ಆ ಚಾಯ್ವಾಲಾ ಪ್ರಧಾನಿ, ಈ ಚಾಯ್ವಾಲಾ ಹೀರೋ; ಕನಸುಗಳ ಬೆನ್ನುಹತ್ತಿ ನನಸು ಮಾಡಿಕೊಂಡ ಛಲಗಾರ!

ಟೀ ಮಾರುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅದೇ ರೀತಿ ಟೀ ಮಾರುತ್ತಿದ್ದ ಹುಡುಗನೊಬ್ಬ ಸ್ಯಾಂಡಲ್ವುಡ್ ಸ್ಟಾರ್ ಆಗಬಹುದಾ? ಯಾಕಾಗಬಾರದು? ಈಗಾಗಲೇ ಸ್ಟಾರ್, ಸೂಪರ್ಸ್ಟಾರ್ಗಳ ಜೊತೆ ಸಹ ನಟನಾಗಿ ನಟಿಸಿ ಸೈ ಎನಿಸಿಕೊಂಡು ಸದ್ಯ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರೇ ವರ್ಧನ್ ತೀರ್ಥಹಳ್ಳಿ. ಅವರ ರೋಚಕ ಸಿನಿಜರ್ನಿ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. ಕಸನುಗಳ ಬೆನ್ನು ಹತ್ತಿ ಅದನ್ನು ನನಸಾಗಿಸಿಕೊಳ್ಳುವ ಧೈರ್ಯ ನೀಡುತ್ತದೆ.

news18-kannada
Updated:August 14, 2020, 1:48 PM IST
ಆ ಚಾಯ್ವಾಲಾ ಪ್ರಧಾನಿ, ಈ ಚಾಯ್ವಾಲಾ ಹೀರೋ; ಕನಸುಗಳ ಬೆನ್ನುಹತ್ತಿ ನನಸು ಮಾಡಿಕೊಂಡ ಛಲಗಾರ!
ಸ್ಯಾಂಡಲ್​ವುಡ್ ಹೀರೋ ವರ್ಧನ್
  • Share this:
ವರ್ಧನ್ ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಬಿದರಳ್ಳಿಯವರು. ತಂದೆ, ತಾಯಿ ಇಬ್ಬರೂ ಕೂಲಿ ಮಾಡುತ್ತಿದ್ದರು. ಮೂವರು ಮಕ್ಕಳಲ್ಲಿ ವರ್ಧನ್ ಎರಡನೆಯವರು. ಓದುವ ಆಸೆಯಿತ್ತಾದರೂ ಬಡತನದಿಂದಾಗಿ ಸಾಧ್ಯವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದ ವರ್ಧನ್ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದರು. ಸುಮಾರು ಆರೇಳು ವರ್ಷಗಳ ಕಾಲ ನವರಂಗ್, ಪದ್ಮನಾಭನಗರದ ಹೋಟೆಲ್​​ಗಳಲ್ಲಿ ಕೆಲಸ ಮಾಡಿದರು. ಯಶವಂತಪುರದಲ್ಲಿ ಟೀ ಮಾರಿದರು.

ಪದ್ಮನಾಭನಗರದ ಹೋಟೆಲ್​ನಲ್ಲಿ ಕೆಲಸ ಮಾಡುವಾಗ ಸಿನಿಮಾ ಬಗೆಗಿನ ಕನಸು ಮತ್ತೆ ಕಾಡತೊಡಗಿತು. ಸಮೀಪದಲ್ಲೇ ಸಿಲ್ಲಿ ಲಲ್ಲಿ ಧಾರಾವಾಹಿಯ ಶೂಟಿಂಗ್ ನಡೆಯುತ್ತಿದ್ದ ಕಾರಣ ಅಲ್ಲಿಗೆ ಹೋಗತೊಡಗಿದರು. ಧಾರಾವಾಹಿ ತಂಡದವರನ್ನು ಪರಿಚಯ ಮಾಡಿಕೊಂಡರು. ನಂತರ ಹೋಟೆಲ್ ಕೆಲಸ ಬಿಟ್ಟು, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸತೊಡಗಿದರು ವರ್ಧನ್. ಆದರೆ ತಿಂಗಳಲ್ಲಿ ಎರಡು, ಮೂರು ದಿನ ಮಾತ್ರ ಶೂಟಿಂಗ್ ಇರುತ್ತಿದ್ದ ಕಾರಣ, ಜೀವನಕ್ಕಾಗಿ ಬಾಡಿಗೆ ಮನೆ ಖಾಲಿ ಮಾಡುವುದು, ಕ್ಯಾಟರಿಂಗ್, ಮನೆಗಳ ಪೇಂಟಿಂಗ್ ಕೆಲಸ ಮಾಡುತ್ತಿದ್ದೆ. ಬನಶಂಕರಿ ಕ್ಲಬ್, ಪೊಲೀಸ್ ಕ್ವಾಟ್ರಸ್ಗೆಲ್ಲಾ ನಾವೇ ಪೇಂಟ್ ಮಾಡಿದ್ದು ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ವರ್ಧನ್ ತೀರ್ಥಹಳ್ಳಿ.ಈ ಸ್ಟ್ರಗಲ್ ನಡುವೆಯೇ ಅವರಿಗೆ ಆಂತರ್ಯ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ನಂತರ ದೊಡ್ಡಣ್ಣ ಚಿಕ್ಕಣ್ಣ, ಅರುಂಧತಿ, ಕುಲಗೌರವ, ಸುಕನ್ಯ, ಸಿಂಧೂರ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. “ ಮೂರ್ನಾಲ್ಕು ವರ್ಷ ಧಾರಾವಾಹಿಗಳಲ್ಲೇ ನಟಿಸಿದೆ. ಅದರ ನಡುವೆಯೇ ಸಿನಿಮಾಗಳಲ್ಲೂ ನಟಿಸತೊಡಗಿದೆ. ಕ್ರಮೇಣ ಉಗ್ರಂ ಚಿತ್ರದಲ್ಲಿ ಅವಕಾಶ ದೊರೆಯಿತು. ಮತ್ತೆ ನಾನು ಹಿಂತಿರುಗಿ ನೋಡಿಲ್ಲ. ಆ ಬಳಿಕ ಡಯಾನಾ ಹೌಸ್, ಟೈಟಲ್ ಬೇಕಾ, ನಮಕ್ ಹರಾಂ ಸೇರಿದಂತೆ ಕೆಲ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸಿದೆ. ಜೊತೆಗೆ ಸುದೀಪ್ ಸರ್, ದರ್ಶನ್ ಸರ್, ಯಶ್ ಸರ್, ಗಣೇಶ್ ಸರ್ ಸಿನಿಮಾಗಳಲ್ಲೂ ನಟಿಸಿದೆ. ಶಿವಣ್ಣ ಮತ್ತು ಪುನೀತ್ ಹೊರತುಪಡಿಸಿ ಬಹುತೇಕ ಎಲ್ಲ ಸ್ಟಾರ್ಸ್ ಜೊತೆ ನಟಿಸಿದ್ದೇನೆ,” ಎಂದು ತಮ್ಮ ಸಿನಿಕರಿಯರ್ ಕುರಿತು ಮಾಹಿತಿ ನೀಡುತ್ತಾರೆ ವರ್ಧನ್.ಕರಿಯ 2 ಚಿತ್ರದಲ್ಲಿ ವರ್ಧನ್ ಅವರ ನಟನೆ ನೋಡಿ ಹಫ್ತಾ ಚಿತ್ರದಲ್ಲಿ ಸೋಲೋ ಹೀರೋ ಆಗುವ ಅವಕಾಶ ದೊರೆಯಿತು. ಈಗ ದಾರಿ ಯಾವುದಯ್ಯಾ ವೈಕುಂಠಕೆ ಎಂಬ ಮತ್ತೊಂದು ಚಿತ್ರದಲ್ಲಿ ನಾಯಕನಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಡಬ್ಬಿಂಗ್ ಹಂತದಲ್ಲಿದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಚಿತ್ರ ಕೂಡ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.
ಸದ್ಯ ಲಾಕ್ಡೌನ್ನಿಂದಾಗಿ ಹುಟ್ಟೂರಿಗೆ ತೆರಳಿರುವ ವರ್ಧನ್, ಮತ್ತೆ ತೋಟದ ಕೆಲಸಗಳಲ್ಲಿ ತೊಡಗಿದ್ದಾರೆ. ಶಾಲಾ ರಜೆಯ ದಿನಗಳಲ್ಲಿ ಬಾಲ್ಯದಲ್ಲಿ ಬೇರೆಯವರ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದೆವು, ಈಗ ನಮ್ಮ ತೋಟದಲ್ಲೇ ಕೆಲಸ ಮಾಡುತ್ತಿದ್ದೇನೆ. ನಾಲ್ಕು ಎಕರೆ ಕೊಟ್ಟಿಗೆಗೆ ಗೊಬ್ಬರ ಶೇಖರಿಸಿದ್ದೇವೆ. ನಾನೊಬ್ಬನೇ ಒಂದು ಎಕರೆಯಲ್ಲಿ ತರಕಾರಿ ಹಾಕಿದ್ದೇನೆ. ಅಡಿಕೆ ಕೂಡ ಬೆಳೆಯುತ್ತೇವೆ. ಸದ್ಯ ಸಿನಿಮಾ ಕೆಲಸಗಳ ಮತ್ತೆ ಶುರುವಾಗುವವರೆಗೂ ತೋಟದ ಕೆಲಸಗಳಲ್ಲೇ ಬ್ಯುಸಿ ಅಂತಾರೆ ವರ್ಧನ್.
Published by: Rajesh Duggumane
First published: August 14, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading