HOME » NEWS » State » THIS YEAR SELECT CHITRADURGA AYYAPPA SWAMY TEMPLE TO DEVOTEES DUE TO CORONA VIRUS LG

ಕೊರೋನಾ ಹಿನ್ನೆಲೆ; ಇರುಮುಡಿ ಹೊತ್ತು 18 ಮೆಟ್ಟಿಲೇರಲು ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಾಲಯ ಆಯ್ಕೆ

ಇನ್ನು, ಈ ಬಾರಿ ಕೇರಳ ಸರ್ಕಾರ ಅಯ್ಯಪ್ಪನ ದರ್ಶನಕ್ಕೆ ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದು, ಇದರಿಂದಾಗಿ ಮಧ್ಯ ಕರ್ನಾಟಕದ ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ತುಮಕೂರು,ಬಳ್ಳಾರಿ, ಸೇರಿದಂತೆ ನೆರೆ ಆಂದ್ರದ ಮಾಲಾಧಾರಿಗಳು ಕೂಡಾ ಈ ಬಾರಿ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.

news18-kannada
Updated:December 4, 2020, 8:39 AM IST
ಕೊರೋನಾ ಹಿನ್ನೆಲೆ; ಇರುಮುಡಿ ಹೊತ್ತು 18 ಮೆಟ್ಟಿಲೇರಲು ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಾಲಯ ಆಯ್ಕೆ
ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಾಲಯ
  • Share this:
ಚಿತ್ರದುರ್ಗ(ಡಿ.04): ಕೇರಳದ ಶಬರಿಮಲೆ ಯಾತ್ರೆಗೆ ಪ್ರತೀ ವರ್ಷ ರಾಜ್ಯದಿಂದ ಲಕ್ಷಾಂತರ ಭಕ್ತರು ತೆರಳುತ್ತಿದ್ದರು. ಆದ್ರೆ ಕೊರೋನಾ ಮಹಾಮಾರಿ ಅಯ್ಯಪ್ಪನ ಯಾತ್ರೆಗೂ ಕೂಡಾ ಬ್ರೇಕ್ ಹಾಕಿದೆ. ಮಾಲೆ ಧರಿಸಿ ಹೋಗುವ ಮಾಲಾಧಾರಿಗಳಿಗೆ ಕೇರಳ ಸರ್ಕಾರ ಹತ್ತಾರು ಕಾನೂನುಗಳನ್ನ ರೂಪಿಸಿದ್ದು, ಯಾತ್ರೆಗೆ ಹೋಗುವ ಭಕ್ತರಿಗೆ ಕಗ್ಗಂಟಾಗಿದೆ. ಆದ್ದರಿಂದ ಮಧ್ಯ ಕರ್ನಾಟಕದಿಂದ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಭಕ್ತರಿಗೆ, ಈ ಬಾರಿ ಚಿತ್ರದುರ್ಗ ಅಯ್ಯಪ್ಪಸ್ವಾಮಿ  ದೇವಾಲಯ ದರ್ಶನಕ್ಕೆ ಸಜ್ಜಾಗಿದೆ. ಕಾರ್ತಿಕ ಮಾಸ ಬಂದ್ರೆ ಸಾಕು, ಕರ್ನಾಟಕದಿಂದ ಲಕ್ಷಾಂತರ ಅಯ್ಯಪ್ಪ ಸ್ವಾಮಿಯ  ಭಕ್ತರು ಕೇರಳ ಪ್ರವಾಸ ಕೈಗೊಳ್ಳುತ್ತಾರೆ. ಅಷ್ಟೇ ಅಲ್ಲದೇ ಪ್ರತಿ ಬಾರಿಯೂ ಸ್ವಾಮಿಯ ಮಾಲಾಧಾರಿಗಳು ಕೇರಳ ರಾಜ್ಯದ ಅಯ್ಯಪ್ಪನ ಸನ್ನಿಧಾನದಲ್ಲಿ ದರ್ಶನ ಪಡೆದು ಪುನೀತರಾಗುತ್ತಿದ್ದರು.

ಇನ್ನು ಮಕರ ಸಂಕ್ರಮಣದ ದಿನವಂತೂ ಮಕರ ಜ್ಯೋತಿ ಕಾಣ್ತಾ ಇದ್ದ ಅಯ್ಯಪ್ಪ ಸ್ವಾಮಿಯ ಭಕ್ತವೃಂದ ಸ್ವಾಮಿಯ ದರ್ಶನ ಪಡೆದು ಜೀವನ ಪಾವನವಾಯಿತೆಂದು ಪುನೀತರಾಗುತ್ತಿದ್ದರು. ಆದ್ರೆ ಈ ಬಾರಿ ಐತಿಹಾಸಿಕ ಆಚರಣೆಗೆ ಕೊಂಚ ಬ್ರೇಕ್ ಬಿದ್ದಂತಾಗಿದೆ. ಇಡೀ ವಿಶ್ವದಲ್ಲೆಡೆ ಕೊರೋನಾ ಹೆಮ್ಮಾರಿ ಆವರಿಸಿದ್ದು, ಅಯ್ಯಪ್ಪನ ಯಾತ್ರೆಗೆ ತೆರಳುವ ಭಕ್ತರಿಗೂ ಕೂಡಾ ಕೇರಳ ಸರ್ಕಾರ ಹತ್ತಾರು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಈ ಬಾರಿ ತೆರಳುವ ಅಯ್ಯಪ್ಪನ ಮಾಲಾಧಾರಿಳಿಗೆ ಕಡ್ಡಾಯ ಕೊವೀಡ್ ತಪಾಸಣೆ ಹಾಗೂ ಪ್ರತಿನಿತ್ಯ ಎರಡು ಸಾವಿರ ಮಂದಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಇದರಿಂದ ಕಟ್ಟು ನಿಟ್ಟಿನ ವ್ರತ ನೇಮಗಳನ್ನ ಮಾಡಿ ಶಬರಿಮಲೆಗೆ ತೆರಳುತಿದ್ದ ರಾಜ್ಯದ ಲಕ್ಷಾಂತರ ಭಕ್ತರಿಗೆ ನಿರಾಸೆ ಉಂಟಾಗಿದೆ.

ಕರ್ನಾಟಕದ ಭಕ್ತರಿಗೆ ಅನೂಕೂಲ ಆಗಲಿ ಅಂತ ಹದಿನೆಂಟು ಮೆಟ್ಟಿಲೇರುವ ರಾಜ್ಯದ ಒಂಭತ್ತು ದೇವಸ್ಥಾಗಳನ್ನು ಶಬರಿಮಲೆ ಸೇವಾ ಸಮಾಜ ರಾಷ್ಟ್ರೀಯ ಸಮಿತಿ ಆಯ್ಕೆ ಮಾಡಲಾಗಿದೆ. ಅದರಲ್ಲಿ ಚಿತ್ರದುರ್ಗ ನಗರದಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಲಯವೂ ಆಯ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಜನರಿಗೆ ಚಿತ್ರದುರ್ಗದ ಅಯ್ಯಪ್ಪ ಸ್ವಾಮಿಯ ಸೇವಾ ಟ್ರಸ್ಟ್, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪನ ದೇಗುಲ ಥೇಟ್ ಶಬರಿಮಲೆ ಅಯ್ಯಪ್ಪ ಸನ್ನಿಧಿಯ ಮಾದರಿಯಲ್ಲಿದ್ದು, ಈ ಬಾರಿ ಈ ದೇವಸ್ಥಾನದಲ್ಲಿ ಪಡಿ ಪೂಜೆಗೆ ಅನುವು ಮಾಡಿ ಕೊಟ್ಟಿದೆ. ಅಲ್ಲದೇ ಇರುಮುಡಿ ಹೊತ್ತು 18 ಮೆಟ್ಟಿಲನ್ನು ಹತ್ತಲೂ ಮಾಲಾಧಾರಿಗಳಿಗೆ  ಅವಕಾಶ ಮಾಡಿಕೊಟ್ಟಿದೆ. ಇದರಿಂದ ನಿತ್ಯವೂ ಕೂಡಾ ಹತ್ತಾರು ಮಾಲಾಧಾರಿಗಳು 18 ಪಡಿ ಹತ್ತುವ ಮೂಲಕ ದೇವರ ದರ್ಶನ ಪಡೆಯುತ್ತಿದ್ದಾರೆ.

ಅಕಾಲಿಕ ಮಳೆ, ದುಪ್ಪಟ್ಟು ಕೂಲಿ ಹಿನ್ನೆಲೆ; ರಾಗಿ ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ

ಇನ್ನು, ಈ ಬಾರಿ ಕೇರಳ ಸರ್ಕಾರ ಅಯ್ಯಪ್ಪನ ದರ್ಶನಕ್ಕೆ ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದು, ಇದರಿಂದಾಗಿ ಮಧ್ಯ ಕರ್ನಾಟಕದ ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ತುಮಕೂರು,ಬಳ್ಳಾರಿ, ಸೇರಿದಂತೆ ನೆರೆ ಆಂದ್ರದ ಮಾಲಾಧಾರಿಗಳು ಕೂಡಾ ಈ ಬಾರಿ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ.

ಆದ್ದರಿಂದ ಅಯ್ಯಪ್ಪನ ಮಾಲಾಧಾರಿಗಳಿಗೆ ಶೌಚಾಲಯ, ಮಡಿಯಾಗಲು ವ್ಯವಸ್ಥಿತ, ಸ್ನಾನ ಗೃಹಗಳ ವ್ಯವಸ್ಥೆ ಸೇರಿದಂತೆ ಹಲವು ರೀತಿಯಲ್ಲಿ ದೇವಸ್ಥಾನದ ಟ್ರಸ್ಟ್ ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಂಡಿದೆ. ಇನ್ನೂ ಈಗಾಗಲೇ ಅಯ್ಯಪ್ಪನ ದರ್ಶನಕ್ಕೆ ಬರುವ  ಸಾವಿರಕ್ಕೂ ಅಧಿಕ ಮಾಲಾಧಾರಿಗಳಿಗೆ ನಿತ್ಯವೂ ಕೂಡಾ ಪ್ರಸಾದದ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ  ಮಾಲಾಧಾರಿಗಳ ಜೊತೆ ಭಕ್ತರು ಕೂಡಾ ಪ್ರಸಾದ ಸೇವಿಸುವ ಮೂಲಕ ದೇವರ ದರ್ಶನಕ್ಕೆ ಆಗಮಿಸ್ತಿ ವಿಶೇಷ ಪೂಜೆ ಸಲ್ಲಿಸ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೇಗುಲದ ಗುರುಸ್ವಾಮಿ ಸತೀಶ್ ಶರ್ಮ ಈ ಬಾರಿ ಕೊವೀಡ್ ಹಿನ್ನೆಲೆ, ಕೇರಳಕ್ಕೆ ತೆರಳದೇ ಇಲ್ಲಿಯೇ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುವಂತೆ ಭಕ್ತರಲ್ಲಿ ಮನವಿ ಮಾಡಿದ್ದರು.

ಒಟ್ಟಾರೆ  ಕೋವಿಡ್ ಕರಿ ನೆರಳು ಕೇರಳದ ಅಯ್ಯಪ್ಪನ ದರ್ಶನದ ಮೇಲೂ ಬಿದ್ದಿದ್ದು, ಕರ್ನಾಟಕದಿಂದ ತೆರಳುವ ಲಕ್ಷಾಂತರ ಭಕ್ತರಿಗೆ ಕೇರಳ ಸರ್ಕಾರದ ಮಾರ್ಗಸೂಚಿ ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದ ಮಧ್ಯ ಕರ್ನಾಟಕದ ಜಿಲ್ಲೆಯ ಅಯ್ಯಪ್ಪನ ಮಾಲಾಧಾರಿಗಳಿಗೆ ಈ ದೇವಾಲಯ ಉತ್ತಮ ಅವಕಾಶ ಕಲ್ಪಿಸಿದ್ದು, ಭಕ್ತರು ಆಗಮಸಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗಬೇಕು ಎಂದು ದೇವಸ್ಥಾನದ ಟ್ರಸ್ಟ್ ಮನವಿ ಮಾಡಿದೆ.
Published by: Latha CG
First published: December 4, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories