• Home
  • »
  • News
  • »
  • state
  • »
  • Murugha Swamy: ಮುರುಘಾ ಸ್ವಾಮಿಗೆ ಮತ್ತೆ ಸಂಕಷ್ಟ; ದಾಖಲಾಯ್ತು ಮೂರನೇ ಎಫ್​ಐಆರ್​

Murugha Swamy: ಮುರುಘಾ ಸ್ವಾಮಿಗೆ ಮತ್ತೆ ಸಂಕಷ್ಟ; ದಾಖಲಾಯ್ತು ಮೂರನೇ ಎಫ್​ಐಆರ್​

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

ಮಂಗಳವಾರ ದಾಖಲಾದ ಎಫ್​ಐಆರ್​ನಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. A1 ಶಿವಮೂರ್ತಿ ಮುರುಘಾ ಸ್ವಾಮಿ,  A2 ಕಾರ್ಯದರ್ಶಿ ಪರಮಶಿವಯ್ಯ, A3 ವಾರ್ಡನ್ ರಶ್ಮಿ ಮತ್ತು A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ಆರೋಪಿಗಳಾಗಿದ್ದಾರೆ.

  • News18 Kannada
  • Last Updated :
  • Chitradurga, India
  • Share this:

ಜೈಲಿನಲ್ಲಿರುವ  ಮುರುಘಾ ಸ್ವಾಮಿಗೆ (Murugha Swamy) ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಸ್ವಾಮಿ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಚಿತ್ರದುರ್ಗ (Chitradurga) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಠದ ಆವರಣದಲ್ಲಿರುವ ಹಾಸ್ಟೆಲ್​ನಲ್ಲಿ ಇಬ್ಬರು ಮಕ್ಕಳು (Children) ಪತ್ತೆ ಆಗಿದ್ದರು. ನಾಲ್ಕೂವರೆ ವರ್ಷದ ಓರ್ವ ಬಾಲಕಿ ಹಾಗೂ 16 ವರ್ಷದ ಮತ್ತೋರ್ವ ಬಾಲಕಿ ಪತ್ತೆ ಆಗಿದ್ದರು. ಇಬ್ಬರು ಬಾಲಕಿಯರ ಬಗ್ಗೆ ಮಡಿಲು ಯೋಜನೆಗೆ ಮಾಹಿತಿ ನೀಡದೇ ಅಕ್ರಮ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಹಾಗೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದಿರುವುದು ಅಕ್ರಮ ಎಂದು ಸಾಮಾಜಿಕ ಹೋರಾಟಗಾರ ಮಧುಕುಮಾರ್ ನೀಡಿದ್ದ ದೂರನ್ನು ಪರಿಶೀಲಿಸಿದ ಮಕ್ಕಳ ರಕ್ಷಣಾ ಘಟಕ ಪೊಲೀಸ್​ ಠಾಣೆಗೆ ದೂರು ನೀಡಿದೆ.


ನಾಲ್ವರ ವಿರುದ್ಧ ದೂರು ದಾಖಲು


ಮಂಗಳವಾರ ದಾಖಲಾದ ಎಫ್​ಐಆರ್​ನಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. A1 ಶಿವಮೂರ್ತಿ ಮುರುಘಾ ಸ್ವಾಮಿ,  A2 ಕಾರ್ಯದರ್ಶಿ ಪರಮಶಿವಯ್ಯ, A3 ವಾರ್ಡನ್ ರಶ್ಮಿ ಮತ್ತು A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ಆರೋಪಿಗಳಾಗಿದ್ದಾರೆ.


CRPC 161 ಅಡಿಯ 2 ಹೇಳಿಕೆಗಳಲ್ಲಿ ವ್ಯತ್ಯಾಸ


ಎರಡನೇ ಎಫ್​ಐಆರ್ ಸಂಬಂಧ ಮಂಗಳವಾರ ಸಂತ್ರಸ್ತೆ  ಮತ್ತು ತಾಯಿ ಹೇಳಿಕೆ ದಾಖಲಿಸಿದ್ದರು. ಸಂತ್ರಸ್ತ ಬಾಲಕಿ, ತಾಯಿ (Victim girl and Mother) ನೀಡಿದ ಹೇಳಿಕೆಯಲ್ಲಿ ಕೆಲ ವ್ಯತ್ಯಾಸ ಕಂಡು ಬಂದಿದೆ ಎಂದು ತಿಳಿದು ಬಂದಿದೆ.


ಪ್ರಭಾರ ಪೀಠಾಧ್ಯಕ್ಷರ ನೇಮಕ


ಚಿತ್ರದುರ್ಗದ  ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ (Legal Process) ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ (High Court) ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ  ಅಕ್ಟೋಬರ್ 16ರಂದು ಅಧಿಕೃತ ಪ್ರಕಟಣೆ ಹೊರಡಿಸಿತ್ತು. ಮಠದ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರಿಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  SayCM Campaign: ಪೇಸಿಎಂ ಆಯ್ತು ಇದೀಗ ಸೇಸಿಎಂ ಅಭಿಯಾನ; ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ-ಪ್ರಿಯಾಂಕ್​ ಖರ್ಗೆನಿಷ್ಠೆಯಿಂದ ಭಕ್ತಿಯಿಂದ ಸೇವಾಕಾರ್ಯ ಮಾಡುತ್ತೇನೆ


ಬಸವಪ್ರಭುಶ್ರೀ ಅವರನ್ನು ಮುರುಘಾಮಠದ ಪೂಜಾ ಕೈಂಕರ್ಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿ ನೀಡಿದ ಬಸವಪ್ರಭುಶ್ರೀಗಳು, ನನಗೆ ಪೂಜೆ, ದಾಸೋಹ,‌ ಮಠದ ಕೆಲಸ ನೋಡಿಕೊಳ್ಳಲು ಶಿವಮೂರ್ತಿ ಮುರುಘಾ ಶರಣರಿಂದ ಆದೇಶ ಸಿಕ್ಕಿದೆ. ನಿಷ್ಠೆಯಿಂದ ಭಕ್ತಿಯಿಂದ ಸೇವಾಕಾರ್ಯ ಮಾಡುತ್ತೇನೆ ಎಂದು ಹೇಳಿದ್ದಾರೆ.


DNA ಪರೀಕ್ಷೆ ನಡೆಯಲಿ


4.5 ವರ್ಷದ ಕಂದಮ್ಮ ಮಠದ ಆವರಣದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು, CWC, ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿ ಮಗುವಿನ ರಕ್ಷಣೆ & ಪೋಷಕರ ಪತ್ತೆ ಮಾಡಿ ಎಂದು ತಿಳಿಸಿದ್ದೆ. DNA ಪರೀಕ್ಷೆ ನಡೆಯಲಿ ಅನ್ನೋದು ಸಾರ್ವಜನಿಕ ಅಭಿಪ್ರಾಯವಾಗಿದೆ  ಡಾ.ಮಧುಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:  Elephant: ಚಿಕಿತ್ಸೆ ಪಡೆಯುತ್ತಿದ್ದಆನೆ ಮರಿ ತಾಯಿ ಜೊತೆ ನಾಪತ್ತೆ


ಮಕ್ಕಳ ಪತ್ತೆ ಬಗ್ಗೆ ಸಿಬಿಐ ತನಿಖೆ ಆಗಲಿ


ಮಗು ಪತ್ತೆಯಾದ 10 ನಿಮಿಷದಲ್ಲಿ ಮುರುಘಾ ಸ್ವಾಮಿ ಗಮನಕ್ಕೆ ಬಂದಿದೆ. ಆ ಮಗು ಪತ್ತೆಯಾದ ಕೆಲವೇ ಕ್ಷಣದಲ್ಲಿ ಹೇಗೆ ಗೊತ್ತಾಯ್ತು? ಇದು ನಾಟಕೀಯವಾಗಿ ಕಾಣುತ್ತಿದೆ, ಅನುಮಾನ ಮೂಡಿದೆ. 15-20 ವರ್ಷದಲ್ಲಿ ಹತ್ತಾರು ಮಕ್ಕಳು ಮಠದ ಬಳಿ ಪತ್ತೆಯಾಗಿವೆ. ಮಕ್ಕಳು ಪತ್ತೆಯಾಗಿರೋದ್ರ ಬಗ್ಗೆ CBI ತನಿಖೆಯಾಗಬೇಕು. ಈ ಮಗು ಸ್ವಾಮೀಜಿ ಅವರದ್ದು ಎಂಬುದು ನನ್ನ ಅಭಿಪ್ರಾಯ. ಮುಂದಿನ ವಾರ ಕೋರ್ಟ್‌ ಮೊರೆ ಹೋಗುತ್ತಿದ್ದೇವೆ ಎಂದು ಡಾ.ಮಧುಕುಮಾರ್ ಹೇಳಿದ್ದಾರೆ.

Published by:Mahmadrafik K
First published: