ಗದಗ(ಫೆ.08): ರಮೇಶ ನಾಯಕ ಬಿ.ಕಾಂ. ಪದವಿ ಮುಗಿಸಿದರೂ ಯಾವುದೇ ಕಂಪನಿಗೆ ಕೆಲಸಕ್ಕೆ ಹೋಗದೆ ಕೃಷಿಯಲ್ಲಿ ಏನಾದರು ಸಾಧನೆ ಮಾಡಬೇಕು ಅಂತಾ ತೋಟಗಾರಿಕೆ ಬೆಳೆ ಬೆಳೆಯಲು ಆರಂಭಿಸಿದ್ದಾನೆ. ಭೂಮಿ ತಾಯಿಯನ್ನು ನಂಬಿ ಕೆಟ್ಟವರು ಇಲ್ಲವೋ ಎನ್ನುವಂತೆ ಭೂ ತಾಯಿ ರಮೇಶನ ಕೈ ಹಿಡಿದಿದ್ಧಾಳೆ. ಕಳೆದ ಎಂಟು ವರ್ಷಗಳಿಂದ ಬಯಲುಸೀಮೆ ನಾಡಿನಲ್ಲಿ ಬಂಗಾರದತಂಹ ದ್ರಾಕ್ಷಿ ಹಣ್ಣಿನ ಫಸಲು ತೆಗೆಯುತ್ತಾ ಬಂದಿದ್ದಾನೆ. ದ್ರಾಕ್ಷಿ ಹಣ್ಣು ಖರದೀಗಾರರು ಸ್ವತಃ ತೋಟಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ.
ಹೌದು, ಬಯಲುಸೀಮೆ ನಾಡು ಗದಗ ಜಿಲ್ಲೆಯ ಕಳಸಾಪೂರ ಗ್ರಾಮದ ರೈತ ರಮೇಶ ನಾಯಕ ಅವರು 4 ಎಕರೆ ದ್ರಾಕ್ಷಿ ಹಣ್ಣಿನ ಬೆಳೆ ಬೆಳೆಯುತ್ತಿದ್ದಾರೆ. ರಮೇಶ ನಾಯಕ ಅವರು ಬಿ.ಕಾಂ ಪದವಿ ಮುಗಿಸಿದಂತಹವರು. ಹೀಗಾಗಿ ಇವರು ಯಾವುದೇ ನೌಕರಿಗೆ ಹೋಗದೆ, ಕಳೆದ ಎಂಟು ವರ್ಷಗಳಿಂದ ದ್ರಾಕ್ಷಿ ಹಣ್ಣಿನ ಬೆಳೆಯನ್ನ ಬೆಳೆಯಲು ಪ್ರಾರಂಭಿಸಿದ್ದಾರೆ. ಮಹಾರಾಷ್ಟ್ರದ ಸೋನಾಕ್ ಎಂಬ ದ್ರಾಕ್ಷಿಯ ತಳಿಯನ್ನು ಇವರು ಬೆಳೆಯುತ್ತಿದ್ದಾರೆ. ಸೋನಾಕ್ ತಳಿಯು ಉತ್ತಮ ಇಳುವರಿ ಸಹ ನೀಡುತ್ತಿದೆ.
ಮಗನನ್ನು ಕೊಂದು ಅಲ್ಲಾಹನನ್ನು ಮೆಚ್ಚಿಸಲು ಮಾಡಿದ ತ್ಯಾಗ ಎಂದ ತಾಯಿ
ಹೀಗಾಗಿ ರಮೇಶ ಅವರು ತರಕಾರಿ, ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟು ತೋಟಗಾರಿಕೆ ಬೆಳೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ಕು ಎಕರೆಯಲ್ಲಿ ಸೋನಾಕ್ ತಳಿ ದ್ರಾಕ್ಷಿ ನಾಟಿ ಮಾಡಿದ್ದಾರೆ. ಎರಡು ವರ್ಷಕ್ಕೆ ಫಸಲು ಕೊಡಲು ಆರಂಭಿಸುತ್ತದೆ. ಎರಕೆಗೆ 10 ಟನ್ ಇಳುವರಿ ಬರುತ್ತದೆ. ಮೊದಲನೇ ಹಂತದ ಕಟಾವಿನಲ್ಲಿ 13 ಟನ್ ಇಳುವರಿ ತಗೆದಿದ್ಧಾರೆ. ಇನ್ನು ದ್ರಾಕ್ಷಿ ಕಟಾವು ಅಂತ್ಯದವರೆಗೆ ಸುಮಾರು 40 ಟನ್ ವರೆಗೆ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ ರೈತ ರಮೇಶ್ ಅವರು.
ರಮೇಶ ನಾಯಕ ಅವರು ತಾವು ಬೆಳೆದ ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಸಹ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ದ್ರಾಕ್ಷಿ ಹಣ್ಣಿನ ಬೆಳೆ ಬೆಳೆಯುವ ರೈತರು ಕಡಿಮೆ ಇದ್ಧಾರೆ. ಹೀಗಾಗಿ ರೈತರ ತೋಟಕ್ಕೆ ಖರೀದಿಗಾರರು ಬಂದು ಉತ್ತಮ ಬೆಲೆ ನೀಡಿ ಖರೀದಿ ಮಾಡಿಕೊಂಡು ಹೋಗುತ್ತಿದ್ಧಾರೆ. ರಮೇಶ ಅವರು ತೋಟಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಠೆಯ, ಹುಬ್ಬಳ್ಳಿಯಿಂದ ಖರೀದಿಗಾರರು ಬಂದು 38 ರೂಪಾಯಿಗೆ ಕೆಜಿಯಂತೆ ದ್ರಾಕ್ಷಿ ಖರೀದಿ ಮಾಡುತ್ತಿದ್ಧಾರೆ. ಹೀಗಾಗಿ ಈ ವರ್ಷವು ಸಹ ರಮೇಶ ಅವರು 4 ಎಕರೆ ತೋಟದಲ್ಲಿ 40 ಟನ್ ವರೆಗೆ ಫಸಲು ಬರುವ ನಿರೀಕ್ಷೆಯಲ್ಲಿದ್ದಾರೆ. ದ್ರಾಕ್ಷಿ ಹಣ್ಣು ಬೆಳೆಯಲು ಬರುವ ಖರ್ಚು ವೆಚ್ಚ ತಗೆದು ಸುಮಾರು 7 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾನೆ ರೈತ ರಮೇಶ ಅವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ