HOME » NEWS » State » THOSE WHO HAVE MADE SACRIFICES THEY WILL SOON GET RECEIVE GOOD NEWS SAYS RAMESH JARKIHOLI RH

ತ್ಯಾಗ ಮಾಡಿ ಬಂದವರಿಗೆಲ್ಲ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ; ಸಚಿವ ರಮೇಶ್ ಜಾರಕಿಹೊಳಿ

ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದರು. ಈ ವೇಳೆ ರಮೇಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಜಾರಕಿಹೊಳಿ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿರಲಿಲ್ಲ. ಮೂರು ದಿನ ಕಾದು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಈ ಮೂಲಕ ಸಂಪುಟ ವಿಸ್ತರಣೆ ಸಂಬಂಧ ಭಾರೀ ಕುತೂಹಲ ಮೂಡಿಸಿದ್ದಾರೆ.

news18-kannada
Updated:November 21, 2020, 3:15 PM IST
ತ್ಯಾಗ ಮಾಡಿ ಬಂದವರಿಗೆಲ್ಲ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ; ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್​ ಜಾರಕಿಹೊಳಿ
  • Share this:
ಬೆಂಗಳೂರು; ನಾನು ದೆಹಲಿಯಲ್ಲಿ ಬಿ.ಎಲ್. ಸಂತೋಷ್, ಸೇರಿದಂತೆ ವರಿಷ್ಠರ ಭೇಟಿ ಮಾಡಿದ್ದು ನಿಜ. ಆದರೆ ಅವರಿಗೆ ನಾನು ಯಾವ ಕಂಡೀಷನ್ ಹಾಕಿಲ್ಲ, ಟೈಮ್ ಫಿಕ್ಸ್ ಮಾಡಿಲ್ಲ. ಸರ್ಕಾರ ರಚನೆಗೆ ಕಾರಣಕರ್ತರಾದವರಿಗೆ ಅನ್ಯಾಯ ಆಗಬಾರದು. ಅವರ ಪರ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರು ನಿಂತಿದ್ದಾರೆ. ಹೀಗಾಗಿ ಅವರಿಗೆ ನ್ಯಾಯ ಕೊಡಿ ಎಂದು ಕೇಳಿದ್ದೇನೆ ಅಷ್ಟೇ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ತಮ್ಮ ನಿವಾಸದಲ್ಲಿ ಇಂದು ಶಾಸಕರಾದ ರೇಣುಕಾಚಾರ್ಯ ಹಾಗೂ ರಾಜಗೌಡ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಗಹೊಳಿ,  ನನ್ನನ್ನು ರೇಣುಕಾಚಾರ್ಯ ಸೇರಿದಂತೆ ರಾಜುಗೌಡ ಭೇಟಿ ಮಾಡಿ ಹೋದ್ರು. ಅವರ ಜೊತೆ ನಾನು  ರಾಜಕೀಯವಾಗಿ ಏನನ್ನು ಚರ್ಚೆ ಮಾಡಿಲ್ಲ. ಆದರೆ ನೀರಾವರಿ ಇಲಾಖೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನು ಓದಿ: ಪ್ರಯಾಣಿಕರ ಗಮನಕ್ಕೆ; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೇಕಾಬಿಟ್ಟಿ ತಮ್ಮ ಪಿಪಿಇ ಕಿಟ್ ಎಸೆಯುವಂತಿಲ್ಲ!

ರಾಜಕೀಯದಲ್ಲಿ ಆಶಾಭಾವನೆ ಇರಬೇಕು. ತ್ಯಾಗ ಮಾಡಿ ಬಂದಂತಹವರಿಗೆ ಅವಕಾಶ ಕೊಡಬೇಕು. ಹೆಚ್. ವಿಶ್ವನಾಥ್, ಶಂಕರ್ ಅವರಿಗೆ ಮುಖ್ಯಮಂತ್ರಿಗಳು ಅವಕಾಶ ಕೊಡುವ ವಿಶ್ವಾಸ ಇದೆ. ಅವರಿಗೆಲ್ಲಾ ಸಚಿವ ಸ್ಥಾನ ಸಿಗಬೇಕು. ಆದರೆ ಕೆಲವೊಂದು ಸಮಯದಲ್ಲಿ ಏರುಪೇರು ಆಗುತ್ತೆ. ಅದನ್ನೆಲ್ಲಾ ಅವರು ಸಹಿಸಿಕೊಳ್ಳಬೇಕು. ಆದರೆ ಶೀಘ್ರದಲ್ಲಿ ಅವರಿಗೆಲ್ಲಾ ಸಿಹಿ ಸುದ್ದಿ ಸಿಗಲಿದೆ ಎಂದು ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು.

ನಾನು ಬೆಳಗಾವಿ ಜಿಲ್ಲೆಯ ಉಸ್ತುವಾರಿ ತೆಗೆದುಕೊಳ್ಳುತ್ತೇನೆ. ಮಸ್ಕಿಯಲ್ಲೂ ಅಭ್ಯರ್ಥಿ ಪರ ಪ್ರಚಾರ ಮಾಡ್ತೇನೆ. ಕಾಂಗ್ರೆಸ್​ನಿಂದ ಸತೀಶ್ ಜಾರಕಿಹೊಳಿ ತಂತ್ರ ಮಾಡಲಿ. ಅವರು ಕಾಂಗ್ರೆಸ್ ಪಕ್ಷ, ಅವರು ಅಭ್ಯರ್ಥಿ ಪರ ಮಾಡಲೇಬೇಕು. ನಾನು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತೇನೆ. ಬೆಳಗಾವಿಯಲ್ಲಿ ಹೆಚ್ಚು ಪ್ರಚಾರ ಮಾಡ್ತೀನಿ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಕೊಟ್ರು, ಅವರ ಪರ ನಾವು ಕೆಲಸ ಮಾಡ್ತೇವೆ ಎಂದು ಹೇಳಿದರು.

ಯೋಗೇಶ್ವರ್ ಸರ್ಕಾರ ರಚನೆಗೆ ಸಹಕಾರ ಕೊಟ್ಟಿದ್ದಾರೆ. ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವಂತೆ ಮಾತಾಡಿದ್ದೇನೆ. ಯೋಗೇಶ್ವರ್ ಪರ ಮಾತಾಡೋದು ನನ್ನ ಧರ್ಮ. ಸಂಪುಟ ವಿಸ್ತರಣೆ ಯಾವಾಗ ಅನ್ನುವ ಮಾಹಿತಿ‌ ಇಲ್ಲ. ದೆಹಲಿಯಲ್ಲಿ ಸಿಎಂ ಭೇಟಿ ಸಾಧ್ಯವಾಗಲಿಲ್ಲ.  ಮಾಧ್ಯಮಗಳು ಇದನ್ನೇ ತಪ್ಪಾಗಿ ಪ್ರಸಾರ ಮಾಡಿದ್ರು ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ಪರ ರಮೇಶ್ ಜಾರಕಿಹೊಳಿ ಬ್ಯಾಟ್ ಬೀಸಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದರು. ಈ ವೇಳೆ ರಮೇಶ್ ಜಾರಕಿಹೊಳಿ ಸಹ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಜಾರಕಿಹೊಳಿ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿರಲಿಲ್ಲ. ಮೂರು ದಿನ ಕಾದು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಈ ಮೂಲಕ ಸಂಪುಟ ವಿಸ್ತರಣೆ ಸಂಬಂಧ ಭಾರೀ ಕುತೂಹಲ ಮೂಡಿಸಿದ್ದಾರೆ.
Published by: HR Ramesh
First published: November 21, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories