ಈ ವರ್ಷ ಸಾರ್ವಜನಿಕರಿಗಿಲ್ಲ ಹಾಸನಾಂಬೆ ನೇರ ದರ್ಶನ: ಸಚಿವ ಗೋಪಾಲಯ್ಯ

ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಹಾಸನಾಂಬೆ ದೇವರ ದರ್ಶನಕ್ಕೆ ಈ ಬಾರಿ ಕೊರೋನಾ ಅಡ್ಡಿ ಬಂದಿದೆ. ಈ ಹಿನ್ನಲೆ ಮುನ್ನೆಚ್ಚರಿಗೆ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಹಾಸನಾಂಬೆ

ಹಾಸನಾಂಬೆ

  • Share this:
ಹಾಸನ (ಅ.8): ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ಈ ಬಾರಿ ಸಾರ್ವಜನಿಕರಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನಲೆ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಇದರ ಬದಲು ಈ ಬಾರಿ ಎಲ್.ಇ.ಡಿ. ಪರದೆ ಮೂಲಕ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಜನಪ್ರತಿನಿಧಿಗಳು ಬೇಕಾದಲ್ಲಿ ದೇವರ ದರ್ಶನ ಪಡೆಯಬಹುದು. ಅದು ನ.5ರಂದು ಮಾತ್ರ. ದರ್ಶನಕ್ಕೆ ಬರುವ ಜನಪ್ರತಿನಿಧಿಗಳು ಮುಂಚೆಯೇ ತಿಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು. ಹಾಸನಾಂಬಾ ದೇಗುವ ತೆರೆಯುವ ಕುರಿತು ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಚಿವರೊಂದಿಗೆ ಚಿರ್ಚಿಸಿದರು.

ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಹಾಸನಾಂಬೆ ದೇವರ ದರ್ಶನಕ್ಕೆ ಈ ಬಾರಿ ಕೊರೋನಾ ಅಡ್ಡಿ ಬಂದಿದೆ. ಈ ಹಿನ್ನಲೆ ಸರಳವಾಗಿ ಜಾತ್ರೆ ನಡೆಸಲಾಗುವುದು.  ಜನರು ಒಟ್ಟಾಗಿ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ಹಿನ್ನಲೆ ಮುನ್ನೆಚ್ಚರಿಗೆ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಇದರ ಬದಲಾಗಿ ನಗರದ ಹಲವೆಡೆ ಬಾಗಿಲು ತೆಗೆಯುವ ಮೊದಲ ದಿನವೇ ವೀಕ್ಷಣೆಯನ್ನು ಹಾಸನ ನಗರದ ಹಲವೆಡೆ ಎಲ್.ಇ.ಡಿ. ಪರದೆ ಹಾಕಿ ಸಾಮಾಜಿಕ ಅಂತರ ದೊಂದಿಗೆ ಆನ್ ಲೈನ್ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಬಾರಿ ನವೆಂಬರ್ 5 ರಿಂದ 16 ರವರೆಗೆ ದೇವಿ ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ.
ಮೊದಲ ದಿನ ಬಾಗಿಲು ತೆಗೆಯುವ ದಿನ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು  ಉದ್ಘಾಟನೆಗೆ ಆಹ್ವಾನಿಸುತ್ತೇವೆ.  ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕೊಡಲಾಗುವುದು ಎಂದು ಹೇಳಿದರು. ಜನರ ಹಿತ ರಕ್ಷಣೆಗಾಗಿ ಈ ನಿಯಮವನ್ನು ಎಲ್ಲರೂ ಪಾಲನೆ ಮಾಡುವಂತೆ ಮನವಿ ಮಾಡಿದರು.

ಇದನ್ನು ಓದಿ: ದಸರಾಗೆ ಕೊರೋನಾ ವಾರಿಯರ್ಸ್ ಪಟ್ಟಿ ಸಿದ್ಧ; ಎಷ್ಟು ಜನ ಸೇರಬೇಕೆಂಬುದು ನಾಳೆ ನಿರ್ಧಾರ: ಎಸ್.ಟಿ. ಸೋಮಶೇಖರ್

ಕೊರೋನಾ ಹಿನ್ನಲೆ ದೇವಾಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೂಡ ಕೋವಿಡ್​ ಪರೀಕ್ಷೆ ಕಡ್ಡಾಯವಾಗಿದೆ. ದೇವಸ್ಥಾನದ ಸಿಬ್ಬಂದಿಗಳ ಆರೋಗ್ಯ ಕಾಳಜಿ ಮುಖ್ಯವಾಗಿದ್ದು, ಸೇವೆಗೆ ಹಾಜರಾಗುವ ಮುನ್ನ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಟ್ಟು ವರದಿ ತರಬೇಕು ಎಂದು ಇದೇ ವೇಳೆ ತಿಳಿಸಿದರು.

ಪ್ರತಿವರ್ಷ ಅಶ್ವಯುಜ ಹುಣ್ಣಿಮೆಯಂದು ಮಾತ್ರ ಬಾಗಿಯುವ ತೆರಯುವ ದೇವಾಲಯ ಬಲಿಪಾಡ್ಯಮಿಯಂದು ಬಾಗಿಲು ಹಾಕಲಾಗುತ್ತದೆ. ಈ ದೇವಾಲಯದ ವಿಶೇಷವೆಂದರೇ  ವರ್ಷದ ಬಳಿಕ ಬಾಗಿಲು ತೆರದಾಗ ದೇವಿ ಮೇಲಿರುವ ಹೂವು ಬಾಡಿರುವುದಿಲ್ಲ. ದೀಪ ಕೂಡ ಉರಿಯುತ್ತಲಿರುತ್ತದೆ. ಇದೇ ಕಾರಣಕ್ಕೆ ಈ ದೇವಿ ಪವಾಡ ದೇವತೆ ಎಂಬ ನಂಬಿಕೆ ಇದೆ. ಇತ್ತೀಚಿನ ದಿನಗಳಲ್ಲಿ  ಹಾಸನಾಂಬೆ ದರ್ಶನ ಹೆಚ್ಚು ಖ್ಯಾತಿ ಗೊಂಡಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
Published by:Seema R
First published: