HOME » NEWS » State » THIS BUDGET IS FULL OF FALSE PROMISES KARNATAKA OPPOSITION LEADERS STRONG REACTION ON UNION BUDGET LG

ಇದು ಜುಮ್ಲಾ; ಸುಳ್ಳಿನ ಕಂತೆ; ಬೆಟ್ಟ ಅಗೆದು ಇಲಿ ಹಿಡಿದಂತೆ: ಕೇಂದ್ರ ಬಜೆಟ್ ಬಗ್ಗೆ ರಾಜ್ಯ ವಿಪಕ್ಷ ನಾಯಕರ ಪ್ರತಿಕ್ರಿಯೆ

Opposition Party Leaders reaction on Union Budget 2020: ಮಕ್ಕಳು ಪಾಠ ಒಪ್ಪಿಸುವ ರೀತಿ ನಿರ್ಮಲಾ ಸೀತಾರಾಮನ್​ ಬಜೆಟ್ ಮಂಡಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಬಜೆಟ್ ನಲ್ಲಿ ಹೊಸತನ ಯಾವುದು ಇಲ್ಲ. ಮೂರು ವರ್ಷದಿಂದ ಹೇಳಿದ್ದನ್ನೇ ಹೇಳ್ತಿದ್ದಾರೆ. ಇದೊಂದು ಜುಮ್ಲಾ ಬಜೆಟ್ ಎಂದು ಕಟುವಾಗಿ ಟೀಕಿಸಿದ್ದಾರೆ.

news18-kannada
Updated:February 10, 2020, 6:42 PM IST
ಇದು ಜುಮ್ಲಾ; ಸುಳ್ಳಿನ ಕಂತೆ; ಬೆಟ್ಟ ಅಗೆದು ಇಲಿ ಹಿಡಿದಂತೆ: ಕೇಂದ್ರ ಬಜೆಟ್ ಬಗ್ಗೆ ರಾಜ್ಯ ವಿಪಕ್ಷ ನಾಯಕರ ಪ್ರತಿಕ್ರಿಯೆ
ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು(ಫೆ.01): ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಬಜೆಟ್​​ ಬಗ್ಗೆ ರಾಜ್ಯ ವಿಪಕ್ಷ ನಾಯಕರು ಟೀಕೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಕೇಂದ್ರ ಬಜೆಟ್​ನ್ನು ನಿರಾಶಾದಾಯಕ ಬಜೆಟ್​, ಜುಮ್ಲಾ ಬಜೆಟ್​, ಬೆಟ್ಟ ಅಗೆದು ಇಲಿ ಹಿಡಿದ ಬಜೆಟ್​ ಎಂಬಿತ್ಯಾದಿ ರೀತಿಯಲ್ಲಿ ಬಣ್ಣಿಸಿದ್ದಾರೆ.

ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸ್ತಾರಾ?; ಎಚ್​ಡಿಕೆ

ಇಂದಿನ ಕೇಂದ್ರ ‌ಸರ್ಕಾರದ ಬಜೆಟ್ ಅತ್ಯಂತ ನಿರಾಶಾದಾಯಕ. ದೇಶದ ಪ್ರಗತಿ ಬಗ್ಗೆ  ಮುಂದಿನ ದಿನಗಳಲ್ಲಿ ಆಸೆ ಇಟ್ಟುಕೊಳ್ಳಲಾಗದ ಬಜೆಟ್. ಇದು ಕೇವಲ ಅಂಕಿಅಂಶಗಳ ಬಜೆಟ್ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಘೋಷಣೆ ಆಗಿರುವ ಎಷ್ಟು ಯೋಜನೆಗಳು ಜಾರಿಯಾಗಿವೆ ಎನ್ನುವ ಮಾಹಿತಿಯೇ ಇಲ್ಲ. ಹಣ ಹಂಚಿಕೆಯಲ್ಲೂ ಭಾರಿ ಕಡಿತವಾಗಿದೆ. ಜಲಮಿಷನ್‌ಗೆ ಮೀಸಲಿಟ್ಟಿರುವ ಹಣದಲ್ಲಿ ಯಾವುದೇ ಜನರಿಗೆ ಅನುಕೂಲ ಆಗಲ್ಲ. ಕೆಲವೊಂದು ಯೋಜನೆಗಳಿಗೆ ಹೊಸ ಹೆಸರು ಇಟ್ಟಿರಬಹುದು. ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸ್ತಾರಾ? ಯುವಕರಿಗೆ ಯಾವ ರೀತಿ ಉದ್ಯೋಗ ಕೊಡ್ತೀವಿ ಅಂತಾ ಹೇಳಿಲ್ಲ. ಇಂಟರ್ನ್​ಶಿಪ್ ಕೊಡ್ತೀವಿ ಅಂತಾ ಹೇಳಿದ್ದಾರೆ, ಆದರೆ ಅವರಿಗೆ ಉದ್ಯೋಗ ಕೊಡೋದು ಯಾರು? ಈ ಬಜೆಟ್ ಕುಸಿಯುತ್ತಿರುವ ದೇಶದ ಆರ್ಥಿಕ ಪ್ರಗತಿಯನ್ನು ಸರಿಪಡಿಸಲ್ಲ, ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುತ್ತದೆ. ಲ್ಯಾಂಡ್ ಅಕ್ವಿಷನ್ ಆ್ಯಕ್ಟ್‌ನಲ್ಲಿ ಯಾರಿಗೆ ಬೇಕಾದ್ರೂ ಭೂಮಿ ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಇದೊಂದು ಸಿಎಎ ರೀತಿಯಲ್ಲಿನ ಬಿಲ್ ಆಗುತ್ತದೆ.

ಕೇವಲ ಉದ್ಯಮಿಗಳ ಬಜೆಟ್: ಈಶ್ವರ್​ ಖಂಡ್ರೆ

ಕೇಂದ್ರ ಬಜೆಟ್ ನಿರಾಶಾದಾಯಕ ಬಜೆಟ್ ಆಗಿದೆ. ಬಡವರಿಗೆ ಅನಾನುಕೂಲವಾದ ಬಜೆಟ್. ಕೇವಲ ಉದ್ಯಮಿಗಳ ಬಜೆಟ್ ಆಗಿದೆ ಎಂದು ಕೆಪಿಸಿಸಿ  ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕೆ ಮಾಡಿದ್ದಾರೆ. ಆರ್ಥಿಕ ಪುನಶ್ಚೇತನಕ್ಕೆ ಕಾರ್ಯಕ್ರಮ ಘೋಷಣೆ ಇಲ್ಲ. ರೈತ ಪರ ಯೋಜ‌ನೆಗಳಿಲ್ಲ. ಕರ್ನಾಟಕ ರಾಜ್ಯಕ್ಕೂ ವಿಶೇಷ ಕಾರ್ಯಕ್ರಮಗಳ ಘೋಷಣೆ ಆಗಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚಿನ ಹಣ ಇಲ್ಲ. ಏರ್ ಇಂಡಿಯಾ ಮಾರಾಟಕ್ಕಿಟ್ಟಿದ್ದಾರೆ.‌ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದು ಖಂಡನೀಯ. ಜಿಡಿಪಿ 5% ಕ್ಕಿಂತ ಕಡಿಮೆ ಇದೆ. ಈಗ 10ಕ್ಕೆ ಏರಿಸುತ್ತೇವೆ ಅನ್ನೋದು ಉಡಾಫೆ ಮಾತು. ಬಜೆಟ್​​​ನಿಂದ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇದರಿಂದ ಯುವಕರಿಗೆ, ರೈತರಿಗೆ, ಮಹಿಳೆಯರಿಗೆ ಹೆಚ್ಚಿನ ಲಾಭವಾಗಿಲ್ಲ ಎಂದು ಕಿಡಿಕಾರಿದರು.

Union Budget - ಪರ್ಸನಲ್ ಟ್ಯಾಕ್ಸ್ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ವಿವಿಧ ಸ್ಲ್ಯಾಬ್​ಗಳ ತೆರಿಗೆ ವಿವರ

ಸುಳ್ಳು ಭರವಸೆಗಳ ಬಜೆಟ್ : ಸಂಸದ ಡಿಕೆ ಸುರೇಶ್  ಸುಳ್ಳನ್ನು ನಿಜದ ತಲೆಯ ಮೇಲೆ ಹೊಡೆದಂತೆ ಬಿಜೆಪಿ ಹೇಳುತ್ತಿದೆ ಎಂದು ಕೇಂದ್ರ ಬಜೆಟ್​ ಕುರಿತು ಸಂಸದ ಡಿಕೆ ಸುರೇಶ್​ ಟೀಕಿಸಿದ್ದಾರೆ. ಜಿಡಿಪಿ 10 ಪರ್ಸೆಂಟ್ ಏರುತ್ತದೆ ಅಂಥಾರೆ, ಅದು ಹೇಗೆ ಸಾಧ್ಯ? ಸುಳ್ಳು ಭರವಸೆ ಗಳ ಬಜೆಟ್ ಇದು. ಸಬ್ ಅರ್ಬನ್ ರೈಲು ಕೂಡ ಮೂರು ವರ್ಷಗಳ ಹಿಂದಿನ ಘೋಷಣೆ. ಬೆಲೆ ಏರಿಕೆ ಹೆಚ್ಚಿದೆ. ರೈತರ ಆದಾಯ ದ್ವಿಗುಣ ಅಂತಾರೆ ಅದು ಹೇಗೆ ಅನ್ನೋದು ಹೇಳಿಲ್ಲ. ಕರ್ನಾಟಕ ದೃಷ್ಟಿಯಿಂದ ಹೇಳೋದಾದ್ರೆ, ರಾಜ್ಯಕ್ಕೆ ಕೊಡೋ ಸಾಲ ಕೊಟ್ಟರೆ ಸಾಕು

ಸುಳ್ಳಿನ ಕಂತೆ, ನಿರಾಶಾದಾಯಕ ಬಜೆಟ್:  ಸಂಸದ ಪ್ರಜ್ವಲ್ ರೇವಣ್ಣ  

ಇದು ನಿರಾಶಾಯದಾಯಕ ಬಜೆಟ್. ನೇರ ತೆರಿಗೆಯಲ್ಲಿ ವಿನಾಯಿತಿ ತೋರಿಸಿ, ನಿತ್ಯ ಬಳಕೆ ವಸ್ತುಗಳ ಮೇಲೆ ತೆರಿಗೆ ಹಾಕಿದ್ದಾರೆ ಎಂದು ಸಂಸದ ಪ್ರಜ್ವಲ್​ ರೇವಣ್ಣ ಕಿಡಿಕಾರಿದ್ದಾರೆ.  ಇದು ಸಾಮಾನ್ಯರ ಮೇಲೆ ಹೊರೆಯಾಗಿದೆ. ಉದ್ಯೋಗ ಸೃಷ್ಟಿ ಬಗ್ಗೆ ಉಲ್ಲೇಖ ಇಲ್ಲ. ಎಲ್ ಐ ಸಿ ಮತ್ತು ರೈಲ್ವೆ ಖಾಸಗಿಕರಣ ಮಾಡಿ ಜನರಲ್ಲಿ ಹೇಗೆ ನಂಬಿಕೆ ಉಳಿಸಿಕೊಳ್ಳುತ್ತಾರೆ. ಇವರದ್ದು ವಿಕಿಪೀಡಿಯ ಅಂಕಿ ಅಂಶ ತೋರಿಸುವ ಬಜೆಟ್.  ಇದು ಸುಳ್ಳಿನ ಕಂತೆ ಎಂದು ಜರಿದಿದ್ದಾರೆ.

Union Budget 2020: ಸಾರ್ವಜನಿಕ ಬ್ಯಾಂಕ್​ಗಳಿಗೆ 3.50 ಲಕ್ಷ ಕೋಟಿ ಅನುದಾನ; ಎಲ್​ಐಸಿ ಷೇರು ಮಾರಾಟಕ್ಕೆ ನಿರ್ಧಾರ

ಇದೊಂದು ಜುಮ್ಲಾ ಬಜೆಟ್; ಬಿ.ಕೆ.ಹರಿಪ್ರಸಾದ್

ಮಕ್ಕಳು ಪಾಠ ಒಪ್ಪಿಸುವ ರೀತಿ ನಿರ್ಮಲಾ ಸೀತಾರಾಮನ್​ ಬಜೆಟ್ ಮಂಡಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. ಬಜೆಟ್ ನಲ್ಲಿ ಹೊಸತನ ಯಾವುದು ಇಲ್ಲ. ಮೂರು ವರ್ಷದಿಂದ ಹೇಳಿದ್ದನ್ನೇ ಹೇಳ್ತಿದ್ದಾರೆ. ಇದೊಂದು ಜುಮ್ಲಾ ಬಜೆಟ್ ಎಂದು ಕಟುವಾಗಿ ಟೀಕಿಸಿದ್ದಾರೆ.

ಬೆಟ್ಟ ಅಗೆದು ಇಲಿ ಹಿಡಿದ ಬಜೆಟ್​; ಖರ್ಗೆ

ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಎನ್ನುವುದನ್ನು ಬಜೆಟ್ ತೋರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕೆಲ ಕಾರ್ಪೋರೇಟ್ ಗಳಿಗೆ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ದರು. ಆದರೆ ಅದರ ಬಗ್ಗೆ ಯಾವುದೇ ಚಿಂತನೆ ಬಜೆಟ್ ನಲ್ಲಿ ಇಲ್ಲ. ಹೊಸ ಉದ್ಯಮ ಸೃಷ್ಟಿ ಮಾಡೋಕೆ ಏನೂ ಯೋಜನೆ ಇಲ್ಲ. ಇತಿಹಾಸದಲ್ಲೇ ಇದು ದೊಡ್ಡ, ಉದ್ದದ ಬಜೆಟ್. ಹೆಚ್ಚಿಗೆ ಮಾತನಾಡಿ, ಕಡಿಮೆ ಕೆಲಸ ಮಾಡಿದ ಬಜೆಟ್. ಬೆಟ್ಟ ಅಗೆದು ಇಲಿ ಹಿಡಿದ ಬಜೆಟ್ ಇದು. ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ  ಎಂದರು. ಆದರೆ ಆ ಯೋಜನೆಯಡಿಯಲ್ಲಿ ಆಸ್ಪತ್ರೆಗೆ ರೋಗಿಗಳು ಹೋದರೆ ತಿರಸ್ಕರಿಸ್ತಿದ್ದಾರೆ. ಜಿಡಿಪಿ ದರವನ್ನು ಶೇ. 10ಕ್ಕೆ ಏರಿಸುವುದಾಗಿ ವಿಶ್ವಾಸ ದಿಂದ ಹೇಳ್ತಾರೆ. ಮತ್ತೊಂದು ಕಡೆ ಆರ್ಥಿಕ ತಜ್ಞರು 3.5 % ಇದೆ ಅಂತ ಹೇಳ್ತಾರೆ. ಈ ಬಜೆಟ್​​​​ನಿಂದ ಜನರಿಗೆ ಉಪಯೋಗವೂ ಆಗಿಲ್ಲ, ಜನ ಪರವೂ ಇಲ್ಲ. 2 ಗಂಟೆ 46 ನಿಮಿಷ ಮಾತಾಡಿದ್ದಾರೆ ಅದೆಲ್ಲವೂ ನಿರಾಶೆಯ ಹೇಳಿಕೆಗಳೇ ಎಂದು ಜರಿದಿದ್ದಾರೆ.

Youtube Video

First published: February 1, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories