ಚುನಾವಣೆಯಲ್ಲಿ ನೇರವಾಗಿ ಹಣ ಕೊಡುವಂತಿಲ್ಲ ಎಂದು ಕೇಂದ್ರದವರು ಹೀಗೆ 6 ಸಾವಿರ ಕೊಟ್ಟಿದ್ದಾರೆ; ರೇವಣ್ಣ ವ್ಯಂಗ್ಯ

ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಚುನಾವಣೆಯಲ್ಲಿ ಜನರಿಗೆ ನೇರವಾಗಿ ಹಣ ಕೊಡೋಕೆ ಆಗಲ್ಲ. ಹಾಗೆ ಕೊಟ್ಟರೆ ಚುನಾವಣಾ ಆಯೋಗದವರು ಹಿಡಿದು ಹಾಕುತ್ತಾರೆ. ಆ ಕಾರಣಕ್ಕೆ ವರ್ಷಕ್ಕೆ 6 ಸಾವಿರ ಹಣ ಕೊಟ್ಟಿದ್ದಾರೆ. ರೈತರಿಗೆ ಹಣ ಕೊಟ್ಟಿರೋದೇ ಈ ಕಾರಣಕ್ಕೆ ಎಂದು ಟೀಕೆ ಮಾಡಿದರು.

HR Ramesh | news18
Updated:February 1, 2019, 1:52 PM IST
ಚುನಾವಣೆಯಲ್ಲಿ ನೇರವಾಗಿ ಹಣ ಕೊಡುವಂತಿಲ್ಲ ಎಂದು ಕೇಂದ್ರದವರು ಹೀಗೆ 6 ಸಾವಿರ ಕೊಟ್ಟಿದ್ದಾರೆ; ರೇವಣ್ಣ ವ್ಯಂಗ್ಯ
ಎಚ್​.ಡಿ. ರೇವಣ್ಣ
HR Ramesh | news18
Updated: February 1, 2019, 1:52 PM IST
ಬೆಂಗಳೂರು: ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್​ ಬಗ್ಗೆ ಬಿಜೆಪಿ ನಾಯಕರು ಶ್ಲಾಘಿಸುತ್ತಿದ್ದರೆ, ವಿರೋಧ ಪಕ್ಷಗಳ ನಾಯಕರು ಇದೊಂದು ಮೂಗಿಗೆ ತುಪ್ಪ ಸವರುವ ಬಜೆಟ್​ ಎಂದು ಟೀಕೆ ಮಾಡುತ್ತಿದ್ದಾರೆ. ಬಜೆಟ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಎಚ್.ಡಿ.ರೇವಣ್ಣ ಅವರು ಇದು ಚುನಾವಣೆಗೆ ಬಿಜೆಪಿಯವರು ರೈತರಿಗೆ ನೀಡಿರುವ ಹಣ ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಚುನಾವಣೆಯಲ್ಲಿ ಜನರಿಗೆ ನೇರವಾಗಿ ಹಣ ಕೊಡೋಕೆ ಆಗಲ್ಲ. ಹಾಗೆ ಕೊಟ್ಟರೆ ಚುನಾವಣಾ ಆಯೋಗದವರು ಹಿಡಿದು ಹಾಕುತ್ತಾರೆ. ಆ ಕಾರಣಕ್ಕೆ ವರ್ಷಕ್ಕೆ 6 ಸಾವಿರ ಹಣ ಕೊಟ್ಟಿದ್ದಾರೆ. ರೈತರಿಗೆ ಹಣ ಕೊಟ್ಟಿರೋದೇ ಈ ಕಾರಣಕ್ಕೆ ಎಂದು ಟೀಕೆ ಮಾಡಿದರು.

ಇದನ್ನು ಓದಿ: Budget 2019 | ರೈತರಿಗೆ ಬಂಪರ್​ ಕೊಡುಗೆ; 12 ಸಾವಿರ ಕೋಟಿ ಅನ್ನದಾತರ ಖಾತೆಗೆ ಪ್ರತಿವರ್ಷ 6 ಸಾವಿರ ಹಣ ವರ್ಗಾವಣೆ

ರೈತರ ಸಾಲಮನ್ನಾ ಮಾಡ್ತಾರೆ ಅಂದ್ಕೊಂಡಿದ್ವಿ. ಎಲ್ಲರ ಅಕೌಂಟ್ ಗೆ 10-20 ಸಾವಿರ ರೂ. ಹಾಕ್ತಾರೆ ಅಂದ್ಕೊಂಡಿದ್ವಿ. ಆದರೆ, ನಿರೀಕ್ಷೆ ಹುಸಿಯಾಗಿದೆ ಎಂದು ರೇವಣ್ಣ ಹೇಳಿದರು.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ