ಕರ್ನಾಟಕದ ಈ ಊರಿನಲ್ಲಿದ್ದಾರೆ 120ಕ್ಕೂ ಹೆಚ್ಚು ಯೋಧರು!; ದೇಶ ಕಾಯುವುದೇ ಈ ಗ್ರಾಮದವರ ಕಾಯಕ

ಇಲ್ಲಿರುವ ಪ್ರತಿಯೊಂದು ಮನೆಯಲ್ಲಿ ಒಬ್ಬರು, ಇಬ್ಬರು ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ 120ಕ್ಕೂ ಅಧಿಕ ಯುವಕರು ಯೋಧರಾಗಿ ದೇಶದ ಗಡಿ ಕಾಯುತ್ತಿದ್ದಾರೆ. ಇತ್ತ ಈಗಾಗಲೇ ಹಲವಾರು ಯೋಧರು ದೇಶ ಸೇವೆ ಮಾಡಿ ನಿವೃತ್ತಿಯಾಗಿದ್ದಾರೆ.

ಸೈನಿಕರು

ಸೈನಿಕರು

  • Share this:
ಬೆಂಗಳೂರು (ಜು.26): ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸಿಗ್ತಾರೆ ಸೈನಿಕರು. ದೇಶದ ಗಡಿ ಕಾಯಲು ಟೊಂಕಕಟ್ಟಿ‌ ನಿಂತಿದ್ದಾರೆ ಇಲ್ಲಿನ ಯುವಕರು. ಸ್ಕೂಲ್ ನಲ್ಲಿ ಓದುವಾಗಲೇ ಸೈನಿಕ ತರಬೇತಿ ಪಡೆಯುತ್ತಾರೆ. ನಿವೃತ್ತಿಯಾಗಿ ಬಂದ ಸೈನಿಕರು ಪುಟ್ಟ ಮಕ್ಕಳಿಗೆ ದೇಶಾಭಿಮಾನ ಬೆಳೆಸುವುದೇ ಅವರ ಕಾಯಕ. ನೂರಾರು ಜನ ವೀರ ಯೋಧರ ಗ್ರಾಮ ಹೇಗಿದೆ ಅಲ್ಲಿನ ಯುವ ಜನತೆಗೆ ಸ್ಫೂರ್ತಿಯಾದ್ರೂ ಎನೂ ಅಂತೀರಾ ಹಾಗಿದ್ರೇ ಈ ಸ್ಟೋರಿ ಓದಿ.

ಹೌದು ಇಲ್ಲಿನ ಪ್ರತಿಯೊಂದು ಮನೆಯೂ ದೇಶದ ಹೆಮ್ಮಯ ಸಂಕೇತವಾಗಿದೆ. ಮನೆಯಲ್ಲಿ ಮಗ, ಗಂಡನಿಲ್ಲದಿದ್ದರು ಆದರೂ ಹೆಮ್ಮ ಗರ್ವದಿಂದ ಬದುಕುತ್ತಿದ್ದಾರೆ ಇಲ್ಲಿನ ತಾಯಂದಿರು. ಅಷ್ಟಕ್ಕೂ ಈ ಗ್ರಾಮ ಉತ್ತರ ಕರ್ನಾಟಕದಲ್ಲೇ ಸೈನಿಕರ ಊರು ಎಂದೇ ಖ್ಯಾತಿಯನ್ನ ಪಡೆದುಕೊಂಡಿದೆ. ಇದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಲಿವಾಳ ಗ್ರಾಮ.‌ ಸದ್ಯ ಈ ಗ್ರಾಮದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ‌ ಮನೆಗಳ್ಳಿದ್ದು‌ ಸುಮಾರು‌ ಐದು ಸಾವಿರ ಜನಸಂಖ್ಯೆ ಈ ಗ್ರಾಮದಲ್ಲಿದೆ.

ಆದ್ರೇ ಇಲ್ಲಿರುವ ಪ್ರತಿಯೊಂದು ಮನೆಯಲ್ಲಿ ಒಬ್ಬರು, ಇಬ್ಬರು ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ 120ಕ್ಕೂ ಅಧಿಕ ಯುವಕರು ಯೋಧರಾಗಿ ದೇಶದ ಗಡಿ ಕಾಯುತ್ತಿದ್ದಾರೆ. ಇತ್ತ ಈಗಾಗಲೇ ಹಲವಾರು ಯೋಧರು ದೇಶ ಸೇವೆ ಮಾಡಿ ನಿವೃತ್ತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ಗ್ರಾಮದಲ್ಲಿ ಸೈನಿಕರಾಗಿ ಆಯ್ಕೆಯಾಗಲು ಕಾರಣ ಮಾಜಿ ಯೋಧರುಗಳ ಪರಿಶ್ರಮ.

ಹೌದು ಬರೀ ಓದುವುದಷ್ಟೇ ಅಲ್ಲದೆ ಸೈನಿಕರಾಗಲು ಬೇಕಾದ ತರಬೇತಿಯನ್ನು ಉಚಿತವಾಗಿ ಪಡೆಯುತ್ತಾರೆ. ಶಾಲಾ ಅವಧಿ ಮುಗಿದ ಮೇಲೆ ಗ್ರಾಮದ ಯುವಕರು ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ದೈಹಿಕ ತರಬೇತಿಯನ್ನ ನಿವೃತ್ತ ಯೋಧರು ನೀಡುತ್ತಾರೆ. ಸೈನಿಕರಾಗಿ ಆಯ್ಕೆಯಾಗಲು ಬೇಕಾದ ಎಲ್ಲಾ ರೀತಿಯ ತರಬೇತಿಯನ್ನ ಗ್ರಾಮದಲ್ಲೇ ಯುವಕರಿಗೆ ನೀಡುತ್ತಾರೆ. ಈ ಕಾರಣಕ್ಕೆ ಬಹುತೇಕ ಗ್ರಾಮದ ಎಲ್ಲ ಯುವಕರು ಸೇನಾ ಭರ್ತಿಯಲ್ಲಿ ಆಯ್ಕೆಯಾಗುತ್ತಾರೆ.ಆದರೆ ಕಳೆದ ಎರಡು ವರ್ಷಗಳ ಹಿಂದೆ  ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ  ಗ್ರಾಮದ ಹೆಮ್ಮೆಯ ಪುತ್ರ ವೀರಯೋಧ ದೇವೇಂದ್ರಪ್ಪ ಬಸವಂತಪ್ಪ ಗೂಲಗುಂದಿ (29) ವೀರ ಮರಣ ಹೊಂದಿದ್ದಾರೆ.  ಈ ಒಂದು ಘಟನೆ ಗ್ರಾಮದ ಜನರನ್ನು ಕಾಡುತ್ತಿದೆ. ಇನ್ನೂ ನೂರಾರು ಯೋಧರನ್ನ ಭಾರತಕ್ಕೆ ನೀಡಿದ ಈ ಗ್ರಾಮದ ಪ್ರತಿಯೊಂದು ತಾಯಂದಿರಿಗೆ ಕೋಟಿ‌ಕೋಟಿ ನಮನಗಳು.

ನಿವೃತ್ತಿಯಾಗಿ ಬಂದ ಯೋಧರು ಸುಮ್ಮನೆ ಕುಳಿತುಕೊಳ್ಳದೆ ನಿತ್ಯವೂ ಯುವ ಜನರಿಗೆ ದೇಶಾಭಿಮಾನದ ಬಗ್ಗೆ ಹೇಳಿ ಅವರಿಗೆ ತರಬೇತಿ ನೀಡುತ್ತಿರುವ ನಿವೃತ್ತ ಸೈನಿಕರ ಕೆಲಸ ಮೆಚ್ಚುವಂತಹದ್ದು. ಸದ್ಯ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಯೋಧರಿಗೆ ಹ್ಯಾಟ್ಸಾಪ್​.
Published by:Rajesh Duggumane
First published: