ಆನ್​ಲೈನ್ ಕ್ಲಾಸ್ ಎಫೆಕ್ಟ್​: ಈ ಶಾಲೆಯ ಬಡಮಕ್ಕಳಿಗೆ ಬೇಕಾಗಿದೆ ಆ್ಯಂಡ್ರಾಯ್ಡ್ ಮೊಬೈಲ್

ಯಾವ ವಿದ್ಯಾರ್ಥಿ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ಇಲ್ಲವೋ ಅಂತಹವರನ್ನು  ಸದ್ಯಕ್ಕೆ ಆ್ಯಂಡ್ರಾಯ್ಡ್ ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳ ಜೊತೆಗೆ  ಟ್ಯಾಗ್ ಮಾಡಲಾಗುತ್ತಿದೆ ಎನ್ನುತ್ತಾರೆ ಶಾಲಾ  ಆಡಳಿತಾಧಿಕಾರಿ  ಪ್ರಜ್ಞಾ.

news18-kannada
Updated:August 20, 2020, 11:45 AM IST
ಆನ್​ಲೈನ್ ಕ್ಲಾಸ್ ಎಫೆಕ್ಟ್​: ಈ ಶಾಲೆಯ ಬಡಮಕ್ಕಳಿಗೆ ಬೇಕಾಗಿದೆ ಆ್ಯಂಡ್ರಾಯ್ಡ್ ಮೊಬೈಲ್
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಆ. 20): ಚಾಮರಾಜನರದ ದೀನಬಂಧು ಶಾಲೆ  ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ  ಕನ್ನಡ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ.  ಸರ್ಕಾರದ ಅನುದಾನನವಿಲ್ಲದೆ ನಡೆಯುತ್ತಿರುವ ಈ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಅನಿವಾರ್ಯವಾಗಿ  ಆನ್ ಲೈನ್ ಮೂಲಕ ಶಿಕ್ಷಣ ನೀಡಲು ಶಾಲಾ ಆಡಳಿತ ಮಂಡಳಿ ಮುಂದಾಗಿದೆ.

ಆದರೆ ಶೇಕಡಾ 90 ರಷ್ಟು ಬಡಮಕ್ಕಳೇ ವ್ಯಾಸಂಗ ಮಾಡುವ ಈ  ಶಾಲೆಯ ಮಕ್ಕಳಿಗೆ ಆ್ಯಂಡ್ರಾಯ್ಡ್ ಮೊಬೈಲ್ ಸಮಸ್ಯೆ ಎದುರಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮಲ್ಲಿರುವ ಬಳಸದೆ ಸುಸ್ಥಿಯಲ್ಲಿರುವ ಆ್ಯಂಡ್ರಾಯ್ಡ್ ಮೊಬೈಲ್ ಗಳನ್ನು ಬಡ ವಿದ್ಯಾರ್ಥಿಗಳಿಗೆ ನೀಡುವಂತೆ ಮನವಿ ಶಾಲಾ ಆಡಳಿತ ಮಂಡಳಿ ಮಾಡಿದೆ.

ರಾಷ್ಟ್ರಕವಿ ದಿವಂಗತ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಿ.ಎಸ್.ಜಯದೇವ ಚಾಮರಾಜನಗರದಲ್ಲಿ ಬಡಮಕ್ಕಳಿಗಾಗಿಯೇ ಖಾಸಗಿ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿದ್ದಾರೆ. ಅತ್ಯುತ್ತಮ ಶಿಕ್ಷಣ ನೀಡುವ ದೀನಬಂಧು ಶಾಲೆ ಸೃಜನಾತ್ಮಕ ಕಲಿಕಾ ಕೇಂದ್ರವೂ ಹೌದು. ಎಲ್.ಕೆ.ಜಿ.ಯಿಂದ  ಹತ್ತನೇ ತರಗತಿ ವರೆಗೆ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಬಡ ಹಾಗೂ ದುರ್ಬಲ ವರ್ಗಗಳ ಮಕ್ಕಳೆ ಹೆಚ್ಚಾಗಿ ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ  ಆನ್ ಲೈನ್ ಶಿಕ್ಷಣ ನೀಡಲು ಆಡಳಿತ ಮಂಡಳಿ ಮುಂದಾಗಿದೆ.  ವಾಟ್ಸ್ಆ್ಯಪ್, ಝೂಮ್, ಗೂಗಲ್  ಮೀಟ್ ಮೊದಲಾದ ತಂತ್ರಜ್ಷಾನದೊಂದಿಗೆ ಈಗಾಗಲೇ ಹಲವು ಶಾಲೆಗಳು  ಮಕ್ಕಳಿಗೆ ಪಾಠ ನಡೆಸುತ್ತಿವೆ. ತಮ್ಮ ಮಕ್ಕಳು ಇದರಿಂದ ವಂಚಿತಾರಾಗಬಾರದು ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು  ಎಂಬುದು ದೀನಬಂಧು ಶಾಲಾ ಆಡಳಿತ ಮಂಡಳಿಯ ಆಶಯವಾಗಿದೆ.

ಕಾವೇರಿ ನದಿಯ ಹೂಳೆತ್ತಿದ ಬಳಿಕವೂ ಕೊಡಗಿನಲ್ಲಿ ಪ್ರವಾಹ; ಹೂಳೆತ್ತಲು ವ್ಯಯಿಸಿದ 88 ಲಕ್ಷ ಹಣ ವ್ಯರ್ಥವಾಯಿತೇ?

ಈ ಹಿನ್ನಲೆಯಲ್ಲಿ  ಈಗಾಗಲೇ ಪ್ರತಿ ತರಗತಿಗೂ ವಾಟ್ಸ್ಆ್ಯಪ್ ಗ್ರೂಪ್ ಗಳನ್ನು ಮಾಡಿ ಒಂದೊಂದು ಪಾಠವನ್ನು ಮಕ್ಕಳಿಗೆ ಅರ್ಥವಾಗುವಂತೆ ವಿಡಿಯೋ ಮಾಡಿ  ಗ್ರೂಪ್ ಗೆ ಹಾಕಲಾಗುತ್ತಿದೆ. ಇದರ  ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗವಂತೆ ವರ್ಕ್ ಶೀಟ್ ಗಳನ್ನು ಸಹ ಹಾಕಲಾಗುತ್ತಿದೆ. ಆದರೆ ಎಲ್ಲಾ ವಿದ್ಯಾರ್ಥಿಗಳ ಬಳಿಯೂ ಆ್ಯಂಡ್ರಾಯ್ಡ್  ಮೊಬೈಲ್ ಇಲ್ಲದ ಕಾರಣ  ತೊಂದರೆ ಎದುರಾಗಿದೆ. ಇಷ್ಟೇ ಅಲ್ಲ ಕೆಲವು ಶಿಕ್ಷಕರ ಬಳಿಯು ಇಂತಹ ಮೊಬೈಲ್​​ಗಳಿಲ್ಲದೆ ಅನಾನುಕೂಲವಾಗಿದೆ.

ತರಗತಿ ಕೋಣೆಯಲ್ಲಿ ಹೇಗೆ  ಪಾಠ ಮಾಡುತ್ತಿದ್ದೆವೂ ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಪಾಠಗಳನ್ನು ಬೋಧಿಸುವ  ವಿಡಿಯೋ ಮಾಡಿ ವಾಟ್ಸ್ ಆಪ್ ಗ್ರೂಪ್ ಗಳಿಗೆ ಹಾಕುತ್ತಿದ್ದೇವೆ. ಆದರೆ ಎಲ್ಲಾ ವಿದ್ಯಾರ್ಥಿಗಳಿಗೂ ಇದು ತಲುಪುತ್ತಿಲ್ಲ. ಹಾಗಾಗಿ  ಯಾವ ವಿದ್ಯಾರ್ಥಿ ಬಳಿ ಆ್ಯಂಡ್ರಾಯ್ಡ್ ಮೊಬೈಲ್ ಇಲ್ಲವೋ ಅಂತಹವರನ್ನು  ಸದ್ಯಕ್ಕೆ ಆ್ಯಂಡ್ರಾಯ್ಡ್ ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳ ಜೊತೆಗೆ  ಟ್ಯಾಗ್ ಮಾಡಲಾಗುತ್ತಿದೆ ಎನ್ನುತ್ತಾರೆ ಶಾಲಾ  ಆಡಳಿತಾಧಿಕಾರಿ  ಪ್ರಜ್ಞಾ.

ಎಲ್ಲ ಮಕ್ಕಳ ಬಳಿಯು ಆ್ಯಂಡ್ರಾಯ್ಡ್ ಮೊಬೈಲ್ ಇದ್ದರೆ ಬಹಳ ಅನುಕೂಲವಾಗಲಿದೆ. ಹಾಗಾಗಿ ಸಾರ್ವಜನಿಕರು ತಾವು  ಬಳಸದೆ ಹಾಗೂ ಸುಸ್ಥಿತಿಯಲ್ಲಿರುವ ಮೊಬೈಲ್​ಗಳಿದ್ದರೆ ನಮ್ಮ ಸಂಸ್ಥೆಗೆ ಕಳುಹಿಸಿಕೊಟ್ಟರೆ ಅಗತ್ಯ ಇರುವ ಮಕ್ಕಳಿಗೆ ಅದನ್ನು ನೀಡುತ್ತೇವೆ. ಇದರಿಂದ ಬಡ ಹಾಗು ದುರ್ಬಲ ವರ್ಗಗಳ ಮಕ್ಕಳ ಕಲಿಕೆಗೆ ಬಹಳ ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
Published by: Latha CG
First published: August 20, 2020, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading