ರಾತ್ರಿ ಹೊತ್ತು ಹೆಡ್​ಲೈಟ್​ ಇಲ್ಲದೇ ಹೈವೇಯಲ್ಲಿ 170 ಕಿ.ಮೀ ಸಾಗಿದ ಅಂಬುಲೆನ್ಸ್​; ಡ್ರೈವರ್ ಸಾಹಸ ಮೆಚ್ಚಿಕೊಳ್ಳಬೇಕೋ, ಅವ್ಯವಸ್ಥೆಗೆ ಮರುಕಪಡಬೇಕೋ?

ನಿನ್ನೆ ರಾತ್ರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರೋಗಿ ಹೊತ್ತು ಹೊರಟಿದ್ದ ಅಂಬುಲೆನ್ಸ್​ ನ ಹೆಡ್​ಲೈಟ್ ದಾರಿಮಧ್ಯೆ​ ಹಾಳಾಗಿದೆ. ಹೆಡ್​ಲೈಟ್​ ಇಲ್ಲದೇ ಚಾಲಕ 170 ಕಿ.ಮೀ ಹೈವೇನಲ್ಲಿಯೇ ಸಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ. 

news18-kannada
Updated:March 4, 2020, 4:43 PM IST
ರಾತ್ರಿ ಹೊತ್ತು ಹೆಡ್​ಲೈಟ್​ ಇಲ್ಲದೇ ಹೈವೇಯಲ್ಲಿ 170 ಕಿ.ಮೀ ಸಾಗಿದ ಅಂಬುಲೆನ್ಸ್​; ಡ್ರೈವರ್ ಸಾಹಸ ಮೆಚ್ಚಿಕೊಳ್ಳಬೇಕೋ, ಅವ್ಯವಸ್ಥೆಗೆ ಮರುಕಪಡಬೇಕೋ?
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು (ಮಾ.04): ಜೀವ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಓಡಾಡುವ ಅಂಬುಲೆನ್ಸ್​ಗಳು ದೋಷಪೂರಿತವಾಗಿದ್ದರೂ ಅದನ್ನೇ ರೋಗಿ ರಕ್ಷಣೆಗೆ ಬಳಕೆ ಮಾಡಿಕೊಂಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಚಿಕ್ಕಮಗಳೂರಿನಲ್ಲಿ ನಡೆದ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ನಿನ್ನೆ ರಾತ್ರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರೋಗಿ ಹೊತ್ತು ಹೊರಟಿದ್ದ ಅಂಬುಲೆನ್ಸ್​ ನ ಹೆಡ್​ಲೈಟ್ ದಾರಿಮಧ್ಯೆ​ ಹಾಳಾಗಿದೆ. ಹೆಡ್​ಲೈಟ್​ ಇಲ್ಲದೇ ಚಾಲಕ 170 ಕಿ.ಮೀ ಹೈವೇನಲ್ಲಿಯೇ ಸಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಖಾಸಗಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್​ವೊಂದು ಅಪಘಾತದಿಂದ ಗಂಭೀರ ಗಾಯಗೊಂಡ ರೋಗಿಯನ್ನು ಹೊತ್ತು ಬೆಂಗಳೂರಿನ ನಿಮಾನ್ಸ್​ ಆಸ್ಪತ್ರೆಗೆ ಪ್ರಯಾಣ ಬೆಳೆಸಿದೆ. ಹಾಸನ ದಾಟುತ್ತಿದ್ದಂತೆ ಅಂಬುಲೆನ್ಸ್​ನ ಹೆಡ್​ಲೈಟ್​ ಹಾಳಾಗಿದೆ. ಈ ವೇಳೆ ಟೋಲ್ ನಂಬರ್ 100ಕ್ಕೆ, 108ಕ್ಕೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಇದನ್ನು ಓದಿ: ಇನ್ಮುಂದೆ ಶವದ ಅಂತ್ಯಸಂಸ್ಕಾರಕ್ಕೂ ಆಧಾರ್ ಕಾರ್ಡ್​​ ಕಡ್ಡಾಯ: ಮೈಸೂರು ಪಾಲಿಕೆ ಕ್ರಮ

ಯಾವುದೇ ಪರಿಹಾರ ಕಾಣದೇ ರೋಗಿಯ ಜೀವ ರಕ್ಷಣೆ ಹೊಣೆ ಹೊತ್ತ ಚಾಲಕ ಇಂಡಿಕೇಟರ್​ ಬಳಸಿ ಬೆಂಗಳೂರು ತಲುಪಲು ನಿರ್ಧರಿಸಿದ್ದಾರೆ. ಹೀಗೆ ಸುಮಾರು  170 ಕಿಲೋ ಮೀಟರ್ ದೂರವನ್ನ ಪರದಾಡುತ್ತಾ ಆತಂಕದಲ್ಲೇ ಸಾಗಿದ್ದಾರೆ. ಕಡೆಗೆ ಕುಣಿಗಲ್ ನಿಂದ ಮತ್ತೊಂದು ಆಂಬುಲೆನ್ಸ್ ಫಾಲೋ ಮಾಡಿ ಬೆಂಗಳೂರು ತಲುಪಿದ್ದಾರೆ.
 
First published: March 4, 2020, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading