ಗೆಲುವನ್ನ ಸಹಿಸದವ್ರಿಗೆ ಅಸೂಯೆ ಇರುತ್ತೆ ಆದರೆ, ಅದು ಮುಗಿಸುವ ಹಂತಕ್ಕೆ ಹೋಗ್ಬಾರ್ದು; ಎನ್.ಎ. ಹ್ಯಾರಿಸ್

ತಮಿಳಿಗರೇ ಹೆಚ್ಚಿರುವ ಬೆಂಗಳೂರಿನ ವನ್ನಾರ್ ಪೇಟೆಯಲ್ಲಿ ಬುಧವಾರ ರಾತ್ರಿ ದಿವಂಗತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಕುಳಿತಿದ್ದ ಜಾಗದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.

ಶಾಸಕ ಎನ್.ಎ. ಹ್ಯಾರಿಸ್

ಶಾಸಕ ಎನ್.ಎ. ಹ್ಯಾರಿಸ್

  • Share this:
ಬೆಂಗಳೂರು (ಜನವರಿ 22); ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಸೋತವರಿಗೆ ಅಸೂಯೆ ಇರುತ್ತೆ ನಿಜ. ಆದರೆ, ಅದು ಜೀವವನ್ನೇ ತೆಗೆಯುವ ಹಂತಕ್ಕೆ ಹೋಗಬಾರದು. ನನ್ನ ಜೀವ ತೆಗೆಯಲು ಮುಂದಾದವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಶಾಂತಿ ನಗರ ಶಾಸಕ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ.

ತಮಿಳಿಗರೇ ಹೆಚ್ಚಿರುವ ಬೆಂಗಳೂರಿನ ವನ್ನಾರ್ ಪೇಟೆಯಲ್ಲಿ ಬುಧವಾರ ರಾತ್ರಿ ದಿವಂಗತ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಸಹ ಭಾಗವಹಿಸಿದ್ದರು. ಈ ವೇಳೆ ಹ್ಯಾರಿಸ್ ಕುಳಿತಿದ್ದ ಜಾಗದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.

ತಕ್ಷಣ ಶಾಸಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ, ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ತೀವ್ರ ತನಿಖೆಗೂ ಮುಂದಾಗಿದೆ. ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗುವ ವೇಳೆ ಮಾತನಾಡಿರುವ ಹ್ಯಾರಿಸ್,

“ನಾನು ಈಗ ಆರೋಗ್ಯವಾಗಿದ್ದೇನೆ. ಕಾರ್ಯಕರ್ತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ನಿನ್ನೆ ಸ್ಪೋಟಗೊಂಡ ವಸ್ತು ಪಟಾಕಿ ತರ ಇರಲಿಲ್ಲ. ರೌಂಡ್ ಬಾಲ್ ತರ ಇತ್ತು. ಸ್ಪೋಟಗೊಂಡ ವಸ್ತುವನ್ನು ಪರಿಶೀಲನೆಗೆ ವಿಧಿ ವಿಜ್ಜಾನ ಇಲಾಖೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೃಹ ಸಚಿವರು ಕರೆ ಮಾಡಿ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ನನಗೆ ರಾಜಕೀಯವಾಗಿ, ವೈಯಕ್ತಿವಾಗಿ ಶತೃಗಳಿಲ್ಲ.ಯಾರ ಬಗ್ಗೆಯೂ ಅನುಮಾನವೂ ಇಲ್ಲ. ಆದರೆ, ರಾಜಕೀಯ ಅಸೂಯೆಗಾಗಿ ಹೀಗೆ ಕೊಲ್ಲುವ ಹಂತಕ್ಕೆ ಮುಂದುವರೆಯುವುದು ತಪ್ಪು. ಹೀಗಾಗಿ ಈ ಘಟನೆ ಕುರಿತು ತೀವ್ರ ತನಿಖೆ ಆಗಲಿ” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಪ್ರಕರಣ; ಇಂದು ಶಾಸಕ ಹ್ಯಾರಿಸ್ ಡಿಸ್ಚಾರ್ಜ್​ ಸಾಧ್ಯತೆ
First published: