Tungabhadra Dam: ತುಂಬುತ್ತಿದೆಯಾ ತುಂಗಭದ್ರಾ ಜಲಾಶಯ? ನೀರಿನ ಸಂಗ್ರಹದ ಬಗ್ಗೆ ನೀಡಲಾಗ್ತಿದ್ಯಾ ತಪ್ಪುಲೆಕ್ಕ?

ತುಂಗಭದ್ರಾ ನದಿಯೂ ಮೂರು ರಾಜ್ಯಗಳ ಮಧ್ಯೆ ಹರಿಯುತ್ತಿರುವುದರಿಂದ ಟಿಬಿಪಿಯು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಇರುತ್ತಾರೆ, ನೀರಿನ ಹಂಚಿಕೆಯ ಬಗ್ಗೆ ಟಿಬಿಪಿಯಲ್ಲಿಯೇ ನಿರ್ಧರಿಸುತ್ತಿದ್ದು, ಟಿಬಿಪಿಯು ನೀರಿನ ಪ್ರಮಾಣದಲ್ಲಿ ತಪ್ಪು ಲೆಕ್ಕ ನೀಡುತ್ತಿದೆ ಎಂಬ ಆರೋಪವು ಇದೆ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ

  • Share this:
ಕೊಪ್ಪಳ: ತುಂಗಭದ್ರಾ ಜಲಾಶಯ (Tungabhadra Dam) ನಿರ್ಮಾಣವಾದ ನಂತರ ಇದೇ ಪ್ರಥಮ ಬಾರಿಗೆ ಜಲಾಶಯದ ನೀರಿನ ಸಂಗ್ರಹ (Water Storage) ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ವರ್ಷ ಅರ್ಧ ಟಿಎಂಸಿ (TMC) ಹೂಳು ತುಂಬುತ್ತದೆ ಎಂಬ ವರದಿ ಇತ್ತು, ಆದರೆ ಈಗ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹ ಹೆಚ್ಷಳವಾಗಿದೆ ಎಂದು ಟಿಬಿಪಿ (TBP) ದಾಖಲಿಸುತ್ತಿದೆ. ಈ ಬಗ್ಗೆ ರಾಜ್ಯ ಸರಕಾರದಿಂದ (State Government) ಆಕ್ಷೇಪವಿದೆ. ಮತ್ತೊಮ್ಮೆ ಸರ್ವೆ (Survey) ಮಾಡಲು ನಿರ್ಧರಿಸಿದೆ. ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ನಿರ್ಮಾಣವಾಗಿ 66 ವರ್ಷವಾಗಿದೆ. ಕಳೆದ 66 ವರ್ಷದಲ್ಲಿ ಜಲಾಶಯಕ್ಕೆ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬುತ್ತಿದೆ ಎಂದು ಈ ಹಿಂದಿನ ವರದಿಯಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಕಳೆದ ವರ್ಷದವರೆಗೂ ಜಲಾಶಯದಲ್ಲಿ ನೀರಿನ ಸಂಗ್ರಹವು 100.899 ಟಿಎಂಸಿ ನೀರು ಎಂದು ದಾಖಲಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಜಲಾಶಯದಲ್ಲಿ ಒಟ್ಟು 105.788 ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದು ತುಂಗಭದ್ರಾ ಯೋಜನಾ ಮಂಡಳಿ ದಾಖಲಿಸಿದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಸಮೀಕ್ಷೆ

ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹದ ಬಗ್ಗೆ ಪ್ರತಿ ಐದು ವರ್ಷಕ್ಕೊಮ್ಮೆ ಸಮಿಕ್ಷೆ ಮಾಡಿ ಈ ಸಂದರ್ಭದಲ್ಲಿ ಡ್ಯಾಮಿನ ನೀರಿನ ಸಂಗ್ರಹದ ಬಗ್ಗೆ ವರದಿ ನೀಡುತ್ತಾರೆ. ಈ ವರದಿಯನ್ನು ಕೇಂದ್ರ ಜಲ ಆಯೋಗದ ಮುಂದೆ ತಂದು ಅಲ್ಲಿಂದ ಒಪ್ಪಿಗೆ ಪಡೆಯಲಾಗುತ್ತಿದೆ. 2008 ರವರೆಗೆ ತುಂಗಭದ್ರಾ ಜಲಾಶಯದಲ್ಲಿ 133 ಟಿಎಂಸಿ ನೀರಿನ ಸಂಗ್ರಹವಾಗಬೇಕಿದ್ದದ್ದು 100.899 ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದು ಅಂದಾಜಿಸಲಾಗಿತ್ತು.

ಸರ್ವೆ ರಿಪೋರ್ಟ್‌ಗೆ ಆಕ್ಷೇಪ

ಈ ಮಧ್ಯೆ 2016 ರಲ್ಲಿ ಹೈದ್ರಾಬಾದಿನ ಖಾಸಗಿ ಸಂಸ್ಥೆಯೊಂದು ಸಮಿಕ್ಷೆ ಮಾಡಿದ್ದು ಅದರಲ್ಲಿ ಈಗ ಜಲಾಶಯದಲ್ಲಿ ಒಟ್ಟು 105.788 ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದು ವರದಿ ನೀಡಿದೆ. ಈ ಹಿಂದೆ ಹೈಡ್ರೋಲಿಕ್ ಸರ್ವೆ ಮಾಡಲಾಗುತ್ತಿತ್ತು, ಈಗ ಟೋಫೋಗ್ರಾಫಿ ಮುಖಾಂತರ ಸರ್ವೆ ಮಾಡಲಾಗಿದೆ, ಜಲಾಶಯವು ಶೇ 80 ರಷ್ಟು ಖಾಲಿಯಾಗಿರುವಾಗ ಸಮಿಕ್ಷೆ ಮಾಡಿದ್ದು ಈ ಸಮಿಕ್ಷೆಯು  ನಿಖರವಾಗಿದೆ ಎಂದು ತುಂಗಭದ್ರಾ ಯೋಜನಾ ಮಂಡಳಿಯ ವಾದವಾಗಿದೆ. ಆದರೆ ಇಲ್ಲಿಯವರೆಗೂ ಜಲಾಶಯದಲ್ಲಿ ಅಧಿಕ ಹೂಳು ತುಂಬಿ ಕಡಿಮೆಯಾಗುತ್ತಿದೆ ಎಂಬ ವರದಿ ಇರುವಾಗ ಈಗ ಹೆಚ್ಷಳದ ಬಗ್ಗೆ ಆಕ್ಷೇಪವನ್ನು ರಾಜ್ಯ ತುಂಗಭದ್ರಾ ನೀರಾವರಿ ವಲಯದ ಅಧಿಕಾರಿಗಳು ತೆಗೆದಿದ್ದಾರೆ. ಆದರೆ ಈ ವರದಿಯನ್ನು ಈಗ ಒಪ್ಪಿಕೊಂಡು ಮತ್ತೆ ಸರ್ವೆ ಮಾಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Tunga Bhadra: ತುಂಗಭದ್ರೆಯ ಒಡಲಲ್ಲಿ ಜಲರಾಶಿಯ ಅಬ್ಬರ! ಅದ್ಭುತ ದೃಶ್ಯ ನೀವೂ ಕಣ್ತುಂಬಿಕೊಳ್ಳಿ

 ರಾಜ್ಯಕ್ಕೆ ಹೆಚ್ಚುವರಿ ನೀರು

2016 ರ ಸರ್ವೆ ಮಾಡಿದ್ದು ಈಗಾಗಲೇ 7 ವರ್ಷವಾಗಿದೆ. ಈಗ ಸಮಿಕ್ಷೆ ಮಾಡಲು 2 ವರ್ಷ ವಿಳಂಬವಾಗಿದೆ. ಮತ್ತೆ ಸಮಿಕ್ಷೆ ಮಾಡಿದಾಗ ಬಂದಿರುವ ವರದಿಯನ್ನು ಒಪ್ಪಿಕೊಳ್ಳೋಣ ಎಂದು ಸಿಡಬ್ಲ್ಯೂಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹ ಹೆಚ್ಷಳವಾಗಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 3.62 ಟಿಎಂಸಿ ನೀರು ಲಭ್ಯವಾಗುತ್ತಿದೆ ಎಂದು ತುಂಗಭದ್ರಾ ನೀರಾವರಿ ವಲಯದ ಮುಖ್ಯ ಇಂಜನೀಯರ್ ಎಲ್ ಬಸವರಾಜ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Dams Water Level: ಕೆಆರ್​ಎಸ್ ಜಲಾಶಯ​ ಬಹುತೇಕ ಭರ್ತಿ, ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಹೀಗಿದೆ

 ತಪ್ಪು ಲೆಕ್ಕ ನೀಡುತ್ತಿದೆಯಾ ಟಿಬಿಪಿ?

ತುಂಗಭದ್ರಾ ನದಿಯು ಮೂರು ರಾಜ್ಯಗಳ ಮಧ್ಯೆ ಹರಿಯುತ್ತಿರುವುದರಿಂದ ಟಿಬಿಪಿಯು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಇರುತ್ತಾರೆ, ನೀರಿನ ಹಂಚಿಕೆಯ ಬಗ್ಗೆ ಟಿಬಿಪಿಯಲ್ಲಿಯೇ ನಿರ್ಧರಿಸುತ್ತಿದ್ದು, ಟಿಬಿಪಿಯು ನೀರಿನ ಪ್ರಮಾಣದಲ್ಲಿ ತಪ್ಪು ಲೆಕ್ಕ ನೀಡುತ್ತಿದೆ ಎಂಬ ಆರೋಪವು ಇದೆ.
Published by:Annappa Achari
First published: