ನನ್ನನ್ನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ: ಡಿಕೆ ಶಿವಕುಮಾರ್ (ವಿಶೇಷ ಸಂದರ್ಶನ)

ಸೆರೆವಾಸದ ಬಳಿಕ ರಾಜ್ಯದ ಜನರಿಂದ ಅದ್ಧೂರಿ ಸ್ವಾಗತ ಪಡೆದ ಡಿಕೆ ಶಿವಕುಮಾರ್​ ಪ್ರಚಾರಕ್ಕೆ ಹೋದಕಡೆಯಲ್ಲೆಲ್ಲಾ ಇದೇ ರೀತಿ ಸೇಬಿನ ಹಾರದ ಭರ್ಜರಿ ಸ್ವಾಗತ ಪಡೆದರು. ಸೆರೆವಾಸದ ಬಳಿಕ ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಅವರು, ಈ ಬಾರಿ ಅನರ್ಹರ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

Seema.R | news18-kannada
Updated:December 4, 2019, 4:31 PM IST
ನನ್ನನ್ನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ: ಡಿಕೆ ಶಿವಕುಮಾರ್ (ವಿಶೇಷ ಸಂದರ್ಶನ)
ಸೆರೆವಾಸದ ಬಳಿಕ ರಾಜ್ಯದ ಜನರಿಂದ ಅದ್ಧೂರಿ ಸ್ವಾಗತ ಪಡೆದ ಡಿಕೆ ಶಿವಕುಮಾರ್​ ಪ್ರಚಾರಕ್ಕೆ ಹೋದಕಡೆಯಲ್ಲೆಲ್ಲಾ ಇದೇ ರೀತಿ ಸೇಬಿನ ಹಾರದ ಭರ್ಜರಿ ಸ್ವಾಗತ ಪಡೆದರು. ಸೆರೆವಾಸದ ಬಳಿಕ ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಅವರು, ಈ ಬಾರಿ ಅನರ್ಹರ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
  • Share this:
ಬೆಂಗಳೂರು (ಡಿ. 04): ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಸೆರೆವಾಸ ಶಿಕ್ಷೆ ಅನುಭವಿಸಿ, ಬಿಡುಗಡೆಯಾಗಿ ಹೊರ ಬಂದಾಗಿನಿಂದ ಉಪಚುನಾವಣಾ ಪ್ರಚಾರದಲ್ಲಿ ಡಿಕೆ ಶಿವಕುಮಾರ್​ ತೊಡಗಿಸಿಕೊಂಡಿದ್ದಾರೆ. ಬಿಡುಗಡೆಯಾಗಿ ಬಂದ ಎರಡೇ ದಿನಕ್ಕೆ ಚುನಾವಣಾ ಪ್ರಚಾರದಲ್ಲಿ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೆರೆವಾಸದ ಬಳಿಕ ರಾಜ್ಯದ ಜನರಿಂದ ಅದ್ಧೂರಿ ಸ್ವಾಗತ ಪಡೆದ ಡಿಕೆ ಶಿವಕುಮಾರ್​ ಪ್ರಚಾರಕ್ಕೆ ಹೋದಕಡೆಯಲ್ಲೆಲ್ಲಾ ಇದೇ ರೀತಿ ಸೇಬಿನ ಹಾರದ ಭರ್ಜರಿ ಸ್ವಾಗತ ಪಡೆದರು. ಸೆರೆವಾಸದ ಬಳಿಕ ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಅವರು, ಈ ಬಾರಿ ಅನರ್ಹರ ಸೋಲು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ನೆರೆಯ ಮಹಾರಾಷ್ಟ್ರದಲ್ಲಿ ಬಿಜೆಪಿಗಾದ ಪರಿಸ್ಥಿತಿ ರಾಜ್ಯದಲ್ಲಿ ಆಗಲಿದೆ ಎಂದು ನ್ಯೂಸ್​ 18 ಸಂದರ್ಶನದಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಸಂದರ್ಶನದ ತುಣುಕು ಇಲ್ಲಿದೆ.

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಗಮನಿಸಿದಾಗ ಕರ್ನಾಟಕದಲ್ಲಿ ಉಪಚುನಾವಣೆ ಬಳಿಕ ಕಾಂಗ್ರೆಸ್​ಗೆ ಮತ್ತೆ ಅವಕಾಶ ಇದೆಯಾ?

ನಾನು ನೋಡಿದಂತೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಜನರು ನಿರಾಶೆ ಗೊಂಡಿದ್ದಾರೆ. ಆರ್ಥಿಕ ವಿಷಯ ದೊಡ್ಡ ಸವಾಲಾಗಿದೆ. ಆಪರೇಷನ್​ ಕಮಲ ಯಶಸ್ವಿಯಾಗಬೇಕೆಂಬ ಅಪೇಕ್ಷೆ ಅವರಲ್ಲಿಲ್ಲ. ನಮಗೆ ವ್ಯಕ್ತವಾಗುತ್ತಿರುವ ಬೆಂಬಲವನ್ನು ಗಮನಿಸಿದರೆ, ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಬಹುದು. ಆರ್ಥಿಕತೆ ವಿಚಾರದಲ್ಲಿ ಸಾಮಾನ್ಯ ವ್ಯಕ್ತಿ ಕೂಡ ತೊಂದರೆಪಡುವಂತೆ ಆಗಿದೆ. ಈ ಸಿಟ್ಟನ್ನು ಅವರು ಮತದಾನ ವೇಳೆ ವ್ಯಕ್ತಪಡಿಸುತ್ತಾರೆ.

ಕಾಂಗ್ರೆಸ್​ ಶಾಸಕರನ್ನು ಕೊಂಡುಕೊಂಡಿದ್ದಾರೆ ಎಂಬ ಕಾಂಗ್ರೆಸ್​ ನಾಯಕರ ಆಪಾದನೆ ಕುರಿತು ಯಡಿಯೂರಪ್ಪ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ..?

ತಮ್ಮ ಪಕ್ಷದ ಸಭೆಯಲ್ಲಿ ತಾವು ಶಾಸಕರನ್ನು ಕೊಂಡು ಕೊಂಡಿದ್ದರ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಬಾಯ್ಬಿಟ್ಟಿದ್ದಾರೆ. ಜೊತೆಗೆ ಶಾಸಕರೊಬ್ಬರು ಮಾಜಿ ಸಚಿವರು ತಮಗೆ 30 ಕೋಟಿ ಆಮಿಷ ನೀಡಿದ್ದರ ಬಗ್ಗೆ ತಿಳಿಸಿದ್ದಾರೆ. ಇದೆಲ್ಲದರ ಬಳಿಕ ಏನಾಯ್ತು? ಯಾಕೆ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ಮೊಕದ್ಧಮೆ ದಾಖಲಿಸಲಿಲ್ಲ? ಈಗ ಅವರು ಮಾನಹಾನಿ ಮೊಕದ್ಧಮೆ ದಾಖಲಿಸುವುದಾಗಿ ಹೇಳಿದ್ದಾರೆ. ನಾವು ಏನು ಹೇಡಿಗಳಲ್ಲ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ.

ಜೈಲಿನಿಂದ ಹೊರಬಂದ ಬಳಿಕ ನಿಮ್ಮ ಶಕ್ತಿ ಹೆಚ್ಚಿದೆ. ನೀವು ಕರ್ನಾಟಕದ ಚಾಣಕ್ಯ ಎಂಬ ಪ್ರಶಂಸೆಗೂ ಕೂಡ ಪಾತ್ರಾಗಿದ್ದೀರಾ..ನನಗೆ ಗೊತ್ತಿಲ್ಲ. ನನ್ನ ಸ್ನೇಹಿತರು ಅನೇಕ ಹೆಸರನ್ನು ನನಗೆ ದಯಪಾಲಿಸಿದ್ದಾರೆ. ಆದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಕೆಲಸವನ್ನು ನಾನು ಮಾಡಬೇಕು. ಅದು ಸಣ್ಣದಿರಲಿ ಅಥವಾ ದೊಡ್ಡದಿರಲಿ. ಯಾವುದೇ ಸಂಕಷ್ಟ ಬಂದರೂ ಅದನ್ನು ನಿರ್ವಹಿಸಿದ್ದೇನೆ. ನನ್ನ ಆರೋಗ್ಯ ಸರಿಯಿಲ್ಲ. ಆದರೂ ಕೂಡ ಪಕ್ಷವನ್ನು ಮತ್ತೆ ಮರಳಿ ಅಧಿಕಾರಕ್ಕೆ ತರುವುದು ನನ್ನ ಕರ್ತವ್ಯ

ಬಂಧನದ ಬಳಿಕ ನಿಮ್ಮ ಬಲ ಹೆಚ್ಚಿದೆ ಎಂಬಂತೆ ಕಂಡಿದೆ

ಕರ್ನಾಟಕದ ಜನರು ಕಳೆದ 35 ವರ್ಷದಿಂದ ನನ್ನನ್ನು ನೋಡಿದ್ದಾರೆ. ಅವರು ನನ್ನನ್ನು ಬೇರೆ ರೀತಿಯಾಗಿ ನೋಡಿಲ್ಲ, ಕಾರ್ಯಕರ್ತನಂತೆ ಕಂಡಿದ್ದಾರೆ. ಆಂತರ್ಯದಲ್ಲಿ ನಾನು ಯಾರು ಎಂಬುದು ಅವರಿಗೆ ಗೊತ್ತು. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ಅವರಿಗೆ ಗೊತ್ತಿದೆ. ನನಗೆ ತೊಂದರೆಯಾದಾಗ ಅವರ ಸಹೋದರನಿಗೆ ಆಗಿದೆ ಎಂಬಂತೆ ಭಾವಿಸಿದ್ದಾರೆ. ಈ ಒಗ್ಗಟ್ಟಿನ ಭಾವನೆಯನ್ನು ನಾನು ಬಂಧನಕ್ಕೆ ಒಳಗಾದಾಗ ಅವರು ತೋರಿಸಿದರು. ಅಧಿಕಾರದಿಂದ ಏನು ಮಾಡಲು ಸಾಧ್ಯವಿಲ್ಲ. ಪ್ರೀತಿಯಿಂದ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದರು

ಜೈಲಿನಿಂದ ಹೊರ ಬಂದ ಬಳಿಕ ಗಡ್ಡದಲ್ಲಿ ಕಾಣಿಸುತ್ತಿದ್ದೀರಾ. ಇದು ಸಹಾನುಭೂತಿಗಾ ಅಥವಾ ಜನರಿಗೆ ನೋವು ನೆನಪಿಸಲಾ?

ಜನರಿಗೆ ಮಾತ್ರವಲ್ಲ ನನಗೂ ಕೂಡ ಆ ನೋವು ನೆನಪಿಸಲು. ಪ್ರತಿದಿನ ನಾನು ನನ್ನ ಮುಖ ನೋಡಿದಾಗ ನಾನು ಯಾವಾಗಿನಿಂದ ಗಡ್ಡ ಬಿಟ್ಟೆ ಎಂಬುದು ನೆನಪಾಗುತ್ತದೆ. ಯಾಕೆ ನಾನು ತಿಹಾರ್​ ಜೈಲಿಗೆ ಹೋದೆ? ಯಾರು ನನ್ನನ್ನು ಕಂಬಿಗಳ ಹಿಂದೆ ಕಳುಹಿಸಿದ್ದು ಎಂಬ ನೆನಪು ಮರುಕಳಿಸುತ್ತದೆ. ಅದೇ ರೀತಿ ನನ್ನ ಸ್ನೇಹಿತರನ್ನೂ ನಾನು ಮರೆಯುವುದಿಲ್ಲ

ನಿಮ್ಮ ಕುಟುಂಬಸ್ಥರಿಗೂ ಸಮನ್ಸ್​ ನೀಡಲಾಗುತ್ತಿದೆ,

ಇದನ್ನು ಯಾವುದೇ ರಾಜಕೀಯ ವಿಷಯವಾಗಿ ಮಾಡಲು ಇಚ್ಛಿಸುವುದಿಲ್ಲ.  ಅವರು ಈ ಸಂಬಂಧ ಕೋರ್ಟ್​ ಮೊರೆ ಹೋಗುತ್ತಾರೆ. ಯಡಿಯೂರಪ್ಪ ಕೂಡ ನನ್ನ ವಿರುದ್ಧದ ಬೇರೊಂದು ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದ್ದಾರೆ. ಇದಕ್ಕಾಗಿ ನಾನು ಕಾಯುತ್ತಿದ್ದೇನೆ. ಉಪಚುನಾವಣೆಯ ನಂತರ ಅದು ಆಗಬಹುದು. ಅಲ್ಲಿಯವರೆಗೂ ಅವರು ಏನೂ ಮಾಡುವುದಿಲ್ಲ. ಏನೇ ಆದರೂ ನಾನು ಹೊರಬರುವುದು ನಿಶ್ಚಿತ.

ಡಿಕೆ ಶಿವಕುಮಾರ್​ ಅವರನ್ನೇ ಯಾಕೆ ಗುರಿ ಮಾಡಲಾಯಿತು?

ಬಲ ಹೆಚ್ಚಾದಷ್ಟೂ ವೈರಿಗಳೂ ಹೆಚ್ಚಿರುತ್ತಾರೆ. ಬಿಜೆಪಿ ಪಾಲಿಗೆ ನಾನು ಅಪಾಯ ಎನಿಸಿರಬೇಕು. ಅದಕ್ಕೆ ನನ್ನನ್ನು ಗುರಿ ಮಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಆಗಿದ್ದೇ ಕರ್ನಾಟಕದಲ್ಲಿ ಮರುಕಳಿಸಲಿದೆಯಾ? ಈಗಾಗಲೇ ಆಪರೇಷನ್​ ಕಮಲದ ಬಗ್ಗೆ ಚರ್ಚೆಯಾಗುತ್ತಿದೆ.

ಈ ಬಗ್ಗೆ ಫಲಿತಾಂಶದ ಬಳಿಕ ಮಾತನಾಡುತ್ತೇನೆ.

ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಎದುರು ನೋಡುತ್ತೀದ್ದೀರಾ?

9 ರಬಳಿಕ ಇದರ ಬಗ್ಗೆ ಮಾತನಾಡುತ್ತೇನೆ. ಬಿಜೆಪಿಯೇ ತನ್ನ ಹಿತಾಸಕ್ತಿಗೋಸ್ಕರ ಒಂದು ನಿರ್ಧಾರಕ್ಕೆ ಬರುತ್ತದೆ.

ಕಾಂಗ್ರೆಸ್​ನಲ್ಲಿಯೂ ಹಲವು ಬಣಗಳಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು. ಇದು ಪಕ್ಷಕ್ಕೆ ಹಾನಿ ಮಾಡಲಿದೆಯಾ?

ಯಾವುದೇ ಒಬ್ಬ ವ್ಯಕ್ತಿ ಇಲ್ಲಿ ಮುಖ್ಯ ಎಂದನಿಸುವುದಿಲ್ಲ. ಪಕ್ಷ ಹಾಗೂ ಅದರ ತತ್ವ ಸಿದ್ದಾಂತವೇ ಪ್ರಧಾನವಾಗುತ್ತದೆ.

(ಸಂದರ್ಶನ: ದೀಪಾ ಬಾಲಕೃಷ್ಣ)
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading