ದೇವರ ಕೋರ್ಟ್​ನಲ್ಲೇ ಬಗೆಹರಿಯುತ್ತೆ ವ್ಯಾಜ್ಯ; ಈ ಊರಿನ ಜನ ನ್ಯಾಯಾಲಯದ ಮೆಟ್ಟಿಲು ಹತ್ತಿದ ಉದಾಹರಣೆಯೇ ಇಲ್ಲ

ಕೇರಳ ಹಾಗೂ ಕರ್ನಾಟಕದ ಗಡಿಭಾಗದ ಜನರು ಸುಪ್ರೀಂಕೋರ್ಟ್‌ಗಿಂತಲೂ ಹೆಚ್ಚಾಗಿ ಈ ಕ್ಷೇತ್ರದ ಸತ್ಯದ ಚಾವಡಿಯನ್ನು  ನಂಬುತ್ತಾರೆ.ಇದಕ್ಕೆ ಪ್ರಮುಖ ಕಾರಣ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ದೈವ ಶಕ್ತಿಯ ಅನಾವರಣ.

news18-kannada
Updated:August 10, 2020, 1:19 PM IST
ದೇವರ ಕೋರ್ಟ್​ನಲ್ಲೇ ಬಗೆಹರಿಯುತ್ತೆ ವ್ಯಾಜ್ಯ; ಈ ಊರಿನ ಜನ ನ್ಯಾಯಾಲಯದ ಮೆಟ್ಟಿಲು ಹತ್ತಿದ ಉದಾಹರಣೆಯೇ ಇಲ್ಲ
ದೇವಸ್ಥಾನ
  • Share this:
ಮಂಗಳೂರು (ಆ.10): ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ  ಪುಣ್ಯ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರ್ ದೈವಗಳ ಕ್ಷೇತ್ರ. ದೇವತೆಗಳ ರೂಪದಲ್ಲಿ ಆರಾಧಿಸಲ್ಪಡುವ, ಕೇವಲ ತುಳುವರು ಮತ್ತು ಮಲಯಾಳಿಗೆ ಶಕ್ತಿ ದೇವತೆಯಾಗಿ ಇರದೇ ಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತರನ್ನು ತನ್ನತ್ತ ಸೆಳೆದು ತಾಯಿಯ ಪ್ರೀತಿಯನ್ನು ನೀಡಿ, ಅಭಯ ಶಕ್ತಿಯಾಗಿ ಸಕಲ ಸಂಕಷ್ಟಗಳನ್ನು ವೇಗವಾಗಿ ನಿವಾರಣೆ ಮಾಡುವ ಆ ಪುಣ್ಯ ಕ್ಷೇತ್ರವೇ ಕಾನತ್ತೂರು ನಾಲ್ವರ್ ದೈವಗಳ ಕ್ಷೇತ್ರ.

ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡಿನ ಬೋವಿಕ್ಕಾನ ಸಮೀಪದಲ್ಲಿದೆ ಕಾನತ್ತೂರು ಶ್ರೀ ನಾಲ್ವರು ದೈವಗಳ ಕ್ಷೇತ್ರ. ನ್ಯಾಯದೇಗುಲವಾಗಿ, ದೇಶದ ಸುಪ್ರೀಂ ಕೋರ್ಟ್ ಗಿಂತಲೂ ಹೆಚ್ಚು ಪ್ರಾವಿತ್ಯತೆ ಮತ್ತು ಸತ್ಯದ ಕೇಂದ್ರವಾಗಿ ಇರುವ ಕಾನತ್ತೂರು ಕ್ಷೇತ್ರ 21 ಶತಮಾನದಲ್ಲೂ ಜನರ ಅಪರಿಮಿತ ಭಯ ಭಕ್ತಿ ಮತ್ತು ಶ್ರಧ್ಧೆಯ ಪ್ರಧಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಕಾರಣಿಕ ಪ್ರಸಿದ್ಧ ಕ್ಷೇತ್ರದ ಪ್ರಮುಖ ವಿಶೇಷ ಎನಂದ್ರೆ ನ್ಯಾಯಾಲಯದಲ್ಲೂ ನೆರವೇರದ ವ್ಯಾಜ್ಯಗಳು ಇಲ್ಲಿ ನರವೇರುತ್ತದೆ. ಧರ್ಮ ಚಾವಡಿಯಲ್ಲಿ ಕಾನತ್ತೂರು ಕ್ಷೇತ್ರದ ಯಜಮಾನನ ಸಮ್ಮುಖದಲ್ಲಿ ನಡೆಯುವ ಈ ಕೋರ್ಟ್ ದೇವರ ಕೊರ್ಟ್ ಎಂದೇ ಖ್ಯಾತಿ ಪಡೆದಿದೆ.

ಕೇರಳ ಹಾಗೂ ಕರ್ನಾಟಕದ ಗಡಿಭಾಗದ ಜನರು ಸುಪ್ರೀಂಕೋರ್ಟ್‌ಗಿಂತಲೂ ಹೆಚ್ಚಾಗಿ ಈ ಕ್ಷೇತ್ರದ ಸತ್ಯದ ಚಾವಡಿಯನ್ನು  ನಂಬುತ್ತಾರೆ.ಇದಕ್ಕೆ ಪ್ರಮುಖ ಕಾರಣ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ದೈವ ಶಕ್ತಿಯ ಅನಾವರಣ. ಈ ಸತ್ಯದ ಚಾವಡಿಯಲ್ಲಿ ನಿಂತು ಮಹಿಮಾನ್ವಿತ ನಾಲ್ವರಿ ದೈವಗಳ ಎದುರು ಸುಳ್ಳು ಹೇಳಿದ್ರೆ ಸಾವು ಕಟ್ಟಿಟ್ಟ ಬುತ್ತಿ. ದೇವರ ಕೋರ್ಟ್ ನಲ್ಲಿ ಸುಳ್ಳು ಹೇಳಿ ತಪ್ಪಿಸಿಕೊಂಡವರ ಉದಾಹರಣೆಗಳಿಲ್ಲ. ಬದುಕಿದವರ ನಿದರ್ಶನವಿಲ್ಲ. ನಾಲ್ವರ್ ದೈವಗಳ ಮುಂದೆ ಸುಳ್ಳು ಎಂದೂ ತಲೆ ಎತ್ತಿಲ್ಲ. ಇದು ಕಾನತ್ತೂರು ಕ್ಷೇತ್ರದ ಮಹಿಮೆ.
ಕಾನತ್ತೂರು ಕ್ಷೇತ್ರದಲ್ಲಿ ವಿಷ್ಣುಮೂರ್ತಿ,ರಕ್ತೇಶ್ವರಿ,ಉಗ್ರಮಾರ್ತಿ ಹಾಗೂ ಚಾಮುಂಡಿ ಪ್ರಧಾನ ದೈವಗಳು. ಹೀಗಾಗಿಯೇ ಈ ಕ್ಷೇತ್ರಕ್ಕೆ ನಾಲ್ವರು ದೈವಗಳ ಕ್ಷೇತ್ರ ಎಂದು ಕರೆಯುತ್ತಾರೆ. ದೇಶದಲ್ಲಿ ನ್ಯಾಯ ತೀರ್ಮಾನ ಮಾಡುವ ಶ್ರೇಷ್ಠ ನ್ಯಾಯಾಲಯದಲ್ಲಿ ತೀರ್ಮಾನವಾಗದ ಅದೆಷ್ಟೋ ಪ್ರಕರಣಗಳು ಇಲ್ಲಿ ದೈವಗಳ ಶಕ್ತಿಯಿಂದ ತೀರ್ಮಾನವಾಗಿದೆ.

ಪ್ರತಿ ನಿತ್ಯ ದೂರದೂರುಗಳಿಂದ ಸಾವಿರಾರು ಜನ ನ್ಯಾಯ ಕ್ಕಾಗಿ ಅರಸಿ ನಾಲ್ವರ್ ದೈವಗಳ ಮೊರೆ ಹೋಗುತ್ತಾರೆ. ಮಾನಸಿಕ ವಾಗಿ ಕುಗ್ಗಿ ಹೋಗಿದವರು ಈ ಕ್ಷೇತ್ರಕ್ಕೆ ಭೇಟಿ ನಾಲ್ವರ್ ದೈವಗಳ ಭಯ ಭಕ್ತಿಯಿಂದ ಪ್ರಾರ್ಥಿಸಿ,ಇಲ್ಲಿನ ದೈವ ಪ್ರಭಾವಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಂಡು ಸಂತೋಷದ ಜೀವನ ಮಾಡುತ್ತಿರುವ ಲಕ್ಷಾಂತರ ಉದಾಹರಣೆ ಈ ಕ್ಷೇತ್ರದಲ್ಲಿದೆ. ಕಾನತ್ತೂರು ಕ್ಷೇತ್ರದಲ್ಲಿ ನ್ಯಾಯ ವಿಚಾರಗಳು ಮಾತ್ರವಲ್ಲದೆ ಕಳೆದು ಕೊಂಡ ವಸ್ತುವಿನ ಬಗ್ಗೆ ದೈವಗಳಲ್ಲಿ ಅರಿಕೆ ಮಾಡಿಕೊಂಡರೆ ಶೀಘ್ರವೇ ಆ ವಸ್ತು ಕೈ ಸೇರುವ ಅಚ್ಚರಿಯ ಸಂಗತಿಗಳಿವೆ. ಕಳೆದು ಕೊಂಡ ವಸ್ತುವಿನ ಬಗ್ಗೆ ದೈವದ ಬಳಿ ದೂರು ನೀಡಿದರೆ ಕಿರಿದು ದಿನಗಳಲ್ಲಿ ಆ ವಸ್ತು ಕೈ ಸೇರಿರುವ ಅನೇಕ  ನಿದರ್ಶನಗಳು,ದೈವದ ಪ್ರಭಾವವನ್ನು ಸ್ವಂತ ಅನುಭವಿಸಿದ ಉದಾಹಣೆಗಳು ಅಗಣಿತ ಸಂಖ್ಯೆಯಲ್ಲಿವೆ.

ಕಾನತ್ತೂರು ಕ್ಷೇತ್ರದ ಆಡಳಿತದಲ್ಲಿ ಪ್ರತಿ ಮೂರು ವರ್ಷಕ್ಕೆ ಬದಲಾವಣೆಯಾಗುತ್ತದೆ. ಕಾನತ್ತೂರಿನ ಆಡಳಿತ ವಹಿಸಿಕೊಂಡರಿಗೆ ದೈವದ ಸೇವೆಯಲ್ಲಿ ಪ್ರಧಾನ ಪಾತ್ರ ವಹಿಸಲಾಗುತ್ತದೆ. ಕಾನತ್ತೂರಿನ ಒಡೆಯರಾದ ನಾಲ್ವರ್ ದೈವಗಳ ಕಾನತ್ತೂರು ಅರಮನೆಯ ಮೇಲ್ವಿಚಾರಣೆಯನ್ನು ಆಡಳಿತ ವಹಿಸಿಕೊಂಡ ವ್ಯಕ್ತಿಗಳು ವಹಿಸಬೇಕಾಗುತ್ತದೆ. ಅಲ್ಲದೆ ಕಾನತ್ತೂರಿನ ಸತ್ಯದ ಚಾವಡಿಯಲ್ಲಿ ನಡೆಯುಲ ನ್ಯಾಯ ವ್ಯಾಜ್ಯಗಳು, ದೂರು ಪ್ರತಿದೂರುಗಳು ಆಡಳಿತ ಮೊಕ್ತೇಸ್ವರ ಮುಂದೆ ನಡೆಯುವುದರಿಂದ ಆಡಳಿತ ಮೊಕ್ತೇಸ್ವರರನ್ನೇ ಪ್ರಧಾನ ನ್ಯಾಯಾಧೀಶರನ್ನಾಗಿ ಪರಿಗಣಿಸಿ ಅವರ ತೀರ್ಪಿಗೆ ಜನ ತಲೆ ಬಾಗುತ್ತಾರೆ. ನ್ಯಾಯದ ಮಣ್ಣಲ್ಲಿ ಅನ್ಯಾಯಕ್ಕೆ ಅವಕಾಶ ಕೊಡದೆ,ಸತ್ಯದ ಕೇಂದ್ರದಲ್ಲಿ ಸತ್ಯವನ್ನು ಜಯಿಸುವುದು ಮೊಕ್ತೇಸ್ವರ ನ ಧರ್ಮವಾಗಿದೆ.
ಇಷ್ಟೆಲ್ಲಾ ಪವಾಡಗಳು ನಡೆಯುವ ಈ ದೈವಸ್ಥಾನದ ಹೆಸರು ಹೇಳಲು  ಜನ ಇಂದಿಗೂ  ಭಯ ಪಡುತ್ತಾರೆ. ತಪ್ಪಿ ಹೆಸರು ಹೇಳಿದರೆ ಅದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡಬೇಕಾಗುತ್ತಾರೆ. ತಮ್ಮ ಕಷ್ಟಕಾಲದಲ್ಲಿ ಹರಕೆಯನ್ನು ಹೇಳಿ ಮರೆತರೂ ಅವರನ್ನೂ ದೈಗಳನ್ನು ಸುಮ್ಮನೆ ಬಿಡೋದಿಲ್ಲ. ಹರಕೆಯನ್ನು ಪಾಲಿಸದವರಿಗೆ ಕಷ್ಟವವನ್ನು ನೀಡಿ ಕಷ್ಟಕಾಲದ ನೆನಪನ್ನು ಮಾಡಿಸುತ್ತದೆ.ಎಲ್ಲಾ ಧರ್ಮದವರೂ ಆರಾಧಿಸೋ  ಈ ಕ್ಷೇತ್ರ ನ್ಯಾಯ ಕೇಂದ್ರ ವಾಗಿ, ನಂಬಿ ಬಂದ ಭಕ್ತರಿಗೆ ಅಭಯ ಕ್ಷೇತ್ರವಾಗಿ ಜಗತ್ ಪ್ರಸಿದ್ಧಿ ಪಡೆದಿದೆ. ನ್ಯಾಯ ಸ್ಥಾನದ ಕೇಂದ್ರದಲ್ಲಿ ಅನ್ಯಾಯ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಅರ್ಥಾತ್ ಅಲ್ಲೇ ಡ್ರಾ. ಅಲ್ಲೇ ಬಹುಮಾನ.
Published by: Rajesh Duggumane
First published: August 10, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading