HOME » NEWS » State » THIS RESULT IS PROOF THAT MODI POPULARITY HAS NOT DIMINISHED SAYS PRAHLAD JOSHI RH

ಮೋದಿ ಜನಪ್ರಿಯತೆ ಎಲ್ಲೂ ಕಡಿಮೆ ಆಗಿಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ; ಪ್ರಹ್ಲಾದ್ ಜೋಶಿ

ಕೊರೋನಾ ನಿರ್ವಹಣೆ ಬಿಹಾರ ಚುನಾವಣೆಯಲ್ಲಿ ಚರ್ಚೆ ನಡೆದಿತ್ತು. ಈಗ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಶ್ಚಿಮ ಬಂಗಾಳದಲ್ಲೂ ಟಿಎಂಸಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

news18-kannada
Updated:November 10, 2020, 8:04 PM IST
ಮೋದಿ ಜನಪ್ರಿಯತೆ ಎಲ್ಲೂ ಕಡಿಮೆ ಆಗಿಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ; ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
  • Share this:
ನವದೆಹಲಿ: 58 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ. ಬಿಹಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದೆ. ಕರ್ನಾಟಕದಲ್ಲಿ ಪರಿಷತ್ ಚುನಾವಣೆ ನಡೆದಿದೆ. 58 ಕ್ಷೇತ್ರಗಳ ಪೈಕಿ 40ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆದ್ದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಚುನಾವಣೆ ಫಲಿತಾಂಶ ವಿಷಯವಾಗಿ ಪ್ರತಿಕ್ರಿಯಿಸಿದ ಜೋಶಿ ಅವರು, ಕೊರೋನಾ ಸಂಕಷ್ಟದಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಮಾತುಗಳು ಕೇಳಿ ಬಂದಿದ್ದವು. ಆದರೆ ಜನರು ಸ್ಪಷ್ಟವಾದ ಜನಾದೇಶ ನೀಡಿದ್ದಾರೆ. ಪ್ರಧಾನಿ ಮೋದಿ ಜನಪ್ರಿಯತೆ ಎಲ್ಲೂ ಕಡಿಮೆ ಆಗಿಲ್ಲ. ಪಾರ್ಟಿ ಅಸ್ತಿತ್ವ ಕಡಿಮೆ ಇರುವ ತೆಲಂಗಾಣದಲ್ಲೂ ಗೆದ್ದಿದ್ದೇವೆ. ರಾಜ್ಯದಲ್ಲಿ ಎರಡು ಬೈ ಎಲೆಕ್ಷನ್ ನಾಲ್ಕು ಪರಿಷತ್ ನಲ್ಲಿ ನಡೆದಿದೆ. ಎರಡು ವಿಧಾನಸಭೆ ಗೆದ್ದಿದೆ. ಸಿದ್ದರಾಮಯ್ಯ ಅವರು ಮೋದಿ ಅಲೆ ಎಲ್ಲಿದೆ ಎಂದು ಕೇಳಿದ್ದರು. ಈಗ ಅವರಿಗೆ ಮೋದಿ ಅಲೆ ಎಲ್ಲಿದೆ ಅಂತಾ ಗೊತ್ತಾಗಿದೆ ಎಂದು ತಿರುಗೇಟು ನೀಡಿದರು.

ಇದನ್ನು ಓದಿ: ನಾನು ಫೆಲ್ಯೂರ್ ಆಗಿದ್ದೇನೆ, ಸೋಲಿನ ಹೊಣೆಯನ್ನು ನಾನೇ ಹೊರಲಿದ್ದೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಪರಿಷತ್​ನಲ್ಲೂ ಮುನ್ನಡೆ ಸಾಧಿಸಿದ್ದೇವೆ. ಪಿಎಂ ಮತ್ತು ಸಿಎಂ ನೇತೃತ್ವದ ಸರಕಾರಕ್ಕೆ ಸಹಮತ ವ್ಯಕ್ತಪಡಿಸಿ ಜನರು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಮತ್ತು ಎರಡು ಉಪಚುನಾವಣೆ ಮೂಲಕ ಬಿಎಸ್‌ವೈ ಆಡಳಿತ ಮೆಚ್ಚಿಕೊಂಡಿದ್ದಾರೆ. ಸಿಎಂ ಮತ್ತು ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ಸಿಗಲಿದೆ.  ಮತ್ತೆ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ನಿರ್ವಹಣೆ ಬಿಹಾರ ಚುನಾವಣೆಯಲ್ಲಿ ಚರ್ಚೆ ನಡೆದಿತ್ತು. ಈಗ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಶ್ಚಿಮ ಬಂಗಾಳದಲ್ಲೂ ಟಿಎಂಸಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
Published by: HR Ramesh
First published: November 10, 2020, 8:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories