ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ 17-18ನೇ ಶತಮಾನದ ರಾಕೆಟ್​ಗಳು ಕರುನಾಡಿನಲ್ಲಿ ಎಲ್ಲಿವೆ ಗೊತ್ತಾ?

ಶಿವಮೊಗ್ಗ ನಗರದಲ್ಲಿರುವ ಕೆಳದಿ ಸಾಮ್ರಾಜ್ಯದ ರಾಜ ಶಿವಪ್ಪ ನಾಯಕನ  ಅರಮನೆಯಲ್ಲಿ ರಾಕೆಟ್​​ಗಳ ಗ್ಯಾಲರಿ ಮಾಡಲಾಗಿದೆ. 17-18 ನೇ ಶತಮಾನದಲ್ಲಿ ಶತ್ರುಗಳನ್ನು ಎದುರಿಸಲು ರಾಜರು ಬಳಸುತ್ತಿದ್ದ ರಾಕೆಟ್​ಗಳು ಸಂಗ್ರಹವೇ ಇಲ್ಲಿದೆ

ರಾಕೆಟ್​​ಗಳ ಗ್ಯಾಲರಿ

ರಾಕೆಟ್​​ಗಳ ಗ್ಯಾಲರಿ

  • Share this:
ಶಿವಮೊಗ್ಗ(ಜ.09) : ಸಾವಿರಾರೂ ರಾಕೆಟ್​ಗಳು ಒಂದೇ ಸೂರಿನಡಿ. 1700 ಹೆಚ್ಚು ರಾಕೆಟ್​ಗಳು ಇಲ್ಲಿವೆ. ಈ ಮಾದರಿಯ ರಾಕೆಟ್​ಗಳು ಇಷ್ಟೊಂದು ಪ್ರಮಾಣದಲ್ಲಿ ಈ ಅರಮನೆಯಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆಲ್ಲೂ ನೋಡಲು ಸಿಗೋದಿಲ್ಲ. ಬೆಂಗಳೂರಿನಲ್ಲಿ ಮೂರು ಮತ್ತು ಇಂಗ್ಲೆಂಡ್ ನಲ್ಲಿ ಎರಡು ಈ ಮಾದರಿಯ ರಾಕೆಟ್​​​​​ಗಳು ಇವೆ. ಅಷ್ಟೇ 17-18 ನೇ ಶತಮಾನದ ಈ ರಾಕೆಟ್​ಗಳು ಈಗ ಜನರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ನಗರದಲ್ಲಿರುವ ಕೆಳದಿ ಸಾಮ್ರಾಜ್ಯದ ರಾಜ ಶಿವಪ್ಪ ನಾಯಕನ  ಅರಮನೆಯಲ್ಲಿ ರಾಕೆಟ್​​ಗಳ ಗ್ಯಾಲರಿ ಮಾಡಲಾಗಿದೆ. 17-18 ನೇ ಶತಮಾನದಲ್ಲಿ ಶತ್ರುಗಳನ್ನು ಎದುರಿಸಲು ರಾಜರು ಬಳಸುತ್ತಿದ್ದ ರಾಕೆಟ್​ಗಳು ಸಂಗ್ರಹವೇ ಇಲ್ಲಿದೆ. 2018 ರಲ್ಲಿ ಉತ್ಖನನದ ಸಮಯದಲ್ಲಿ ಸಿಕ್ಕ ಈ ರಾಕೆಟ್​ಗಳನ್ನು ಈಗ ಸಾರ್ವಜನಿಕರ ವೀಕ್ಷಣೆಗೆ ಮತ್ತು ಇತಿಹಾಸ ಸಂಶೋಧಕರ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅರಮನೆಯಲ್ಲಿ ರಾಕೆಟ್ ಗ್ಯಾಲರಿಯಲ್ಲಿ ಇವುಗಳನ್ನು ಪ್ರದರ್ಶನಕ್ಕೆ ಇಟ್ಟು ಇವುಗಳ ಬಳಕೆ ಮತ್ತು ವಿಶೇಷತೆಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ ನೀಡಲಾಗುತ್ತಿದೆ.

ಕೆಳದಿ ಸಾಮ್ರಾಜ್ಯದ ರಾಜಧಾನಿ ಐತಿಹಾಸಿಕ ಬಿದನೂರಿನಲ್ಲಿ (ಈಗಿನ ನಗರ) 17- 18 ನೇ ಶತಮಾನಕ್ಕೆ ಸೇರಿದ ಸಾವಿರಾರೂ ರಾಕೆಟ್​ಗಳು ಪತ್ತೆಯಾಗಿದ್ದವು. 2002 ರಲ್ಲೇ 170 ಕ್ಕೂ ಹೆಚ್ಚು ಶೆಲ್ ಮಾದರಿಯ ರಾಕೆಟ್​ಗಳು ಸಿಕ್ಕಿದ್ದವು. ಪುರಾತತ್ವ ಇಲಾಖೆ ಇವುಗಳನ್ನು ಸಂಗ್ರಹ ಮಾಡಿ ಸಂಶೋಧನೆಗೆ ಒಳಪಡಿಸಿತ್ತು. ನಂತರವಷ್ಟೇ ಇವು ರಾಜರು ಯುದ್ಧದ ಸಮಯದಲ್ಲಿ ಬಳಸುತ್ತಿದ್ದ ರಾಕೆಟ್​ಗಳು ಎಂದು ಗೊತ್ತಾಗಿತ್ತು. ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದಾಗ 2018 ರಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ  ನಗರ ಗ್ರಾಮದ ನಾಗರಾಜ್  ರಾವ್ ಅವರಿಗೆ ಸೇರಿದ ತೋಟದ ಬಾವಿಯಲ್ಲಿ  1,500 ಕ್ಕೂ ಹೆಚ್ಚು ರಾಕೆಟ್​ಗಳು ಪತ್ತೆಯಾಗಿದ್ದವು.

ಅವುಗಳು 30 ಸೆಂ.ಮೀ ನಷ್ಟು ಉದ್ದ ಮತ್ತು 18 ಸೆಂಮೀ ದಪ್ಪದ ರಾಕೆಟ್ ಗಳಾಗಿವೆ. ಇವು ಸಂಪೂರ್ಣವಾಗಿ ಕಬ್ಬಿಣದ ಲೋಹದಿಂದ ನಿರ್ಮಾಣ ಮಾಡಲಾಗಿದೆ. ಕಬ್ಬಿಣದ ಲೋಹದ ಒಳಗೆ ಮದ್ದು ಮತ್ತು ಬತ್ತಿ ಹಿಡಲಾಗಿದೆ. ಹಿಟ್ ಜಾಸ್ತಿ ಆಗದಂತೆ ತಡೆಯಲು ಜೇಡಿ ಮಣ್ಣಿನ ಲೇಪ ಮಾಡಲಾಗಿದೆ. ಈ ರಾಕೆಟ್ ಗಳು ಇಲ್ಲಿಯವರೆಗೂ ತುಕ್ಕು ಸಹ ಹಿಡಿದಿಲ್ಲ. ವಿಶ್ವದ ಮೂರು ಕಡೆ ಮಾತ್ರ ಇಂತಹ ರಾಕೆಟ್ ಗಳು ನೋಡಲು ಸಿಗುತ್ತವೆ. ಬೆಂಗಳೂರಿನ ಮ್ಯೂಸಿಯಂನಲ್ಲಿ 3 ರಾಕೆಟ್ ಮತ್ತು ಇಲ್ಲಿಂದಲೇ ತೆಗೆದು ಕೊಂಡು ಹೋಗಿ ಇಂಗ್ಲೆಂಡ್ ಮ್ಯೂಸಿಯಂನಲ್ಲಿ 2 ರಾಕೆಟ್ ಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇದನ್ನೂ ಓದಿ : ಹಲ್ಮಿಡಿ ಶಾಸನಕ್ಕಿಂತಲೂ ಶತಮಾನದ ಹಿಂದೆಯೇ ಇದ್ದ ಕನ್ನಡ ಶಾಸನ ತಾಳಗುಂದದಲ್ಲಿ ಪತ್ತೆ

ಶಿವಮೊಗ್ಗ ಬಿಟ್ಟರೆ ಜಗತ್ತಿನಲ್ಲಿ ಈ ಮಾದರಿಯ ರಾಕೆಟ್ ಗಳು ಇಷ್ಟು ಪ್ರಮಾಣದಲ್ಲಿ ಬೇರೆಲ್ಲೂ ಸಿಗೋದಿಲ್ಲ. 17 ನೇ ಶತಮಾನದಲ್ಲೇ ರಾಕೆಟ್ ಗಳ ಬಳಕೆ ಇತ್ತು ಎಂಬುದಕ್ಕೆ ಈ ರಾಕೆಟ್ ಗಳು ಪುಷ್ಟಿ ನೀಡಿವೆ. ಅದರಲ್ಲೂ ಈ ಮಾದರಿಯ ರಾಕೆಟ್ ಗಳು ಕರ್ನಾಟಕದಲ್ಲೇ ಹೆಚ್ಚು ಇವೆ ಎಂಬ ವಿಷಯ ಕೂಡ ಹೆಮ್ಮೆ ಪಡುವಂತ ಸಂಗತಿಯಾಗಿದೆ.

 
Published by:G Hareeshkumar
First published: