ಬೆಂಗಳೂರು: ನಾಳೆ 75 ನೇ ವರ್ಷದ ಸ್ವಾತಂತ್ರ್ಯ ದಿನ ಆಚರಣೆ ಮಾಡ್ತಾಯಿದ್ದೀವಿ. ಇದನ್ನ ನಾವು ಅಮೃತ ದಿನಚಾರಣೆ ಅಂತ ಕೂಡ ಕರೆಯುತ್ತೇವೆ. ಇಂದು ನಾವೆಲ್ಲರು ಸ್ವತಂತ್ರದ ಫಲಾನುಭಾವಿಗಳು ಆಗಿದ್ದೀವಿ. ಬ್ರಿಟಿಷ್ ರಿಂದ ಸ್ವತಂತ್ರ ಕೊಡಿಸಲು ಅನೇಕರು ಹೋರಾಟ ಮಾಡಿದ್ದಾರೆ. ಗಾಂಧಿ, ಬೋಸ್ , ಮೌಲಾನ ಆಜಾದ್, ಚಂದ್ರಶೇಖರ ಸೇರಿದಂತೆ ಲಕ್ಷಾಂತರ ಜನರು ಹೋರಾಟ ಮಾಡಿ ಸ್ವಾತಂತ್ರ್ಯ ಕೊಡಿಸಿದ್ದಾರೆ. ಎಲ್ಲಾ ಜನಾಂಗದವರು, ಎಲ್ಲಾ ಧರ್ಮದವರು ಸೇರಿ ಸ್ವಾತಂತ್ರ್ಯ ಕೊಡ್ಸಿದ್ದಾರೆ. ಹೋರಾಟ ನಡೆಸಿದ ಎಲ್ಲರಿಗೂ ನನ್ನ ನಮನಗಳು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಯಾರೂ ಕೂಡ ಯಾವುದೇ ಆಸೆ ಇಟ್ಕೊಂಡಿರಲಿಲ್ಲ. ಯಾವುದೇ ಅಧಿಕಾರ ಆಸೆಗಳನ್ನು ಇಟ್ಕೊಂಡು ಹೋರಾಟ ಮಾಡಿರಲಿಲ್ಲ. ಎಲ್ಲಾ ನಿಸ್ವಾರ್ಥ ಮನೋಭಾವದಿಂದ ಹೋರಾಟ ಮಾಡಿ ಸ್ವತಂತ್ರ ಕೊಡಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕೊರೋನಾ ಮೂರನೇ ಅಲೆಯ ವಿಚಾರವಾಗಿಯೂ ಸರ್ಕಾರಕ್ಕೆ ಸಲಹೆ ನೀಡಿದರು. ಕೊಡುಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಕೇರಳದಲ್ಲಿ ಇನ್ನೂ ಕೇಸ್ ಪ್ರಮಾಣ ಹೆಚ್ಚಾಗುತ್ತಿದೆ. ಮೂರನೇ ಅಲೆ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಿಕೇಂಡ್ ಲಾಕ್ಡೌನ್ ಘೋಷಣೆ ಮಾಡಿದರೆ ಸಾಲದು. ಕಟ್ಟುನಿಟ್ಟಿನ ನಿಯಮ ಜಾರಿ ಮಾಡಬೇಕು. ಇನ್ನೂ ಜನರಿಗೆ ಅರಿವು ಬಂದಿಲ್ಲ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಲಸಿಕೆ ಕೊರತೆ ಹೆಚ್ಚಿದೆ. ರಾಜ್ಯದಲ್ಲಿ ವ್ಯಾಕ್ಸಿನ್ ಕೊಡಿಸುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ್ದು. ಸಿಎಂ ಬೊಮ್ಮಾಯಿ ಬರಿ ಮೀಟಿಂಗ್ ನಡೆಸಿದ್ರೆ ಆಗಲ್ಲ. ಜನರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಲಾ, ಕಾಲೇಜುಗಳು ಆರಂಭಿಸುವಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಾಲೆಗಳನ್ನು ಒಪನ್ ಮಾಡಬಾರದು ಅಂತ ಅಲ್ಲ. ಈಗ ಕೊರೋನಾ ನಿಯಂತ್ರಣ ಬರದಿದ್ರೆ ಶಾಲೆ ತೆರೆಯುವುದು ಬೇಡ. ಕೊರೋನಾ ಕಡಿಮೆ ಆದ್ರೆ ಶಾಲೆ ಓಪನ್ ಮಾಡಿ. ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ- ಜಾತ್ರೆಗಳನ್ನ ಒಂದು ವರ್ಷ ಮಾಡದಿದ್ರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿ ಗಣಪತಿ ಕೂರಿಸಿ. ಮನೆ ಗಣಪತಿ ಹಬ್ಬ ಆಚರಿಸಿ ಎಂದು ಸಲಹೆ ನೀಡಿದರು.
ಈ ಸರ್ಕಾರದಲ್ಲಿ ಗೊಂದಲ ಮುಂದುವರೆದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್. ಯಾವ ಸಮಯದಲ್ಲಾದರೂ ಬೇಕಾದರೂ ಬೀಳಬಹುದು. ಆಡಳಿತ ಪಕ್ಷದ ಶಾಸಕರು ಅಸಮಾಧಾನ ಹೊರಹಾಕಿ ಪ್ರತಿಭಟನೆ ಮಾಡ್ತಿದ್ದಾರೆ. ಯತ್ನಾಳ್, ಯೋಗಿಶ್ವರ್, ಬೆಲ್ಲದ್, ರಾಮದಾಸ್ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ ಗೊಂದಲ ಇದೆ. ಅವರ ಶಾಸಕರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ ಎಂದು ಭವಿಷ್ಯ ನುಡಿದರು.
ನಾನು ಎಂಟಿಬಿ ನಾಗರಾಜ್ ಒಂದೇ ಕಾರ್ಯಕ್ರಮಕ್ಕೆ ಹೋಗಿದ್ವಿ. ಶರತ್ ಬಚ್ಚೇಗೌಡ, ವೀರಪ್ಪ ಮೊಯ್ಲಿ ಎಲ್ಲರೂ ಇದ್ರು. ಬಿಜೆಪಿಯವರ ಜತೆ ರಾಜಕೀಯ ಚರ್ಚೆ ಮಾತನಾಡಲ್ಲ. ಬಿಟ್ಟು ತೊಲಗಿ ಎಂದು ಅಷ್ಟೇ ಹೇಳ್ತೀನಿ ಎಂದರು.
ನನ್ನ ಅವಧಿಯಲ್ಲಿ ಜಾತಿ ಜನಗಣತಿ ವರದಿ ಬಂದಿರಲಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಬಂತು. ಆದರೆ ಆಗ ಸ್ವೀಕರಿಸಲಿಲ್ಲ. ಈಗ ಈಶ್ವರಪ್ಪ ಸಚಿವರಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರೀಗೆಡ್, ನವರು ಕುರುಬರಿಗೆ ಎಸ್ಟಿ ಹೋರಾಟ ಮಾಡಿದ್ರು. ಈಗ ಜಾತಿಜನಗಣತಿ ವರದಿ ಸ್ವೀಕಾರ ಮಾಡ್ಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ನಾ. ಈಗ ಈಶ್ವರಪ್ಪ ಸಚಿವ ಅಲ್ವಾ ಒತ್ತಾಯ ಮಾಡ್ಲಿ ಎಂದು ಆಗ್ರಹಿಸಿದರು.
ಇದನ್ನು ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರದಿಂದ ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನ ಆರಂಭ
ಯಾರೇ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದರು ನಾನು ಅವರ ಪರ ಇರುತ್ತೇನೆ. ನನ್ನ ಕಾಲದಲ್ಲಿ ವರದಿ ತಯಾರಾಗಿತ್ತಾ.? ಕಾಂತರಾಜು ಕೊಡ್ತಿನಿ ಅಂತಾ ಹೇಳಿದ್ನಾ? ಆಗ ನಾನು ತೆಗೆದುಕೊಳ್ಳದೇ ಇದ್ನಾ? ಕುಮಾರಸ್ವಾಮಿ ಕಾಲದಲ್ಲಿ ರೆಡಿ ಆಗಿತ್ತು. ಆಗ ಹಿಂದುಳಿದ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಇದ್ದರು. ವರದಿ ಸ್ವಿಕರಿಸಲು ಸಿದ್ದರಾಗಿದ್ದರು. ಆದರೆ ಸಿಎಂ ಆಗಿದ್ದ ಕುಮಾರಸ್ವಾಮಿ ಸ್ವೀಕರಿಸಲಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ