• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Election Results 2023: ಇದು ಮೋದಿ ಸೋಲಲ್ಲ, ಕಾಂಗ್ರೆಸ್​ ಏನು ದೇಶ ಗೆದ್ದಿಲ್ಲ; ಬೊಮ್ಮಾಯಿ

Election Results 2023: ಇದು ಮೋದಿ ಸೋಲಲ್ಲ, ಕಾಂಗ್ರೆಸ್​ ಏನು ದೇಶ ಗೆದ್ದಿಲ್ಲ; ಬೊಮ್ಮಾಯಿ

ಬಸವರಾಜ್ ಬೊಮ್ಮಾಯಿ, 
ಹಂಗಾಮಿ ಸಿಎಂ

ಬಸವರಾಜ್ ಬೊಮ್ಮಾಯಿ, ಹಂಗಾಮಿ ಸಿಎಂ

Basavaraj Bommai: ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯವರಿಗೆ ಒಳ್ಳೆಯದಾಗಲಿ. ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಆದಷ್ಟ ಬೇಗ ಜಾರಿ ಮಾಡಲಿ. ಕ್ಯಾಬಿನೆಟ್ ಕರೆದು ಏನು ಮಾಡ್ತಾರೆ ಎಂದು ನೋಡೋಣ ಎಂದರು.

  • Share this:

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ (Karnataka Assembly Election 2023) ಸೋತರೋದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಲಲ್ಲ. ಅವರು ಪ್ರಚಾರಕ್ಕಾಗಿ ಮಾತ್ರ ರಾಜ್ಯಕ್ಕಾಗಿ ಬಂದಿದ್ದರು. ಹಾಗಂತ ಕಾಂಗ್ರೆಸ್​​ ಏನು ಇಡೀ ದೇಶವನ್ನೇನೂ ಗೆದ್ದಿಲ್ಲ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಎಲ್ಲರೂ ಸೇರಿ ಸೋಲಿನ ಬಗ್ಗೆ ಆಳವಾಗಿ ಚರ್ಚೆ ನಡೆಸಲಾಗಿದೆ. ಫಲಿತಾಂಶದ ಬಗ್ಗೆ ಹಾಗೂ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.


ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ. ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಹಳ ಒಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದಾರೆ. ಅಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ, ಯಾವ ರೀತಿ ಒಗ್ಗಟ್ಟಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ಚರ್ಚೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.


ಲೋಕಸಭಾ ಚುನಾವಣೆಗೆ ತಯಾರಿ


ನಮಗೆ ಪಕ್ಷ ಸಂಘಟನೆಗೆ ವಿಶ್ರಮ ಇರೋದಿಲ್ಲ. ಲೋಕಸಭೆ ಚುನಾವಣೆಗೆ ಏನು ಒಟ್ಟಾಗಿ ಕೆಲಸ ಮಾಡಬೇಕು ಅದನ್ನು ಮಾಡುತ್ತೇವೆ. ಕಾಂಗ್ರೆಸ್‌ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಇಲ್ಲಿ ಮೋದಿಯವರು ಪ್ರಚಾರಕ್ಕಷ್ಟೇ ಬಂದಿದ್ದರು. ಹಾಗಂತ ಅವರ ಸೋಲು ಅನ್ನೋದು ಸರಿಯಲ್ಲ ಎಂದು ಕಾಂಗ್ರೆಸ್​ಗೆ ತಿರುಗೇಟು ನೀಡಿದರು.




ಇದನ್ನೂ ಓದಿ:  Congress: ಸಿಎಂ ಸ್ಥಾನದ ರೇಸ್​ನಲ್ಲಿರೋ ಡಿಕೆಶಿ-ಸಿದ್ದರಾಮಯ್ಯ ಪ್ಲಸ್, ಮೈನಸ್ ಏನು?


ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯವರಿಗೆ ಒಳ್ಳೆಯದಾಗಲಿ. ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಆದಷ್ಟ ಬೇಗ ಜಾರಿ ಮಾಡಲಿ. ಕ್ಯಾಬಿನೆಟ್ ಕರೆದು ಏನು ಮಾಡ್ತಾರೆ ಎಂದು ನೋಡೋಣ ಎಂದರು.

First published: