MESCOM ಕೇಂದ್ರದಲ್ಲಿಯೇ ಮಸಾಲೆ ರುಬ್ಬಿಕೊಂಡು ಹೋಗುವ ವ್ಯಕ್ತಿ: ಯಾವ ಅಧಿಕಾರಿಯೂ ತುಟಿಕ್ ಪಿಟಕ್ ಅಂತಿಲ್ಲ

ಹನುಮಂತಪ್ಪ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೋಂಡು ಹೋಗುತ್ತಿದ್ರೂ, ಯಾವ ಅಧಿಕಾರಿಯೂ ಇದನ್ನ ತಡೆದಿಲ್ಲ. ಈ ಸಂಬಂಧ ಮೇಲಾಧಿಕಾರಿಗಳಿಗೂ ದೂರು ಸಲ್ಲಿಸಿಲ್ಲ .

ಮಾರಿಗುಡಿ ಹನುಮಂತಪ್ಪ

ಮಾರಿಗುಡಿ ಹನುಮಂತಪ್ಪ

  • Share this:
ಗ್ರಾಮೀಣ ಭಾಗದಲ್ಲಿ (Rural Area() ವಿದ್ಯುತ್ ಸಮಸ್ಯೆ (Power Supply) ಸಾಮಾನ್ಯವಾಗಿರುತ್ತದೆ. ಒಂದೆರಡು ಗಂಟೆಗಳಾದ್ರೆ ಜನರು ಸಹ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ. ಆದ್ರೆ ಸುಮಾರು ಸಮಯದವರೆಗೆ ವಿದ್ಯುತ್ (Electricity) ಕೈ ಕೊಟ್ಟ್ಟರೆ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಸರಿಯಾದ ಸಮಯಕ್ಕೆ ವಿದ್ಯುತ್ ಪೂರೈಕೆ ಆಗದಿದ್ದಲ್ಲಿ ಹಲವು ಕೆಲಸಗಳು ಸ್ಥಗಿತಗೊಳ್ಳುತ್ತವೆ. ಇಲ್ಲೊಬ್ಬ ವ್ಯಕ್ತಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತು ಪ್ರತಿನಿತ್ಯ ಸ್ಥಳೀಯ ಮೆಸ್ಕಾಂ ಕಚೇರಿಗೆ (MESCOM Office) ಆಗಮಿಸಿ, ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾನೆ. ಇದರ ಜೊತೆಗೆ ತನ್ನ ಮೊಬೈಲ್ ಗಳನ್ನು ಚಾರ್ಜ್ (Mobile Charge) ಮಾಡಿಕೊಳ್ಳುತ್ತಾನೆ. ಕಳೆದ 10  ತಿಂಗಳಿನಿಂದ ಪ್ರತಿನಿತ್ಯ ಮಿಕ್ಸಿ ಜೊತೆ ಬಂದು ಮಸಾಲೆ ರುಬ್ಬಿಕೊಳ್ಳುತ್ತಿದ್ದಾನೆ. ಆದ್ರೆ ಅಚ್ಚರಿ ಅಂದ್ರೆ ಮೆಸ್ಕಾಂನ ಯಾವ ಅಧಿಕಾರಿಯು (MESCOM Staff) ಈತನನ್ನು ತಡೆಯಲು ಮುಂದಾಗಿಲ್ಲ. ಇದಕ್ಕೆ ಕಾರಣ ಅಧಿಕಾರಿ ಆಡಿದ ಆ ಒಂದು ಮಾತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಂಗೋಟೆ (Mangote, Bhadravati) ಗ್ರಾಮದ ನಿವಾಸಿ ಮಾರಿಗುಡಿ ಹನುಮಂತಪ್ಪ ಎಂಬವರು ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಹನುಮಂತಪ್ಪ ಮೆಸ್ಕಾಂ ಕೂಗಳತೆ ದೂರದಲ್ಲಿಯೇ ಮನೆ ನಿರ್ಮಿಸಿದ್ದಾರೆ. ತಮ್ಮ ಮನೆಗೆ ಸಮರ್ಪಕ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳು, ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಮಲ್ಲಾಪುರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಘಟನೆ

ಅಧಿಕಾರಿಗಳು ಸ್ಪಂದಿಸದ ಕಾರಣ ಕೋಪಗೊಂಡ ಹನುಮಂತಪ್ಪ, ಸಮೀಪದ ಮಲ್ಲಾಪುರದ ವಿತರಣಾ ಕೇಂದ್ರಕ್ಕೆ ಬಂದು ಮನೆಗೆ ಬೇಕಾಗಿರುವ ಮಸಾಲೆ ರುಬ್ಬಿಕೊಂಡು, ತಮ್ಮ ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ:  BBMP: ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್​ನಲ್ಲಿ ಇಸ್ಕಾನ್ ಊಟ

ಹನುಮಂತಪ್ಪ ವಿತರಣಾ ಕೇಂದ್ರಕ್ಕೆ ಬಂದು ಮಸಾಲೆ ರುಬ್ಬಿಕೋಂಡು ಹೋಗುತ್ತಿದ್ರೂ, ಯಾವ ಅಧಿಕಾರಿಯೂ ಇದನ್ನ ತಡೆದಿಲ್ಲ. ಈ ಸಂಬಂಧ ಮೇಲಾಧಿಕಾರಿಗಳಿಗೂ ದೂರು ಸಲ್ಲಿಸಿಲ್ಲ ಎಂದು ವಿಜಯವಾಣಿ ವರದಿ ಮಾಡಿದೆ.

ಮಸಾಲೆ ರುಬ್ಬಿಕೊಳ್ಳುತ್ತಿರೋದಕ್ಕೆ ಕಾರಣ ಏನು?

ವಿದ್ಯುತ್ ವಿತರಣಾ ಕೇಂದ್ರದ ಕೂಗಳತೆ ದೂರದಲ್ಲಿರುವ ಹನುಮಂತಪ್ಪ ಅವರ ಮನೆ ಕತ್ತಲಿನಲ್ಲಿದೆ. ದಿನಕ್ಕೆ ಸರಿಯಾಗಿ ನಾಲ್ಕು ಗಂಟೆಯೂ ವಿದ್ಯುತ್ ಇರಲ್ಲ. ಇದರಿಂದ ಹನುಮಂತಪ್ಪ ಕುಟುಂಬ ಅಕ್ಕಪಕ್ಕದ ಮನೆಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದು ಮತ್ತು ಮಸಾಲೆ ರುಬ್ಬಿಕೊಳ್ಳುತ್ತಿದ್ದರು.

ಅಂದು ಅಧಿಕಾರಿ ಆಡಿದ ಆ ಮಾತು

ಇದರಿಂದ ರೋಸಿ ಹೋದ ಹನುಮಂತಪ್ಪ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವೇಳೆ ಅಧಿಕಾರಿ ಮಾತಿನ ಭರದಲ್ಲಿ ನಿಮ್ಮ ಮನೆಯಲ್ಲಿ ವಿದ್ಯುತ್ ಇಲ್ಲವಾದ್ರೆ ಕಚೇರಿಗೆ ಬಂದು ಮಸಾಲೆ ರುಬ್ಬಿಕೊಂಡು ಹೋಗುವಂತೆ ಹೇಳಿದ್ದರಂತೆ. ಅಂದಿನಿಂದ ಹನುಮಂತಪ್ಪ ಪ್ರತಿನಿತ್ಯ ಕಚೇರಿಗೆ ತೆರಳಿ ಮಸಾಲೆ ರುಬ್ಬಿಕೊಂಡು ಬರುತ್ತಿದ್ದಾರೆ.

ಒಂದು ತಿಂಗಳಲ್ಲಿ ವ್ಯಕ್ತಿಯ ಮನೆಗೆ ವಿದ್ಯುತ್ ಸಂಪರ್ಕ

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಮೆಸ್ಕಾಂ ಜೆಇ ವಿಶ್ವನಾಥ್, ಮಳೆಯಿಂದಾಗಿ ಐಪಿ ಸೆಟ್ ಗಳನ್ನು ಚಾರ್ಜ್ ಮಾಡಲಾಗುತ್ತಿಲ್ಲ. ಹಾಗಾಗಿ ವಿದ್ಯುತ್ ಸಂಪರ್ಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆ ವ್ಯಕ್ತಿ ತಾತ್ಕಾಲಿಕವಾಗಿ ಮಲ್ಲಾಪುರ ದ ವಿತರಣಾ ಕೇಂದ್ರದಿಂದಲೇ ತಮ್ಮ ಮನೆಗೆ ನಿರಂತರ ಜ್ಯೋತಿ ವೈಯರ್ ಅಳವಡಿಸಿಕೊಳ್ಳಬಹುದು. ಒಂದು ತಿಂಗಳೊಳಾಗಿ ವ್ಯಕ್ತಿಯ ಮನೆಗೆ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಭರಸವೆ ನೀಡಿದ್ದಾರೆ.

ಇದನ್ನೂ ಓದಿ:  Hassan: ತಂದೆಯ ಖಾಕಿ ಡ್ರೆಸ್ ನೋಡಿ ಸೇನೆ ಸೇರುವ ಕನಸು, ಬಿಎಸ್‌ಎಫ್‌ ಸೇರಿದ ಬಳಿಕ ಇದೀಗ ನನಸು!

ರಾಜಧಾನಿ ಬೆಂಗಳೂರಿನಲ್ಲಿ ಸದಾ ಒಂದಿಲ್ಲೊಂದು ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ. ನಿರ್ವಹಣೆ ಕಾರಣ ನೀಡಿ ಬೆಂಗಳೂರಿನಲ್ಲಿ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಿರುತ್ತದೆ.
Published by:Mahmadrafik K
First published: