ಬೆಂಗಳೂರು; ಬಹುನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ನಾಳೆ ಮಧ್ಯಾಹ್ನ 3.55ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಏಳು ಮಂದಿ ಶಾಸಕರು ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರಲಿದ್ದಾರೆ. ಆದರೆ ಯಾರೆಲ್ಲಾ ಸಂಪುಟ ಸೇರಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರು ಸೇರಿದಂತೆ ಬಿಜೆಪಿ ನಾಯಕರಲ್ಲಿಯೂ ಮೂಡಿದೆ. ಕಾರಣ ನೂತನ ಸಚಿವರ ಪಟ್ಟಿಯ ಗೌಪತ್ಯೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಾಯ್ದುಕೊಂಡಿದ್ದಾರೆ.
ಅಲ್ಲದೇ , ನೂತನ ಸಚಿವರಿಗೆ ತಾವೇ ಖುದ್ದು ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಮಾತನಾಡಿರುವ ಅವರು, ನಾಳೆ ಸಚಿವರಾಗಿ 7ರಿಂದ 8 ಶಾಸಕರ ಪದಗ್ರಹಣ ಮಾಡಲಿದ್ದಾರೆ. ಅವರಿಗೆಲ್ಲಾ ನಾಳೆ ರಾಜಭವನಕ್ಕೆ ಬರಲು ಹೇಳಿದ್ದೇನೆ. ನಾಳೆ 3.50ಕ್ಕೆ ರಾಜಭವನದ ಗಾಜಿನ ಅರಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಮೂರನೇ ಬಾರಿಗೆ ಕತ್ತಿ ಕೈ ಹಿಡಿದ ಸಿಎಂ ಬಿಎಸ್ವೈ; ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಪಕ್ಕಾ?
ಅದರಂತೆ ನ್ಯೂಸ್ 18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಏಳು ಜನರು ಸಚಿವರಾಗುವುದು ಬಹುತೇಕ ಖಚಿತ ಆಗಿದೆ.
1. ಉಮೇಶ್ ಕತ್ತಿ
2. ಮುರುಗೇಶ್ ನಿರಾಣಿ
3. ಅರವಿಂದ ಲಿಂಬಾವಳಿ
4. ಎಸ್ ಅಂಗಾರ
5. ಆರ್ ಶಂಕರ್
6. ಎಂಟಿಬಿ ನಾಗರಾಜ್
7. ಸಿಪಿ ಯೋಗೇಶ್ವರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ