ದಕ್ಷಿಣ ಕನ್ನಡ: ಅಂತರ್ಜಲ ಕಾಪಾಡುವಲ್ಲಿ ಪುತ್ತೂರಿನ ಕೃಷಿಕನ ಅಳಿಲು ಸೇವೆ

ಪುತ್ತೂರಿನ ಮುಂಡೂರು ನಿವಾಸಿ ಮುರಳೀಧರ್ ಭಟ್ ಬಂಗಾರಡ್ಕ ತನ್ನ ಕೃಷಿ ತೋಟಕ್ಕೆ ಮಳೆ ನೀರನ್ನೇ ಸಂಗ್ರಹಿಸಿ ಅಂತರ್ಜಲವನ್ನು ಉಳಿಸುವ ಕಾರ್ಯದಲ್ಲಿ ತನ್ನದೇ ಅಳಿಲ ಸೇವೆಯನ್ನು ನೀಡುತ್ತಿದ್ದಾರೆ.

ಪುತ್ತೂರಿನ ಮುಂಡೂರು ನಿವಾಸಿ ಮುರಳೀಧರ್ ಭಟ್ ಬಂಗಾರಡ್ಕ

ಪುತ್ತೂರಿನ ಮುಂಡೂರು ನಿವಾಸಿ ಮುರಳೀಧರ್ ಭಟ್ ಬಂಗಾರಡ್ಕ

  • Share this:
ದಕ್ಷಿಣ ಕನ್ನಡ(ಮಾ.29): ಕೃಷಿ ಹಾಗೂ ಇತರ ಚಟುವಟಿಕೆಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯುವ ಪ್ರಕ್ರಿಯೆಯು ಹೆಚ್ಚಾಗುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅಂತರ್ಜಲವನ್ನು ತನ್ನ ಕೈಲಾದ ಮಟ್ಟಿಗೆ ಉಳಿಸುವ ಪ್ರಯತ್ನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಪುತ್ತೂರಿನ ಕೃಷಿಕರೊಬ್ಬರಿದ್ದಾರೆ. ತಮ್ಮ ಕೃಷಿ ಭೂಮಿಗೆ ಕೊಳವೆ ಬಾವಿಗಳ ನೀರನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿ ಮಳೆ ನೀರನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಪ್ರತೀ ಮಳೆಗಾಲದಲ್ಲಿ 50 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಈ ನೀರಿನ ಕಾಳಜಿಯ ಸ್ಟೋರಿ ಇಲ್ಲಿದೆ.

ಕೊಳವೆ ಬಾವಿ, ಕರೆ ಹೀಗೆ ಹಲವು ಮೂಲಗಳಿಂದ ಇತ್ತೀಚಿನ ದಿನಗಳಲ್ಲಿ ಅಂತರ್ಜಲವನ್ನು ಮೇಲೆತ್ತುವ ಪ್ರಕರಣಗಳು ಹೆಚ್ಚಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 40 ಸಾವಿರ ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ.   ಕೃಷಿ ಹಾಗೂ ಇತರ ವಾಣಿಜ್ಯ ಉದ್ದೇಶಕ್ಕಾಗಿ ನೀರಿನ ಬಳಕೆಯೂ ಹೆಚ್ಚಾಗುತ್ತಿದ್ದು, ನೀರಿನ ಮೂಲವಾದ ಅಂತರ್ಜಲ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅಂತರ್ಜಲ ಮಟ್ಟವನ್ನು ಇದೇ ರೀತಿಯಲ್ಲಿ ಬಳಸುವುದರಿಂದ ಮುಂದಿನ ದಿನ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಹೆಚ್ಚಾಗಲಿದೆ. ಅಂತರ್ಜಲವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿದ್ದು, ದಕ್ಷಿಣಕನ್ನಡದ ಪುತ್ತೂರಿನ ಕೃಷಿಕರೊಬ್ಬರು ಈ ನಿಟ್ಟಿನಲ್ಲಿ ತನ್ನ ಶ್ರಮವನ್ನು ವಹಿಸುತ್ತಿದ್ದಾರೆ.

West Bengal Assembly Election2021: ಕಾವೇರುತ್ತಿದೆ ನಂದಿಗ್ರಾಮದ ಅಖಾಡ: ವೀಲ್​ಚೇರ್​ನಲ್ಲೇ ಮಮತಾ ಬ್ಯಾನರ್ಜಿ​ ಪ್ರಚಾರ

ಪುತ್ತೂರಿನ ಮುಂಡೂರು ನಿವಾಸಿ ಮುರಳೀಧರ್ ಭಟ್ ಬಂಗಾರಡ್ಕ ತನ್ನ ಕೃಷಿ ತೋಟಕ್ಕೆ ಮಳೆ ನೀರನ್ನೇ ಸಂಗ್ರಹಿಸಿ ಅಂತರ್ಜಲವನ್ನು ಉಳಿಸುವ ಕಾರ್ಯದಲ್ಲಿ ತನ್ನದೇ ಅಳಿಲ ಸೇವೆಯನ್ನು ನೀಡುತ್ತಿದ್ದಾರೆ. ಬಂಗಾರಡ್ಕ ತನ್ನ ಕೃಷಿತೋಟದ 25 ಸೆಂಟ್ಸ್ ಜಾಗದಲ್ಲಿ ಮಳೆ ನೀರನ್ನು ಸಂಗ್ರಹಿಸಲೆಂದೇ ಬೃಹತ್ ಗುಂಡಿಯೊಂದನ್ನು ನಿರ್ಮಿಸಿದ್ದಾರೆ. 25 ಅಡಿ ಆಳ, 145 ಅಡಿ ಉದ್ದ ಹಾಗು 72 ಅಡಿ ಅಗಲದ ಗುಂಡಿಯಲ್ಲಿ ಆಕಾಶದಿಂದ ನೇರವಾಗಿ ಭೂಮಿ ಬೀಳು ಮಳೆ ನೀರನ್ನು ಮಾತ್ರ ಸಂಗ್ರಹಿಸುತ್ತಿದ್ದಾರೆ. ಪ್ರತೀ ವರ್ಷ 50 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಈ ಗುಂಡಿಗಿದ್ದು, ಈ ಗುಂಡಿ ನಿರ್ಮಿಸಲು ಸುಮಾರು 5 ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ.

5 ಎಕರೆ ಕೃಷಿ ಭೂಮಿಗೆ ಬೇಸಿಗೆ ತುಂಬಾ ಬರಪೂರ ನೀರು ಪೂರೈಕೆ ಮಾಡಲು ಈ ಗುಂಡಿಯಿಂದ ಸಾಧ್ಯವಿದೆ. ಇದರಿಂದಾಗಿ ಕೃಷಿ ಭೂಮಿಗೆ ಬಳಸುತ್ತಿದ್ದ ಕೊಳವೆ ಬಾವಿಗಳ ಬಳಸುವ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ಬಂಗಾರಡ್ಕರ ಈ ಮಳೆ ಗುಂಡಿ ಇದೀಗ ದಕ್ಷಿಣಕನ್ನಡ ಜಿಲ್ಲೆಯಾದ್ಯಂತಹ ಸುದ್ಧಿ ಮಾಡಿದ್ದು, ಹೆಚ್ಚಿನ ತೋಟಗಳಲ್ಲಿ ಇದೇ ರೀತಿಯ ಗುಂಡಿಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ರಾಜ್ಯದ ಹಲವು ಕಡೆಗಳಿಂದಲೂ ಬಂಗಾರಡ್ಕ ತೋಟದಲ್ಲಿರುವ ಈ ಮಳೆ ಗುಂಡಿಯನ್ನು ವೀಕ್ಷಿಸಲು ಬರುತ್ತಿದ್ದಾರೆ.
ಮುರಳೀಧರ್ ಭಟ್ ಪ್ರಕಾರ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ ಈ ಗುಂಡಿಯಿಂದ 50 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದ್ದು, ಪ್ರತೀ ಲೀಟರ್ ಗೆ 5 ರೂಪಾಯಿಯಂತೆ ವ್ಯಯಿಸಿದಂತಾಗಿದೆ.

ಅಲ್ಲದೆ ಈ ಗುಂಡಿಗೆ ಹಾಕಿರುವಂತಹ ಥರ್ಪಾಲಿನ್ ಸುಮಾರು 10 ವರ್ಷಗಳ ಕಾಲ ಬಾಳಿಕೆ ಬರುವ ವಿಶ್ವಾಸದಲ್ಲೂ ಬಂಗಾರಡ್ಕ ಇದ್ದಾರೆ.  ಈ ಗುಂಡಿ ನಿರ್ಮಿಸಿ ಇದೀಗ ಎರಡು ವರ್ಷಗಳಾಗುತ್ತಿದ್ದು, ಗುಂಡಿಯಲ್ಲಿ ಮೀನು ಸಾಕಾಣಿಕೆಯ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಈಗಾಗಲೇ ಒಂದು ಸಾವಿರ ಮೀನಿನ ಮರಿಗಳನ್ನು ಹಾಕಲಾಗಿದ್ದು, ಮೀನುಗಳಿಂದಲೂ ಆದಾಯದ ನಿರೀಕ್ಷೆಯಲ್ಲಿದ್ದಾರೆ.
Published by:Latha CG
First published: