HOME » NEWS » State » THIS TIME A SIMPLE SHIVARATRI FAIR AT MALEMAHADESHWARA HILLS NCHM SESR

Shivaratri: ಮಲೆಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಸರಳ ಶಿವರಾತ್ರಿ ಜಾತ್ರೆ: ಹೊರಗಿನ ಭಕ್ತರಿಗೆ ಪ್ರವೇಶ  ನಿರ್ಬಂಧ

ಮಾರ್ಚ್ 9 ರಿಂದ 14 ರವರೆಗೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವಕ್ಕೂ ನಿಷೇಧ ಹೇರಲಾಗಿದೆ.  ಈ ಅವಧಿಯಲ್ಲಿ ಪರ ಮಾಡುವುದು ಸಾಮೂಹಿಕವಾಗಿ ಅಡುಗೆ ಮಾಡಿ ಭೋಜನ ಮಾಡುವುದನ್ನು ಸಹ ನಿರ್ಬಂಧಿಸಲಾಗಿದೆ

news18-kannada
Updated:March 3, 2021, 10:00 PM IST
Shivaratri: ಮಲೆಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಸರಳ ಶಿವರಾತ್ರಿ ಜಾತ್ರೆ: ಹೊರಗಿನ ಭಕ್ತರಿಗೆ ಪ್ರವೇಶ  ನಿರ್ಬಂಧ
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ
  • Share this:
 ಚಾಮರಾಜನಗರ ( ಮಾ.03) ಪ್ರಸಿದ್ದ ಯಾತ್ರಾ ಸ್ಥಳ  ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ  ಬೆಟ್ಟದಲ್ಲಿ  ಈ ಬಾರಿ ಶಿವರಾತ್ರಿ ಜಾತ್ರಾ ಮಹೋತ್ಸವ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಾತ್ರ ಆಚರಿಸಲು ನಿರ್ಧರಿಸಲಾಗಿದೆ.  ಈ ಬಾರಿ ಮಾರ್ಚ್ 10 ರಿಂದ 14 ರವರೆಗೆ  ಶಿವರಾತ್ರಿ ಜಾತ್ರಾ ಮಹೋತ್ಸವ ನಿಗದಿಯಾಗಿತ್ತು. ಆದರೆ ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ‌ ಮಾರ್ಗದರ್ಶನದ ಮೇರೆಗೆ  ಸಾಂಪ್ರದಾಯಿಕವಾಗಿ ನಡೆಯಬೇಕಿರುವ ವಿಧಿವಿಧಾನಗಳು, ಉತ್ಸವಾದಿಗಳು, ಪೂಜೆ ಪುನಸ್ಕಾರಗಳನ್ನು ಮಾತ್ರ ನೆರವೇರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅಲ್ಲದೇ ಹೊರಗಿನಿಂದ ಬರುವ ವಾಹನ ಹಾಗೂ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಹದೇಶ್ವರ ಬೆಟ್ಟದ ಸ್ಥಳಿಯರಿಗೆ ,  ಸರ್ಕಾರದ ಕರ್ತವ್ಯದ ಮೇಲೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು  ಹಾಗು ಪ್ರಾಧಿಕಾರದ ನೌಕರರಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

ಇದಲ್ಲದೆ ಮಾರ್ಚ್ 9 ರಿಂದ 14 ರವರೆಗೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವಕ್ಕೂ ನಿಷೇಧ ಹೇರಲಾಗಿದೆ.  ಈ ಅವಧಿಯಲ್ಲಿ ಪರ ಮಾಡುವುದು ಸಾಮೂಹಿಕವಾಗಿ ಅಡುಗೆ ಮಾಡಿ ಭೋಜನ ಮಾಡುವುದನ್ನು ಸಹ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ  ದೇವಾಲಯಕ್ಕೆ ಬರುವ ಮಹದೇಶ್ವರ ಬೆಟ್ಟದ ಸ್ಥಳೀಯ ನಿವಾಸಿಗಳು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತರುವುದು ಕಡ್ಡಾಯ ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.  ಹೊರಗಿನಿಂದ ಬರುವ ಭಕ್ತರು ಮಾರ್ಚ್ 8 ರವರೆಗೆ ಮಾತ್ರ ವಾಸ್ತವ್ಯ ಮಾಡಿ ಮಾರ್ಚ್ 9 ರ ಬೆಳಿಗ್ಗೆ ಖಾಲಿ ಮಾಡಬೇಕು ಎಂದಿದ್ದಾರೆ.

ಇದನ್ನು ಓದಿ: ಬಾಗಲಕೋಟೆಯಲ್ಲಿ ಹೊತ್ತಿ ಉರಿದ ಮಿನಿ ಬಸ್; ಇಬ್ಬರು ಮಹಿಳೆಯರು ಸಜೀವ ದಹನ

ಪ್ರತಿವರ್ಷ 4-5 ದಿನಗಳ ಕಾಲ ನಡೆಯುತ್ತಿದ್ದ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಿದ್ದರು. ಹೀಗೆ ಅಪಾರ ಸಂಖ್ಯೆಯ ಮಂದಿ ಭಕ್ತರು ಸೇರುವುದರಿಂದ ಕೋವಿಡ್-19 ಹಿನ್ನಲೆಯಲ್ಲಿ  ಕಳೆದ ವರ್ಷ ಮಾರ್ಚ್ ನಲ್ಲು ಸಹ ಶಿವರಾತ್ರಿ ಜಾತ್ರಾ ಮಹೋತ್ಸವ ರದ್ದು ಪಡಿಸಲಾಗಿತ್ತು. ನಂತರ ಯುಗಾದಿ, ದೀಪಾವಳಿ ರಥೋತ್ಸವಗಳನ್ನು ರದ್ದುಪಡಿಸಲಾಗಿತ್ತು. ಆದರೆ ಇತ್ತೀಚಿಗೆ ಜಾತ್ರೆ ಗಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿರುವ ಹಿನ್ನಲೆಯಲ್ಲಿ  ಮಲೆ ಮಹದೇಶ್ವರ  ಬೆಟ್ಟದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿ ರಥೋತ್ಸವ ನಡೆಸಲು ನಿರ್ಧರಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಇತ್ತೀಚಿನ ಚಾಮರಾಜನಗರದಲ್ಲಿ  ಜಾತ್ರಾ ಮಹೋತ್ಸವ ಪೂರ್ವ ಸಿದ್ದತೆಗಳ ಕುರಿತು ಸಭೆಯನ್ನು ಸಹ ನಡೆಸಲಾಗಿತ್ತು.  ಆದರೆ ಕೊರೋನಾ ಎರಡನೇ ಅಲೆ ಶುರುವಾಗುವ ಆತಂಕವಿರುವುದರಿಂದ ಇಂದು ಮಹದೇಶ್ವರ ಬೆಟ್ಟದಲ್ಲಿ  ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರ ನೇತೃತ್ವದಲ್ಲಿ ಸಭೆ ನಡೆಸಿ  ಸಾಂಪ್ರದಾಯಿಕ ನಡೆಯಬೇಕಿರುವ ಪೂಜೆ ಪುನಸ್ಕಾರ, ರಥೋತ್ಸವವನ್ನು ಹಲವು ನಿರ್ಬಂಧಗಳೊಡನೆ  ಸೀಮಿತ ಪ್ರಮಾಣದಲ್ಲಿ ನೆರವೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

(ವರದಿ: ಎಸ್.ಎಂ.ನಂದೀಶ್ )
Published by: Seema R
First published: March 3, 2021, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories