HOME » NEWS » State » THIS POOR BOY OF MANGALORE GET DOCTORATE FROM MANGALORE UNIVERSITY KKM LG

ಮೀನು ಮಾರಿ ದುಡಿದು ಓದಿ ಡಾಕ್ಟರೇಟ್ ಪದವಿ ಗಳಿಸಿದ ನಿಯಾಜ್ ಪಣಕಜೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಣಕಜೆ ನಿವಾಸಿ ನಿಯಾಜ್ ಬೆಳೆದು ಬಂದ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಆದರೆ ಛಲ ಮಾತ್ರ ನಿಶ್ಚಲವಾಗಿತ್ತು. ಹೀಗಾಗಿ ಬಡತನವನ್ನೇ ಸವಾಲಾಗಿಸಿ ಕಲಿಕೆಯ ಏಕೈಕ ಉದ್ದೇಶದಿಂದ ಕೂಲಿ ಕೆಲಸ ಮಾಡಿ ತನ್ನ ಕನಸನ್ನು ನನಸಾಗಿಸಿದ್ದಾರೆ.

news18-kannada
Updated:April 19, 2021, 7:47 AM IST
ಮೀನು ಮಾರಿ ದುಡಿದು ಓದಿ ಡಾಕ್ಟರೇಟ್ ಪದವಿ ಗಳಿಸಿದ ನಿಯಾಜ್ ಪಣಕಜೆ
ನಿಯಾಜ್​ ಪಣಕಜೆ
  • Share this:
ಮಂಗಳೂರು(ಏ.19): ವಿದ್ಯೆಯೇ ವಿನಯಕ್ಕೆ ಭೂಷಣ ಅನ್ನೋ ಮಾತಿದೆ. ಆದರೆ ವಿದ್ಯೆ ಅನ್ನುವಂತಹದ್ದು ಸುಲಭದಲ್ಲಿ ಯಾರ  ತಲೆಗೂ ಹತ್ತೋದಿಲ್ಲ. ವಿದ್ಯೆ ಗಳಿಸೋಕೆ ಬಹಳ ಶ್ರಮ, ಅವಿರತ ಪ್ರಯತ್ನ ಬೇಕಾಗುತ್ತದೆ .ಆದರೂ ವಿದ್ಯೆ ಸಿದ್ಧಿಸಿಕೊಂಡವರಿಗೆ ನೂರಾರು ಅಡೆತಡೆಗಳು ಬರುತ್ತದೆ. ಅದರಲ್ಲೂ ಬಡ ಕುಟುಂಬದಲ್ಲಿ ಜನಿಸಿದವರಿಗೆ ವಿದ್ಯೆ ಅನ್ನುವಂತಹದು ದೂರದ ಬೆಟ್ಟವಾಗಿಬಿಡುತ್ತದೆ. ಮಧ್ಯಮ ವರ್ಗದ ಕುಟುಂಬದವರಿಗೆ ಉನ್ನತ ಶಿಕ್ಷಣ ಅನ್ನೋದು ಗಗನಕುಸುಮವಾಗಿ ಬಿಡುತ್ತದೆ. ಆದರೆ ಬಂದಂತಹ ಅಡೆತಡೆಗಳನ್ನೆಲ್ಲಾವನ್ನೂ ಮೆಟ್ಟಿ ನಿಂತು ವಿದ್ಯಾ ಸಾಧಕ ಯಶಸ್ಸಿನ ಗುರಿ ಮುಟ್ಟಿದ್ದಾನೆ.

ನೀವು ನೋಡುತ್ತಿರುವ ಈ ವಿದ್ಯಾ ಸಾಧಕನ ಹೆಸರು ನಿಯಾಜ್ ಪಣಕಜೆ. ನಿಯಾಜ್ ಪಣಕಜೆ ಪಡೆದಿದ್ದು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಡಾಕ್ಟರೇಟ್. ನಿಯಾಜ್ ಪಣಕಜೆ, ಡಾ.ನಿಯಾಜ್ ಪಣಕಜೆ ಯಾಗಿ ಬದಲಾದ ಹಾದಿ ಬಹಳ‌ ರೋಚಕವಾಗಿದೆ. ಝಿರೋದಿಂದ ಬಂದ ನಿಯಾಜ್ ಹಿರೋವಾಗಿ ಬದಲಾದ ಕಥೆಯೇ ಬಹಳ ಪ್ರೇರಣಾದಾಯಕವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಣಕಜೆ ನಿವಾಸಿ ನಿಯಾಜ್ ಬೆಳೆದು ಬಂದ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಆದರೆ ಛಲ ಮಾತ್ರ ನಿಶ್ಚಲವಾಗಿತ್ತು.ಹೀಗಾಗಿ ಬಡತನವನ್ನೇ ಸವಾಲಾಗಿಸಿ ಕಲಿಕೆಯ ಏಕೈಕ ಉದ್ದೇಶದಿಂದ ಕೂಲಿ ಕೆಲಸ ಮಾಡಿ ತನ್ನ ಕನಸನ್ನು ನನಸಾಗಿಸಿದ್ದಾರೆ.

ಭಾರತಕ್ಕೆ ಪಾಕ್ ಹೋಲಿಸಿದ ಖ್ಯಾತ ನಿರ್ದೇಶಕ; ಪಾಕಿಸ್ತಾನಕ್ಕೆ ಏರ್ ಟಿಕೆಟ್ ಬುಕ್ ಮಾಡಿದ ಅಭಿಮಾನಿ!

ಅನಾರೋಗ್ಯ ಪೀಡಿತ ತಂದೆ, ಬೀಡಿ ಕಟ್ಟಿ ಮನೆ ತುಂಬಾ ಇದ್ದ ಮಕ್ಕಳ ಹೊಟ್ಟೆಗೆ ಉಣಬಡಿಸುತ್ತಿದ್ದ ತಾಯಿ,ಇದರ ನಡುವೆ ವಿದ್ಯೆಯ ಹುಚ್ಚು ಆವರಿಸಿದ್ದ ನಿಯಾಜ್ ಶಾಲೆಯ ನಡುವೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಉನ್ನತ ಶಿಕ್ಷಣ ಪಡೆಯುವವರೆಗೂ ಕೂಲಿ ಕೆಲಸ ಮಾಡುತ್ತಿದ್ದರು. ಬಾವಿ ತೋಡುವುದು, ಮಣ್ಣು ಎತ್ತವುದು, ಪರಿಸರ ಸ್ವಚ್ಛತೆ, ಸೈಕಲ್ ರಿಪೇರಿ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ಗಾರೆ ಕೆಲಸ, ಮೀನು ಮಾರಾಟ, ಬೆಳಗ್ಗಿನ ಜಾವ ಹಾಲು ಪೇಪರ್ ಮಾರಾಟ, ಸಂಜೆ ಆಟೋ ರಿಕ್ಷಾದಲ್ಲಿ ದುಡಿಮೆ, ಉನ್ನತ ಶಿಕ್ಷಣ ವಿಧ್ಯಾಭ್ಯಾಸದ ವೇಳೆ ಲಾಡ್ಜ್ ನಲ್ಲಿ ರಿಸೆಪ್ಷನಿಸ್ಟ್ ಹೀಗೆ ಎಲ್ಲಾ ಕೆಲಸ ಮಾಡಿ ನಿಯಾಝ್ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಪ್ರಸ್ತುತ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಕಾಮರ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿರುವ ನಿಯಾಜ್ ಮಂಡಿಸಿರುವ ರೋಲ್ ಆಫ್ ಕೋ-ಆಪರೇಟಿವ್ ಬ್ಯಾಂಕಿಗ್ ಇನ್ ಸೋಷಿಯೋ ಎಕಾನಾಮಿಕ್ ಡೆವಲಪ್‌ಮೆಂಟ್ ಆಫ್ ರೂರಲ್ ಮುಸ್ಲಿಂ ಕಮ್ಯನಿಟೀಸ್-ಎ ಸ್ಟಡಿ ಇನ್ ಡಿಕೆ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪಣಕಜೆ ನಿವಾಸಿ ಇಬ್ರಾಹಿಂ ಮತ್ತು ಝಬೇದಾ ದಂಪತಿಯ ಪುತ್ರ ನಿಯಾಜ್ ಪಣಕಜೆ ಕಷ್ಟಪಟ್ಟು ಓದಿದರೂ ಯಶಸ್ಸು ಸಿದ್ಧಿಸಿಕೊಂಡರೂ ಬೆಳೆದು ಬಂದ ಹಾದಿ ಮರೆಯಲಿಲ್ಲ. ತನ್ನ ಸಾಧನೆ ಬಗ್ಗೆ ಮಾತನಾಡಿರುವ ನಿಯಾಜ್ ಪಣಕಜೆ ಇಂದು ಪಿ ಎಚ್ ಡಿ ಪದವಿ ಪಡೆದರೂ ಬಂದ ದಾರಿಯನ್ನು ಮರೆತಿಲ್ಲ. ಪದವಿ ಸ್ನಾತಕೋತ್ತರ ವಿದ್ಯಾರ್ಥಿ ಗಳಿಗೆ ಕಾರ್ಯಾಗಾರ, ಪ್ರೇರಣಾ ಶಿಬಿರಗಳನ್ನು ನಡೆಸುತ್ತಿರುತ್ತೇನೆ. ಕ್ರಿಕೆಟ್ ಮತ್ತಿತರ ಕ್ರೀಡೆಗಳಲ್ಲೂ ತೊಡಗಿಸಿಕೊಂಡಿದ್ದೇನೆ. ತನ್ನ ಸಾಧನೆಯ ಹಿಂದೆ ತಂದೆ-ತಾಯಿಯ ತ್ಯಾಗವಿದೆ. ಅದನ್ನು ಮರೆಯಲು ಸಾಧ್ಯವಿಲ್ಲ ಅಂತಾ ಹೇಳಿದ್ದಾರೆ.
Published by: Latha CG
First published: April 19, 2021, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories