• Home
  • »
  • News
  • »
  • state
  • »
  • Shivamogga: ಚಾರ್ಲಿ 777​ ಸಿನಿಮಾದ ಹಾಗೇ ಇದೆ ಈ ರಿಯಲ್​ ಸ್ಟೋರಿ!

Shivamogga: ಚಾರ್ಲಿ 777​ ಸಿನಿಮಾದ ಹಾಗೇ ಇದೆ ಈ ರಿಯಲ್​ ಸ್ಟೋರಿ!

ಪಪ್ಪಿ

ಪಪ್ಪಿ

8 ತಿಂಗಳ ಈ ನಾಯಿಯ ಹೆಸರು ಪಪ್ಪಿ. ನಾಗರತ್ನ ಶಾಸ್ತ್ರಿರವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀರ್ಥಹಳ್ಳಿಯ ಕಿರಣ್ ಆಸ್ಪತ್ರೆಯಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನೀಡಲಾಗುತಿತ್ತು. ಆಗ ಈ ನಾಯಿ ಆಸ್ಪತ್ರೆಯ ಬಾಗಿಲ ಬಳಿ ನಿಂತು ತನ್ನ ಓನರ್ ಹೇಗಿದ್ದಾರೆ? ಅವರಿಗೆ ಏನು ಮಾಡುತ್ತಿದ್ದಾರೆ? ಎಂಬ ದಾವಂತದಿಂದ ಕಾದು ಕುಳಿತಿತ್ತು. 

ಮುಂದೆ ಓದಿ ...
  • Share this:

ಮೂಕ ಪ್ರಾಣಿಗಳೇ ಹಾಗೆ ತಮ್ಮ ಮಾಲಿಕರನ್ನು ಸದಾ ಪ್ರೀತಿಯಿಂದ ನೋಡಿಕೊಳ್ಳುತ್ತವೆ. ಅದರಲ್ಲೂ ನಾಯಿಗಳು (Dog) ತಮ್ಮ ಮಾಲೀಕನನ್ನು ಪ್ರೀತಿಸುವಷ್ಟು ಇನ್ಯಾವ ಪ್ರಾಣಿಗಳೂ ಪ್ರೀತಿಸುವುದಿಲ್ಲ ಎಂದರೆ ತಪ್ಪಾಗಲಾರದು. ನೀವೆಲ್ಲರೂ ಚಾರ್ಲಿ (Charli) ಸಿನಿಮಾ ನೋಡಿರ್ತಿರಾ. ಅಲ್ಲಿ ಹೇಗೆ ನಾಯಿ ತನ್ನ ಮಾಲಕಿಯ ಆರೋಗ್ಯ ನೋಡಿಕೊಳ್ಳುತ್ತದೆಯೋ ಅಥವಾ ಓನರ್ (Owner)​ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆಯೋ ಅದೇ ರೀತಿ ಇಲ್ಲಿಯೂ ಒಂದು ಘಟನೆ (Insident) ನಡೆದಿದೆ. ತೀರ್ಥಹಳ್ಳಿಯಲ್ಲಿ ಇಂತಹದೇ ಸಹ ನಾಯಿ ತನ್ನ ಮಾಲಕಿಗಾಗಿ ಆಸ್ಪತ್ರೆ (Hospital) ಬಾಗಿಲಲ್ಲಿ ಕಾದು ಕುಳಿತ ದೃಷ್ಯ ಕಂಡುಬಂದಿದೆ.


ಇತ್ತೀಚೆಗೆ ಬಿಡುಗಡೆಯಾದ 'ಚಾರ್ಲಿ 777' ಸಿನಿಮಾದ ದೃಶ್ಯವನ್ನು ನೆನಪಿಸುವಂತೆ ಈ ನಾಯಿ ಮಾಡಿದೆ. ಆಸ್ಪತ್ರೆಯಲ್ಲಿ ಇರುವ ಇತರರಿಗೆ ಇದು ಅಚ್ಚರಿ ಮೂಡಿಸಿದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಗರತ್ನ ಎಂಬ ವೃದ್ಧೆಯನ್ನು ನೋಡಿಕೊಳ್ಳಲು ತಾನೂ ಆಸ್ಪತ್ರೆಗೆ ಬಂದಿದೆ ಈ ನಾಯಿ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಹಾಗೂ ಸುಧಾ ಜೋಯಿಸ್ ಅವರ ಮನೆ ನಾಯಿ ಇದಾಗಿದ್ದು. ಅವರನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ತಾನೂ ಹಿಂದಿನಿಂದ ಬಂದಿದೆ.


ಆಸ್ಪತ್ರೆಯ ಬಾಗಿಲಲ್ಲಿ ಕಾದು ಕುಳಿತ ಫೋಟೊ ವೈರಲ್
8 ತಿಂಗಳ ಈ ನಾಯಿಯ ಹೆಸರು ಪಪ್ಪಿ. ನಾಗರತ್ನ ಶಾಸ್ತ್ರಿರವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀರ್ಥಹಳ್ಳಿಯ ಕಿರಣ್ ಆಸ್ಪತ್ರೆಯಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನೀಡಲಾಗುತಿತ್ತು. ಆಗ ಈ ನಾಯಿ ಆಸ್ಪತ್ರೆಯ ಬಾಗಿಲ ಬಳಿ ನಿಂತು ತನ್ನ ಓನರ್ ಹೇಗಿದ್ದಾರೆ? ಅವರಿಗೆ ಏನು ಮಾಡುತ್ತಿದ್ದಾರೆ? ಎಂಬ ದಾವಂತದಿಂದ ಕಾದು ಕುಳಿತಿತ್ತು.


ಕಿರಣ್ ಆಸ್ಪತ್ರೆಗೆ ದಾಖಲಾದ ವೃದ್ಧೆ
ಶಿವಮೊಗ್ಗದ ಕಿರಣ್ ಆಸ್ಪತ್ರೆಗೆ ದಾಖಲಾಗಿರುವ ವೃದ್ಧೆ ತಮ್ಮ ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಿಕೊಂಡು ಆಸ್ಪತ್ರೆಯಿಂದ ಹೊರಬರುವಾಗಲೂ ಸಹ ಆ ನಾಯಿ ಪಪ್ಪಿ ಬಾಗಿಲ ಬಳಿಯೇ ನಿಂತಿತ್ತು. ಆಸ್ಪೆತ್ರೆಯಿಂದ ನಾಗರತ್ನಮ್ಮ ಡಿಸ್ಟಾರ್ಜ್ ಆದಾಗ, ಆಂಬುಲೆನ್ಸ್ ಬಳಿ ಹೋಗಿ ಬಾಲ ಅಲ್ಲಾಡಿಸುತ್ತಿತ್ತು. ಇದನ್ನು ಕಂಡು ಎಲ್ಲರಿಗೂ ಒಮ್ಮೆ ಆ ನಾಯಿಯ ಪ್ರೀತಿಯ ಬಗ್ಗೆ ಖುಷಿ ಆಗಿತ್ತು. ಇದರೊಟ್ಟಿಗೆ ಅವರೆಲ್ಲರಿಗೂ ಚಾರ್ಲಿ ಚಿತ್ರದ ನೆನಪಾಯ್ತು.


ಈ ದೃಷ್ಯವನ್ನು ಸೆರೆ ಹಿಡಿದ ಜನರು
ಅಲ್ಲೇ ಆಸ್ಪತ್ರೆಯಲ್ಲಿದ್ದ ಕೆಲವುರು ಈ ನಾಯಿಯ ಫೋಟೋ ತೆಗೆದಿದ್ದಾರೆ. ನೀವೂ ಸಹ ಈ ಫೋಟೋದಲ್ಲಿ ಅದನ್ನು ಗಮನಿಸಬಹುದು.


ಪಪ್ಪಿ


ಹುಡುಕಾಟ ನಡೆಸುವಾಗ ನಾಪತ್ತೆಯಾಗಿದ್ದ ಟಾಮಿ! ಇದೊಂದು ಹಳೆ ಘಟನೆ
ಟಾಮಿ ಎಂಬ ನಾಯಿ ಊರವರ ಜೊತೆಗೂಡಿ ತನ್ನ ಪ್ರೀತಿಯ ಯಜಮಾನನನ್ನು ಹುಡುಕಲು ಮುಂದಾಯಿತು. ಹೀಗೆ ಹುಡುಕುವಾಗ ಟಾಮಿ ಎಲ್ಲೋ ನಾಪತ್ತೆಯಾಯಿತು. ಸ್ವಲ್ಪ ಹೊತ್ತಿನಲ್ಲೇ ದೂರದಲ್ಲಿ ಟಾಮಿ ಬೊಗಳುವುದು ಕೇಳಿಸಿತು. ಊರವರು ಅತ್ತ ಧಾವಿಸಿದಾಗ ಅಲ್ಲೇ ಮರವೊಂದರ ಬಳಿ ಶೇಖರಪ್ಪನವರು ಪ್ರಜ್ಞಾಹೀನರಾಗಿ ಬಿದ್ದಿದ್ದರು. ಹೀಗೆ ಟಾಮಿ ಶೇಖರಪ್ಪನವರ ಜೀವ ಉಳಿಸಿತು.


ಏಳು ವರ್ಷಗಳಿಂದ ಶೇಖರಪ್ಪನವರ ಮನೆ ಸದಸ್ಯ ಈ ಟಾಮಿ
ಶೇಖರಪ್ಪನವರ ನಾಯಿ ಟಾಮಿ. ಕಳೆದ ಏಳು ವರ್ಷಗಳಿಂದ ಶೇಖರಪ್ಪ ಮತ್ತು ಅವರ ಕುಟುಂಬದ ಮಿತ್ರನಂತೆಯೇ ಇದೆ.  ಶೇಖರಪ್ಪ ಸೆಖೆ ಮತ್ತು ನಿಶ್ಶಕ್ತಿಯಿಂದ ಸೌದೆ ತರಲು ಹೋದಾಗ ಅಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಟಾಮಿ ಶೇಖರಪ್ಪನವರನ್ನು ಹುಡುಕುತ್ತಿದ್ದ ಊರವರನ್ನು ಆ ಸ್ಥಳಕ್ಕೆ ಕರೆದೊಯ್ದಿತು.


ಹೀಗೆ ಅನೇಕ ಘಟನೆಗಳು ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ. ಯಾಕೆಂದರೆ ನಾಯಿಗಳು ಮನುಷ್ಯನನ್ನು ಅಷ್ಟೊಂದು ಪ್ರೀತಿಸುತ್ತವೆ.

First published: