HOME » NEWS » State » THIS MAN OF KOLAR DISTRIBUTE ESSENTIAL THINGS AND FOOD TO PEOPLE AMID COVID 19 CRISIS RRK LG

Corona Help: ದುಡಿದ ಅರ್ಧ ಲಾಭದಲ್ಲಿ ಬಡವರಿಗೆ ದಿನಸಿ, ಔಷಧಿ, ಬಟ್ಟೆ, ಚಪ್ಪಲಿ ವಿತರಿಸುತ್ತಿರುವ ಕೋಲಾರದ ವ್ಯಕ್ತಿ

ಅಶಕ್ತರಾಗಿರೊ ವೃದ್ದರು, ವಿಶೇಷ ಚೇತನರು, ಕೂಲಿ ಕೆಲಸ ಮಾಡೋರಿಗೆ ಚಪ್ಪಲಿ, ಬಟ್ಟೆ ನೀಡುವ ಜೊತೆಗೆ ದಿನಸಿ ವಸ್ತುಗಳ ಸಹಾಯ ಮಾಡುತ್ತಾ ಬಂದಿದ್ದಾರೆ.

news18-kannada
Updated:May 2, 2021, 7:59 AM IST
Corona Help: ದುಡಿದ ಅರ್ಧ ಲಾಭದಲ್ಲಿ ಬಡವರಿಗೆ ದಿನಸಿ, ಔಷಧಿ, ಬಟ್ಟೆ, ಚಪ್ಪಲಿ ವಿತರಿಸುತ್ತಿರುವ ಕೋಲಾರದ ವ್ಯಕ್ತಿ
ಅಗತ್ಯ ವಸ್ತುಗಳನ್ನು ನೀಡುತ್ತಿರುವ ದಿನಸಿ ಅಂಗಡಿ ಮಾಲೀಕ
  • Share this:
ಕೋಲಾರ(ಮೇ 02): ವ್ಯಾಪಾರಂ ದ್ರೋಹ ಚಿಂತನಂ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ.  ಜೊತೆಗೆ ದುಡಿದ ದುಡ್ಡಲ್ಲಿ ಆಸ್ತಿ ಪಾಸ್ತಿ ಮಾಡೋಣ ಎಂಬ ಯೋಚನೆ ಇರೋ ವ್ಯಾಪಾರಿಗಳೇ ಈ ಕಾಲದಲ್ಲಿ ಹೆಚ್ಚು, ಆದರೆ,  ಕೋಲಾರದಲ್ಲಿನ ಓರ್ವ ದಿನಸಿ ವ್ಯಾಪಾರಿ ಮಾತ್ರ, ತಾನು ದುಡಿದ ದುಡ್ಡಲ್ಲೇ ಬಡವರಿಗೆ ದಿನಸಿ, ಔಷಧಿ, ಬಟ್ಟೆಯನ್ನ ನೀಡುತ್ತಾ, ಸದ್ದಿಲ್ಲದೆ ಬಡವರ ಪಾಲಿಗೆ ನೆರವಾಗಿದ್ದಾರೆ. 

ಕೊರೋನಾ ಕಷ್ಟದ ಕಾಲದಲ್ಲಿ ಅದೆಷ್ಟೊ ದಾನಿಗಳು ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಉಳ್ಳವರು ದಾನ ಮಾಡೋದು ಒಂದೆಡೆಯಾದರೆ, ವ್ಯಾಪಾರಿಗಳು ತಾವು ದುಡಿದ ಹಣದಲ್ಲೆ ಸಮಾಜಸೇವೆ ಮಾಡೋದು ಕೊಂಚ ವಿರಳ ಎಂದರೆ ತಪ್ಪಾಗಲಾರದು. ಇಂತದ್ದೇ ಸಾಲಿಗೆ, ಕೋಲಾರ ಜಿಲ್ಲೆಯ ಶ್ರೀನಿವಾಸರಪುರ ಪಟ್ಟಣದ ನಿವಾಸಿಯಾಗಿರುವ 50 ವರ್ಷದ ಶ್ರೀನಿವಾಸ್ ಕೂಡ ಸೇರ್ಪಡೆಯಾಗಿದ್ದಾರೆ.

ಶ್ರೀನಿವಾಸಪುರ ಪಟ್ಟಣದಲ್ಲಿ ಒಂದು ಸ್ವಂತ ದಿನಸಿ ಹೋಲ್‍ಸೇಲ್ ಮಳಿಗೆಯನ್ನ ಇಟ್ಟುಕೊಂಡು, ಪತ್ನಿ ಹಾಗೂ ಓರ್ವ ಮಗಳ ಜೊತೆಗೆ ಜೀವನ ನಡೆಸುತ್ತಿರುವ ಇವರು, ಕಳೆದ 20 ವರ್ಷದಿಂದ ಆಗಾಗ್ಗೆ ಹಬ್ಬದ ಸಮಯದಲ್ಲಿ ದಾನ ಧರ್ಮ ಮಾಡುತ್ತಿದ್ದವರು. ಆದರೆ ಕಳೆದ ಕೊರೋನಾ ಲಾಕ್‍ಡೌನ್ ವೇಳೆಯಿಂದ ಇಲ್ಲಿಯವರೆಗೂ ಪುಲ್ ಟೈಂ ದಾನಿಯಾಗಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕೋಲಾರ ಜಿಲ್ಲೆಯ ಆರೂ ತಾಲೂಕಿನಲ್ಲಿಯು ಇವರು ಬಡವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.  ಸಾಮಾಜಿಕ ಜಾಲತಾಣ ಮೂಲಕ ಬಡವರಿಗೆ ನೆರವಿನ ಹಸ್ತ ಚಾಚಲು, ಅಮ್ಮ ಟ್ರಸ್ಟ್ ಎನ್ನುವ ಹೆಸರಲ್ಲಿ ಖಾತೆ ತೆರೆದಿದ್ದಾರೆ.  ಅಲ್ಲಿ ಬಡವರಿಗಾಗಿ ಕೆಲವರ  ಮೂಲಕ ಶೋಧ ನಡೆಸಿ, ಅಲ್ಲಿಂದ ಬಂದ ಮಾಹಿತಿ ಆಧಾರದ ಮೇಲೆಯೇ ತಾವೇ ಖುದ್ದಾಗಿ ತೆರಳಿ ದಿನಸಿ , ಔಷಧಿ , ತರಕಾರಿ , ಬಟ್ಟೆಯನ್ನ ನೀಡುತ್ತಿದ್ದಾರೆ‌.

ಕೋವಿಡ್ ಸಂಕಷ್ಟದಿಂದ ಹೊರಬರಲು ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ; ಡಿಸಿಎಂ ಅಶ್ವತ್ಥ ನಾರಾಯಣ

ದಿನಸಿ ಅಂಗಡಿಯ ಮಾಲೀಕರಾಗಿರೊ ಇವರು, ಒಂದು ತಿಂಗಳಿಗೆ ಹೆಚ್ಚು ಕಡಿಮೆ 30 ಸಾವಿರ ಹಣ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ವಾರಕ್ಕೆ ಕನಿಷ್ಟ ಐದು ಮಂದಿಗೆ ತಲಾ ಒಂದೊಂದು ಸಾವಿರ ಮೌಲ್ಯ ಬೆಲೆ ಬಾಳುವ ಅಗತ್ಯ ಸಾಮಗ್ರಿಯುಳ್ಳ ಕಿಟ್‍ಗಳನ್ನ ನೀಡುತ್ತಿದ್ದು, ದುಡಿದ ಲಾಭದಲ್ಲಿ ಶೇಖಡಾ 50 ರಷ್ಟು ಹಣವನ್ನ ಸಮಾಜಸೇವೆಗೆ  ಖರ್ಚು ಮಾಡುತ್ತಿದ್ದಾರೆ. ಕಡು ಬಡತನದ ಕುಟುಂಬದಿಂದ ಬಂದಿರುವ ಇವರು, ಬಡವರ ಕಷ್ಟ ತಿಳಿದೇ ದಾನ ಧರ್ಮ ಮಾಡ್ತಿರೋದಾಗಿ ತಿಳಿಸಿದ್ದಾರೆ.

ಇವರ ದಿನಸಿ ಕಿಟ್‍ನಲ್ಲಿ ಕೇವಲ ಆಹಾರ ಪಧಾರ್ಥಗಳೇ ಅಲ್ಲದೆ, ವೃದ್ದರು ನೀಡುವ ಔಷಧಿಯ ಚೀಟಿಯಲ್ಲಿರೊ ವಸ್ತುಗಳನ್ನ ಒಂದು ತಿಂಗಳಿಗೆ ಆಗುವಷ್ಟು ಔಷಧಿಯನ್ನ ಪ್ರತಿ ತಿಂಗಳು ಐದು ಮಂದಿಗೆ ಕೊಡುತ್ತಿದ್ದಾರೆ. ಅಶಕ್ತರಾಗಿರೊ ವೃದ್ದರು, ವಿಶೇಷ ಚೇತನರು, ಕೂಲಿ ಕೆಲಸ ಮಾಡೋರಿಗೆ ಚಪ್ಪಲಿ, ಬಟ್ಟೆ ನೀಡುವ ಜೊತೆಗೆ ದಿನಸಿ ವಸ್ತುಗಳ ಸಹಾಯ ಮಾಡುತ್ತಾ ಬಂದಿದ್ದಾರೆ. ಕಷ್ಟ ಅರಿತು ಸಹಾಯ ಮಾಡುವರ ಸಂಖ್ಯೆ ತೀರಾ ವಿರಳ. ಇಂತಹ ದಾನಿಗಳಿಂದ ತುಂಬ ಸಹಕಾರಿಯಾಗಿದೆ ಎಂದು ಸಹಾಯ ಪಡೆದವರು ಸಂತಸ ಹಂಚಿಕೊಂಡಿದ್ದಾರೆ.
Youtube Video
ಜಿಲ್ಲೆಯಾದ್ಯಂತ ಯಾರೇ ಬಡವರು ಸಹಾಯ ಕೇಳಿದರೂ ಶಕ್ತಿ ಮೀರಿ ಸಹಾಯ ಮಾಡುವುದಾಗಿ ಶ್ರೀನಿವಾಸ್ ಅವರು ತಿಳಿಸಿದ್ದು, ಇವರ ಈ ಸಮಾಜಮುಖಿ ಕೆಲಸಕ್ಕೆ ಪತ್ನಿ ಹಾಗೂ ಮಗಳು ಬೆಂಬಲಿಸಿದ್ದಾರೆ. ಒಟ್ಟಿನಲ್ಲಿ ಉಳ್ಳವರ ಸಹಾಯಹಸ್ತದ ಜೊತೆಗೆ ಕಷ್ಟಪಟ್ಟು ದುಡಿಯುವ ಮಂದಿಯೂ ಬಡವರ ನೆರವಿಗೆ ಧಾವಿಸಲಿ ಎಂಬುದು ಇವರ ಬೇಡಿಕೆಯಾಗಿದೆ. ಕೊರೊನಾ ಸಮಯದಲ್ಲಿ ಮತ್ತಷ್ಟು ಮಂದಿಗೆ ಸಹಾಯ ಮಾಡಲಿ ಎಂಬುದು ನಮ್ಮ ಆಶಯವೂ ಆಗಿದೆ.
Published by: Latha CG
First published: May 2, 2021, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories