ಮಂಡ್ಯದಲ್ಲಿ ಒಂದರ ಮೇಲೊಂದು ಪವಾಡ ಸೃಷ್ಟಿಸುತ್ತಿರುವ ಬಸಪ್ಪ; ಸಾಕ್ಷತ್​ ದೈವ ಸ್ವರೂಪಿ ಈ ಕಾಮಧೇನು

ಇಲ್ಲಿನ ಚಿಕ್ಕರಸಿನಕೆರೆ ಮತ್ತು ಕಾವಣಾಪುರದ ಬಸಪ್ಪಗಳು ಹಲವು ಪವಾಡಗಳನ್ನು ಮಾಡಿವೆ. ಹೀಗಾಗಿ ಈ ಬಸವಗಳನ್ನು ಇಂದಿಗೂ ಈ ಭಾಗದ ಜನರು ದೇವರಂತೆ ಕಾಣುತ್ತಿದ್ದಾರೆ. ಇದೇ ಕಾರಣದಿಂದ ಪ್ರತಿಯೊಂದು ಸಮಸ್ಯೆ ಬಂದಾಗಲೂ ಇಲ್ಲಿನ ಜನ ಮೊರೆ ಹೋಗುವುದು ಬಸಪ್ಪನನ್ನೇ

news18-kannada
Updated:January 4, 2020, 5:49 PM IST
ಮಂಡ್ಯದಲ್ಲಿ ಒಂದರ ಮೇಲೊಂದು ಪವಾಡ ಸೃಷ್ಟಿಸುತ್ತಿರುವ ಬಸಪ್ಪ; ಸಾಕ್ಷತ್​ ದೈವ ಸ್ವರೂಪಿ ಈ ಕಾಮಧೇನು
ಪವಾಡ ಸೃಷ್ಟಿಸುತ್ತಿರುವ ಬಸಪ್ಪ
  • Share this:
ಮಂಡ್ಯ (ಜ.4): ಸಕ್ಕರೆ ನಗರಿಯಲ್ಲಿ ಕಳೆದೊಂದು ತಿಂಗಳಿನಿಂದ ಇಲ್ಲಿನ ನಡೆದಾಡುವ ದೇವರು ಬಸಪ್ಪ ಪವಾಡಗಳನ್ನು ಸೃಷ್ಟಿಸುತ್ತ ಎಲ್ಲರಲ್ಲಿಯೂ ಅಚ್ಚರಿ ಜೊತೆ ನಂಬಿಕೆ ಮೂಡಿಸುತ್ತಿದೆ. ಇತ್ತೀಚೆಗೆ ದೇವಸ್ಥಾನಕ್ಕೆ ಅರ್ಚಕನನ್ನು ನೇಮಿಸಿದ  ಬಸಪ್ಪ ನಂತರ ಮಗುವಿನ ತೊಟ್ಟಿಲು ತೂಗಿ ಅಚ್ಚರಿ ಸೃಷ್ಟಿಸಿತ್ತು. ಈಗ ವಾಮಾಚಾರವನ್ನು ಹೊರ ತೆಗಿಸಿ ಪವಾಡ ಸೃಷ್ಟಿಸಿದೆ. 

ಇಲ್ಲಿನ ಚಿಕ್ಕರಸಿನಕೆರೆ ಮತ್ತು ಕಾವಣಾಪುರದ ಬಸಪ್ಪಗಳು ಹಲವು ಪವಾಡಗಳನ್ನು ಮಾಡಿವೆ. ಹೀಗಾಗಿ ಈ ಬಸವಗಳನ್ನು ಇಂದಿಗೂ ಈ ಭಾಗದ ಜನರು ದೇವರಂತೆ ಕಾಣುತ್ತಿದ್ದಾರೆ. ಇದೇ ಕಾರಣದಿಂದ ಪ್ರತಿಯೊಂದು ಸಮಸ್ಯೆ ಬಂದಾಗಲೂ ಇಲ್ಲಿನ ಜನ ಮೊರೆ ಹೋಗುವುದು ಬಸಪ್ಪನನ್ನೇ.

 

ನಾಗಮಂಗಲ ತಾಲೂಕಿನ ಚಿಕ್ಕವೀರಕೊಪ್ಪಲು ಗ್ರಾಮದ ಹೊನ್ನಲಗೇಗೌಡ ಎಂಬ ರೈತ ಕುಟುಂಬ ಆಗಿಂದಾಗಲೇ ಸಮಸ್ಯೆಗೆ ತುತ್ತಾಗುತ್ತಿತ್ತು. ಈ ವೇಳೆ ಸಾಕಷ್ಟು ಜ್ಯೋತಿಷಿಗಳ ಮೊರೆ ಹೋದ ಕುಟುಂಬಕ್ಕೆ ಮನೆಗೆ ಕೆಡುಕು ಆಗಲೆಂದು ಕೆಲವರು ವಾಮಾಚಾರ ನಡೆಸಿರುವುದು ತಿಳಿದು ಬಂದಿದೆ. ಆಗ ಪರಿಹಾರ ಕಾಣದೇ ಕಂಗಾಲಾದ ಕುಟುಂಬಕ್ಕೆ ದಾರಿ ದೀಪವಾಗಿದ್ದು ಈ ಬಸಪ್ಪ.

ಸುತ್ತಮುತ್ತಲೂ ಬಸಪ್ಪನ ಮಹಿಮೆ ತಿಳಿದಿದ್ದ ಹೊನ್ನಲಗೇಗೌಡರು ಬಸಪ್ಪನ ಬಳಿ ಹೋಗಿ ಸಮಸ್ಯೆ ತಿಳಿಸಿ ಮನೆಗೆ ಕರೆಸಿದ್ದಾರೆ. ಮನೆಗೆ ಬಂದ ಬಸಪ್ಪ, ಮನೆಯಲ್ಲಿ ವಾಮಾಚಾರ ಮಾಡಿಸಿ ಹೂತಿಟ್ಟ  ವಸ್ತುವಿದ್ದ ಜಾಗ ತೋರಿಸಿದೆ. ಬಸಪ್ಪನ ಸಮ್ಮುಖದಲ್ಲಿ ವಾಮಾಚಾರವನ್ನು ತೆಗೆದು ಹಾಕಿದ ಮನೆಯವರು ಅದನ್ನು ಸುಟ್ಟು ಹಾಕಿಸಿದ್ದಾರೆ.

ಇದನ್ನು ಓದಿ: ದೇಗುಲಕ್ಕೆ ಅರ್ಚಕನ ನೇಮಿಸಿದ ಮಂಡ್ಯದ ಲೋಕಲ್​ ಲೋಕಾಯುಕ್ತ; ಮೂಕಬಸವನ ಆಜ್ಞೆಯೇ ಇಲ್ಲಿ ಸುಗ್ರೀವಾಜ್ಞೆ

ಸುತ್ತಮುತ್ತಲು ಪದೇ ಪದೇ ಈ ರೀತಿ ಅಚ್ಚರಿ ಸೃಷ್ಟಿಸಿರುವ ಬಸಪ್ಪನ ಈ ಪವಾಡ ಕಂಡು ಜನರು ಈ ಬಸಪ್ಪ ದೇವರ ಅವತಾರವೇ ಎನ್ನುತ್ತಿದ್ದಾರೆ.
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading