ ಆದ ರಣತಂತ್ರ ರೂಪಿಸಿಕೊಂಡು ಈಗಾಗಲೇ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾಮೇಗೌಡರ ಗೆಲುವಿಗೆ ಪಕ್ಷದ ಕಾರ್ಯಕರ್ತರು ವಿಭಿನ್ನ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ, ಕೋಲಾರದ ಮಾಲೂರಿನಲ್ಲಿ ಜೆಡಿಎಸ್ ಅಭಿಮಾನಿಯೊರ್ವ (Fan) ತಮ್ಮ ಹೇರ್ ಸಲೂನ್ ಶಾಪ್ (Hair Saloon) ಅನ್ನು ಜೆಡಿಎಸ್ ಪಕ್ಷದ ಕಚೇರಿಯಂತೆ ಸಿಂಗರಿಸಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Deve Gowda) ಭಾವಚಿತ್ರಗಳನ್ನು (Photos) ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಗೋಡೆ ಮೇಲೆ ಎಚ್‌ಡಿ ಕುಮಾರಸ್ವಾಮಿ ಸಾಧನೆಯ ವಿವರ

ಮಾಲೂರ ತಾಲೂಕಿನ ಕುಡಿಯನೂರು ಗ್ರಾಮದ ನಿವಾಸಿ ರಾಜೇಶ್ ಎನ್ನುವರು ನೂತನವಾಗಿ ಆರ್.ಜಿ. ಹೇರ್ ಸಲೂನ್ ಶಾಪ್ ಅನ್ನು ತೆರೆದಿದ್ದು, ಇದನ್ನ ಜೆಡಿಎಸ್ ಅಭ್ಯರ್ಥಿ ರಾಮೇಗೌಡ  ಉದ್ಘಾಟಸಿ ಚಾಲನೆ ನೀಡಿದರು. ಸಲೂನ್ ಶಾಪ್ ತುಂಬೆಲ್ಲಾಈ ಹಿಂದೆ ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜಾರಿಗೆ ತಂದ ಯೋಜನೆಗಳು,  ಮುಂಬರುವ ಚುನಾವಣೆಗೆ ಘೋಷಿಸಿರುವ ಪಂಚರತ್ನ ಯೋಜನೆಯ ಮಾಹಿತಿಯನ್ನ ವಿವರವಾಗಿ ಗೋಡೆ ಬರಹದಲ್ಲಿ ಹಾಕಲಾಗಿದೆ.

ಹೇರ್ ಕಟ್ ಸಲೂನ್


ಹೇರ್ ಕಟಿಂಗ್, ಶೇವಿಂಗ್ ಫ್ರೀ

ಇನ್ನು  ರಾಜೇಶ್ ಸಲೂನ್ ಶಾಪ್ ನಲ್ಲಿ ಹಿರಿಯ ನಾಗರಿಕರಿಗೆ, ಸೈನಿಕರಿಗೆ, ವೈದ್ಯರಿಗೆ ಹಾಗು  ಸಮಾಜ ಸೇವಕರಿಗೆ ಉಚಿತವಾಗಿ ಹೇರ್ ಕಟಿಂಗ್ ಮಾಡುವುದಾಗಿ ರಾಜೇಶ್ ಘೋಷಿಸಿದ್ದಾರೆ. ಗ್ರಾಮದ ಯುವಕರು ಜೆಡಿಎಸ್  ಗೆ ಬೆಂಬಲ ನೀಡಿದರು ಉಚಿತ ಕ್ಷೌರಿಕ ಸೇವೆಯನ್ನ ನೀಡುವುದಾಗಿ ತಿಳಿಸಿದ್ದಾರೆ.

ಶಾಪ್ ಉದ್ಘಾಟನಾ ಕಾರ್ಯಕ್ರಮ


ಇದನ್ನೂ ಓದಿ: BJP ಪಕ್ಷಕ್ಕೆ ದೇಣಿಗೆ ಕೊಡುವರಿಗೆ ಶಕ್ತಿ ತುಂಬಿದೆ, ಇಬ್ಬರ ಭೇಟಿ ಒಳ್ಳೆಯದು ಅಲ್ಲವೇ? HD Kumaraswamy

ಆರ್ಥಿಕ ಸಹಾಯಕ್ಕೆ ಮುಂದೆ ಬಂದ ಜೆಡಿಎಸ್ ಕಾರ್ಯಕರ್ತರು

ರಾಜೇಶ್ ಅವರ ಕಾರ್ಯಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಕೆಲ ಜೆಡಿಎಸ್ ಯುವ ಮುಖಂಡರು ತಿಳಿಸಿದ್ದಾರೆ., ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ ರಾಮೇಗೌಡರಿಗೆ ಪಟಾಕಿ ಸಿಡಿಸಿ ಹೂವಿವ ಹಾರ ಹಾಕಿ ಅದ್ದೂರಿಯಾಗಿ ಜೆಡಿಎಸ್ ಕಾರ್ಯಕರ್ತರು ಸ್ವಾಗತ ಕೋರಿದರು.

ಜೆಡಿಎಸ್ ಕೊಡುಗೆಯನ್ನು ಬಿಂಬಿಸುವ ಬರಹ


ಇದನ್ನೂ ಓದಿ: Karnataka Politics: ಸಿಎಂ ಆಗಲು ಬ್ಯಾಕ್ ಗ್ರೌಂಡ್ ಚೆನ್ನಾಗಿರಬೇಕು: ಡಿಕೆಶಿಗೆ HDK ಟಾಂಗ್

“ಎಚ್‌ಡಿಕೆ ಸಿಎಂ ಆಗಲು ಇನ್ನು ಒಂದು ವರ್ಷ ಬಾಕಿ ಇದೆ”

ಹೇರ್ ಕಟ್ ಸಲೂನ್‌ಗೆ ಚಾಲನೆ ನೀಡಿದ ನಂತರ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ರಾಮೇಗೌಡ, ಇಂದಿನ ಯುವ ಪೀಳಿಗೆ ಎಲ್ಲಾ ರಂಗದಲ್ಲಿ ಭಾಗಿಯಾಗಿ ಉತ್ತಮ ಸಮಾಜ ಕಟ್ಟಲು ಎಲ್ಲರು ಮುಂದಾಗಬೇಕಿದೆ ಎಂದಿದ್ದು, ರಾಜ್ಯದಲ್ಲಿ ಯುವ ಪೀಳಿಗೆ ಕುಮಾರಸ್ವಾಮಿ ಅವರನ್ನ ಸಿಎಂ ಆಗಿ ನೋಡಲು ಇನ್ನೊಂದು ವರ್ಷ ಬಾಕಿಯಿದೆ. ಕುಮಾರಸ್ವಾಮಿ ಸಿಎಂ ಆದರೆ ಚುನಾವಣೆ ಪೂರ್ವದಲ್ಲಿ ಹೇಳಿರುವಂತೆ ಜನಪರ ಪಂಚರತ್ನ ಯೋಜನೆಗಳನ್ನು ಒಂದು ವರ್ಷದಲ್ಲಿ ಜಾರಿಗೆ ತರುವುದಾಗಿ ಹೇಳಿದ್ದು,  ಜೊತೆಗೆ ರಾಜೇಶ್ ಅವರ  ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Published by:Annappa Achari
First published: