Bengaluru Pothole: ಬೆಂಗಳೂರು ರಸ್ತೆಗುಂಡಿ ಮುಚ್ಚಲು ಇಷ್ಟೊಂದು ಖರ್ಚಾ? ಕಳೆದ 5 ವರ್ಷದಿಂದ ಬಿಬಿಎಂಪಿ ವ್ಯಯಿಸಿದ್ದು ಕೇಳಿದ್ರೆ ಶಾಕ್!

ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕೋ ಗೊತ್ತಿಲ್ಲ. ಆದರೆ ರಸ್ತೆ ಗುಂಡಿ ಮುಚ್ಚಲು ಕೋಟಿ ಕೋಟಿ ವ್ಯಯಿಸಲಾಗುತ್ತಿದೆ. ಕಳೆದ 5 ವರುಷದಲ್ಲಿ ಬರೋಬ್ಬರಿ 210 ಕೋಟಿ ರೂಪಾಯಿಯನ್ನು ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚು ಮಾಡಲಾಗಿದೆ. ಒಂದೊಂದು ವರ್ಷದಲ್ಲಿ 50 ಸಾವಿರ ಕೋಟಿ ಖರ್ಚು ಮಾಡಲಾಗಿದೆ.

ರಸ್ತೆಗುಂಡಿ

ರಸ್ತೆಗುಂಡಿ

  • Share this:
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕೋ ಗೊತ್ತಿಲ್ಲ. ರಸ್ತೆಯ ಗುಂಡಿಗಳನ್ನ ಮುಚ್ಚಿ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಬಿಬಿಎಂಪಿ ಮಾತ್ರ ಕಥೆಗಳನ್ನ ಹೇಳುತ್ತಾ ಅಮಾಯಕ ಜೀವಗಳನ್ನ ಬಲಿಪಡೆಯುತ್ತಲೇ ಇದೆ. ಬೆಂಗಳೂರಿನ ರಸ್ತೆ ಗುಂಡಿಗೆ ಈಗ ಮತ್ತೊಂದು ಬಲಿ ಸೇರ್ಪಡೆಯಾಗಿದೆ. ಮಾಡದ ತಪ್ಪಿಗೆ ಆ ಕುಟುಂಬದ ಜೀವನಾಡಿ ಕಮರಿಹೋಗಿದೆ. ಕಾಲೇಜಿಗೆ ಮಗಳನ್ನು ಬಿಟ್ಟು ಬರಲು ಹೋದ ತಂದೆ, ಮನೆಗೆ ಮರಳಿದ್ದು ಮಾತ್ರ ಮೃತದೇಹವಾಗಿ. ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅಮಾಯಕನ ಜೀವ ಬಲಿಯಾಗಿದೆ. ಕೋಟಿ ಕೋಟಿ ಖರ್ಚು ಮಾಡಿದ್ರೂ ಬೆಂಗಳೂರು ರಸ್ತೆಗುಂಡಿ ಯಮನಾಗಿ ಬಾಯ್ತೆದೆರೆದು ಕಾದು ಕುಳಿತಿದೆ.

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬಿಬಿಎಂಪಿ ಮುಕ್ತಿ ನೀಡೋದಿಲ್ಲ ಅನ್ಸುತ್ತೆ. ರಸ್ತೆ ಗುಂಡಿಗಳ ಸರಣಿ ಬಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಮಗಳನ್ನು ಕಾಲೇಜಿಗೆ ಬಿಟ್ಟುಬರಲು ಹೋದ ತಂದೆ, ಬೆಂಗಳೂರಿನ ಗುಂಡಿಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?

ಕಳೆದ 5 ವರ್ಷದಲ್ಲಿ ಬೆಂಗಳೂರಿನ ರಸ್ತೆ ಗುಂಡಿಯಿಂದ 15 ಜನರ ಸಾವನ್ನಪ್ಪಿದ್ದಾರೆ. ಕಳೆದೈದು ವರುಷಕ್ಕೆ ಹೋಲಿಸಿದರೆ ಈ ವರುಷವೇ ಅತಿ ಹೆಚ್ಚು ಗುಂಡಿಗೆ ಬಲಿಯಾಗಿದೆ. 5 ವರುಷದಲ್ಲಿ ಈ ವರುಷವೇ 8 ಮಂದಿ ಗುಂಡಿಗೆ ಬಲಿಯಾಗಿದ್ದಾರೆ. ಇದರಲ್ಲಿ 19-40 ವಯೋಮಿತಿಯವರು ಸಾವನ್ನಪ್ಪಿರುವುದು ಹೆಚ್ಚು.

This is how much it costs to close the Bangalore Pothole
ರಸ್ತೆಗುಂಡಿ


ಯಾವ್ಯಾವ ಏರಿಯಾದಲ್ಲಿ ಸಾವು

ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಯಲಹಂಕದಲ್ಲಿ ತಲಾ 3 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಆರ್ ಟಿ ನಗರ, ಪೀಣ್ಯ , ಕಾಮಾಕ್ಷಿಪಾಳ್ಯ, ಪುಲಕೇಶಿನಗರ, ಬಾಣಸವಾಡಿ, ಯಶವಂತಪುರ, ಚಿಕ್ಕಪೇಟೆ, ಹೇರೋಹಳ್ಳಿ ಸೇರಿದಂತೆ‌ ಹಲವೆಡೆ ಕೂಡ ಸಾವಾಗಿದೆ.

ಇದನ್ನೂ ಓದಿ: ಓಟರ್ ಐಡಿ-ಆಧಾರ್ ಲಿಂಕ್ ಮಾಡಿಸುವಲ್ಲಿ ಬೆಂಗಳೂರಿಗರು ಲಾಸ್ಟ್​! ಯಾರು ಫಸ್ಟ್​?

ಗುಂಡಿ ಮುಚ್ಚಲು ಬಿಬಿಎಂಪಿ ಖರ್ಚು ಮಾಡಿದ್ದೆಷ್ಟು?

ಕಳೆದ 5 ವರುಷದಲ್ಲಿ ಬರೋಬ್ಬರಿ 210 ಕೋಟಿ ರೂಪಾಯಿಯನ್ನು ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚು ಮಾಡಲಾಗಿದೆ. ಒಂದೊಂದು ವರ್ಷದಲ್ಲಿ 50 ಸಾವಿರ ಕೋಟಿ ಖರ್ಚು ಮಾಡಲಾಗಿದೆ.

ರಸ್ತೆಗುಂಡಿ ಮುಚ್ಚಲು ಆದ ಖರ್ಚು

2017-18ರಲ್ಲಿ 47.8 ಕೋಟಿ
2018-19ರಲ್ಲಿ 49.2 ಕೋಟಿ
2019-20ರಲ್ಲಿ 54.8 ಕೋಟಿ
2020-21ರಲ್ಲಿ 16.4 ಕೋಟಿ
2021-22ರಲ್ಲಿ 47 ಕೋಟಿ

ರಸ್ತೆ ಗುಂಡಿಗೆ ತಂದೆ ಸುಪ್ರೀತ್ ಬಲಿ!

ಆಗಸ್ಟ್ 18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುಪ್ರೀತ್ ಎಂಬ ವ್ಯಕ್ತಿ ಬಸವೇಶ್ವರ ನಗರದಲ್ಲಿನ ಕಾಲೇಜೊಂದಕ್ಕೆ ತಮ್ಮ ಮಗಳನ್ನ ಬಿಟ್ಟು ವಾಪಾಸ್ ಮನೆಗೆ ಅಂತ ತೆರಳಿದ್ರು. ಈ ವೇಳೆ ಹೇರೋಹಳ್ಳಿ ಬಳಿ ತೆರಳುತ್ತಿದ್ದಾಗ ರಸ್ತೆ ಗುಂಡಿಯಿಂದಾಗಿ ಸ್ಕಿಡ್ ಆಗಿ ಕೆಳಕ್ಕೆ ಬಿದ್ದ ರಭಸಕ್ಕೆ ಹೆಲ್ಮೆಟ್ ಕಳಚಿಕೊಂಡು ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು.

ಕೂಡಲೇ ಅವರನ್ನ ಸುಪ್ರಿತ್ ಅವರನ್ನು ಹೇರೋಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಸುಪ್ರಿತ್ ಸಾವನ್ನಪ್ಪಿದ್ದಾರೆ. ಇದೀಗ ಮನೆಯ ಯಜಮಾನನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಮನೆಯ ಆಧಾರಸ್ತಂಭವೇ ರಸ್ತೆಗುಂಡಿಗೆ ಬಲಿ

ರಸ್ತೆ ಗುಂಡಿಗಳನ್ನ ಮುಚ್ಚದೇ ಅಮಾಯಕನ ಸಾವಿಗೆ ಬಿಬಿಎಂಪಿ ನೇರ ಹೊಣೆಯಾಗಿದೆ. ಮನೆಯಲ್ಲಿ ದುಡಿಯುತ್ತಿದ್ದವರೇ ಸುಪ್ರೀತ್. ಲೋನ್‌ ಮೇಲೆ ಮನೆ ಕೂಡ ಖರೀದಿಸಿದ್ರು. ಇಬ್ಬರು ಮಕ್ಕಳನ್ನ ಓದಿಸುತ್ತಿದ್ರು ಕೂಡ. ಅದ್ರೀಗ ಬದುಕೇ ಕತ್ತಲಾದಂತೆ ಆಗಿದೆ. ಈಗ ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡು ಕಣ್ಣೀರಾಕುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ರಸ್ತೆ ಗುಂಡಿ ಫೋಟೋ ಕಳುಹಿಸಿ 5 ಸಾವಿರ ರೂ. ಗೆಲ್ಲಿ: 'ಸ್ಮಾರ್ಟ್​ ಸಿಟಿ' ಸ್ಪರ್ಧೆ!

ಎಷ್ಟೇ ಹಣ ಸುರಿದರೂ ಬೆಂಗಳೂರಿನಲ್ಲಿ ಗುಂಡಿ ಮಾತ್ರ ಮಾಯವಾಗಿಲ್ಲ. ನಗರದಲ್ಲಿನ ರಸ್ತೆಗುಂಡಿಗಳಿಗೆ ಸರಣಿ ಬಲಿಗಳು ಆಗುತ್ತಲೇ ಇದೆ. ನಾವು ಗುಂಡಿ ಮುಚ್ಚೇ ಬಿಟ್ವಿ ಅಂತ ಸಬೂಬು ಹೇಳುತ್ತಲೇ ಅಮಾಯಕರ ಪ್ರಾಣವನ್ನ ಬಿಬಿಎಂಪಿ ತೆಗಯುತ್ತಿದೆ.
Published by:Thara Kemmara
First published: