ನ್ಯೂಸ್ 18 ಫಲಶೃತಿ: 70 ವರ್ಷದಿಂದ ನದಿಯೊಳಗೆ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆ ಭಾಗ್ಯ

ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿ ಮರದ ಟೊಂಗೆಗಳನ್ನ ಹಿಡಿದು ಬದುಕಿರೋದು ಉಂಟು.

ನದಿಯೊಳಗೆ ಓಡಾಡಿಕೊಂಡು ಹೋಗುತ್ತಿರುವ ಜನರು

ನದಿಯೊಳಗೆ ಓಡಾಡಿಕೊಂಡು ಹೋಗುತ್ತಿರುವ ಜನರು

  • Share this:
ಚಿಕ್ಕಮಗಳೂರು(ಮಾ.28): ನ್ಯೂಸ್ 18 ಕನ್ನಡ ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಕಳೆದ 70 ವರ್ಷದಿಂದ ನದಿಯೊಳಗೆ ಓಡಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಗ್ರಾಮದ ಜನರಿಗೆ ಸೇತುವೆಯ ಭಾಗ್ಯ ಕಲ್ಪಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣತಿ ಸಮೀಪದ ಐದಳ್ಳಿ ಗ್ರಾಮದ ಜನ ಕಳೆದ ಏಳೆಂಟು ದಶಕಗಳಿಂದ ಐದಳ್ಳಿ ಗ್ರಾಮದಲ್ಲಿ ಹರಿಯೋ ಆನೆ ಬಿದ್ದ ಹಳ್ಳವೇ ಗತಿಯಾಗಿತ್ತು. ಹುಟ್ಟು-ಸಾವಿಗೂ ಇದೇ ದಾರಿ ಗತಿ. ಮಕ್ಕಳು ಶಾಲೆಗೆ ಹೋಗಲು ಇದ್ದದ್ದು ಇದೊಂದು ಮಾರ್ಗ. ಮಳೆಗಾಲದಲ್ಲಿ ಮಕ್ಕಳು ಎರಡ್ಮೂರು ತಿಂಗಳು ಶಾಲೆಗೆ ಹೋಗುತ್ತಿರಲಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಳೆಗಾಲ ಮುಗಿಯಲಿ, ಬೇಸಿಗೆಯಲ್ಲಿ ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾ ದಶಕಗಳನ್ನ ದೂಡಿತ್ತು.  ಈ ಬಗ್ಗೆ ನ್ಯೂಸ್ 18 ಕನ್ನಡ ಸುದ್ದಿ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು, ಇದೀಗ, ಸ್ಥಳಕ್ಕೆ ಭೇಟಿ ನೀಡಿರೋ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಸರ್ವೇ ಮಾಡಿದ್ದಾರೆ.

Trend: ರಸ್ತೆಯುದ್ದಕ್ಕೂ I Love You, I Miss You ಎಂದು ಬರೆದು ಪ್ರಪೋಸ್ ಮಾಡಿದ ಪ್ರೇಮಿ; ಫೋಟೋಗಳು ವೈರಲ್

ಹೌದು, ಐದಳ್ಳಿ ಗ್ರಾಮದಿಂದ ಅರೆನೂರು, ಬೆಟ್ಟದಹಳ್ಳಿ ಹಾಗೂ ದುರ್ಗ ಗ್ರಾಮಕ್ಕೆ ಸಂಪರ್ಕವಿದೆ. ಐದಳ್ಳಿ ಗ್ರಾಮದ ಸುಮಾರು 30-35 ಮನೆಗಳಿಗೆ ಕಣತಿ ಕೇವಲ ಅರ್ಧ-ಮುಕ್ಕಾಲು ಕಿ.ಮೀ. ಆಗುತ್ತೆ. ಆದ್ರೆ, ಐದಳ್ಳಿ ಜನ ಕಣತಿಗೆ ಬರಬೇಕಂದ್ರೆ ಐದಾರು ಕಿ.ಮೀ. ಸುತ್ತಿ ಬರಬೇಕು. ಈ ಆನೆ ಬಿದ್ದ ಹಳ್ಳಕ್ಕೆ ಸೇತುವೆ ನಿರ್ಮಾಣವಾದ್ರೆ ಅರ್ಧ ಕಿ.ಮೀನಲ್ಲಿ ಕಣತಿ ಗ್ರಾಮಕ್ಕೆ ಬರುತ್ತಾರೆ. ಆದರೆ, ಏಳು ದಶಕಗಳಿಂದ ಇವ್ರಿಗೆ ಸೇತುವೆ ನಿರ್ಮಿಸಿಕೊಡಲು ಅಧಿಕಾರಿಗಳು-ರಾಜಕಾರಣಿಗಳು ಅಂಗೈಯಲ್ಲಿ ಆಕಾಶ ತೋರಿಸಿದ್ದಾರೆ. ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ.

ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೊತ್ಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲ ಹುಡುಗರ ಕೊಚ್ಚಿ ಹೋಗಿ ಮರದ ಟೊಂಗೆಗಳನ್ನ ಹಿಡಿದು ಬದುಕಿರೋದು ಉಂಟು. ಈ ಗ್ರಾಮದಿಂದ ನಾಲ್ಕೈದು ಕಿ.ಮೀ. ಸುತ್ತಿಕೊಂಡು ಬರೋ ಮಾರ್ಗದಲ್ಲೂ ತೋಟದ ಮಾಲೀಕರು ಬೇಲಿ ಹಾಕುತ್ತಾರೆಂಬ ಆರೋಪವೂ ಇದೆ. ಆದ್ರೆ, ಸರ್ಕಾರ ಮಾತ್ರ ಏಳು ದಶಕಗಳಿಂದ ಈ ಬಡಜನರಿಗೆ ಒಂದು ಸೇತುವೆ ನಿರ್ಮಿಸಿ ಕೊಡದೇ ಸುಳ್ಳು ಭರವಸೆ ನೀಡ್ತಾ ಬಂದಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡ ಡಿಜಿಟಲ್ ನಲ್ಲಿ ಸುದ್ದಿ ವಿಸ್ತಾರವಾಗಿ ಪ್ರಸಾರ ಮಾಡಲಾಗಿತ್ತು, ಸದ್ಯ ನ್ಯೂಸ್ 18 ಸುದ್ದಿ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಸರ್ವೇ ಕಾರ್ಯ ಆರಂಭಿಸಿದ್ದಾರೆ.

ಇನ್ನು ಶಾಸಕರು ಕೂಡ 50 ಲಕ್ಷದಲ್ಲಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಹಳ್ಳಿಯ ಜನ ಕೂಡ ಸಂತಸ ವ್ಯಕ್ತಪಡಿಸಿದ್ದು ನ್ಯೂಸ್ 18 ಕನ್ನಡಕ್ಕೆ ಧನ್ಯವಾದ ತಿಳಿಸಿದ್ದಾರೆ.
Published by:Latha CG
First published: