• Home
  • »
  • News
  • »
  • state
  • »
  • Coorg Tourism: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ; ಮೂರನೇ ಸಾಕಾನೆ ಶಿಬಿರ ಆರಂಭ

Coorg Tourism: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ; ಮೂರನೇ ಸಾಕಾನೆ ಶಿಬಿರ ಆರಂಭ

ಆನೆಗಳು

ಆನೆಗಳು

ಇಲ್ಲಿನ ಸೂರ್ಯಾಸ್ತಮಾನದ (Sunset) ಕ್ಷಣವೇ ಅದ್ಭುತ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತಮಾನದ ದೃಶ್ಯ ಕಣ್ತುಂಬಿಕೊಳ್ಳೋದು ಅವಿಸ್ಮರಣೀಯ

  • Share this:

ಕೊಡಗು : ಹಾರಂಗಿ (Harangi) ಹಿನ್ನೀರಿನಲ್ಲಿ ಸಾಕಾನೆ ಶಿಬಿರ, ಸಾಕಾನೆ (Elephants) ಶಿಬಿರದಲ್ಲಿ ಸೂರ್ಯಾಸ್ತ ನೋಡುವುದೇ ಅದ್ಭುತ ಕ್ಷಣ. ಸಂಜೆಯಾಗುತ್ತಲೇ ಕೆಂಬಣ್ಣಕ್ಕೆ ತಿರುಗುವ ಸೂರ್ಯ, ದೂರದವರೆಗೆ ಇರುವ ಹಾರಂಗಿ ಹಿನ್ನೀರು, ನೀರಿನ ಆಚೆಗೆ ದೊಡ್ಡ ಬೆಟ್ಟಗಳ ಸಾಲು. ಬೆಟ್ಟಗಳ ನಡುವೆ ಅಸ್ತಂಗತನಾಗುವ ಸೂರ್ಯ, ಹಿನ್ನೀರಿನಲ್ಲಿ ಕಾಣುವ ಆ ಎಲ್ಲಾ ಪ್ರತಿಬಿಂಬ. ಕೆಂಬಣ್ಣದ ಸೂರ್ಯನಿಂದ ಕೆಂಪಾಗುವ ಹಿನ್ನೀರು. ಅದಕ್ಕೆ ಹೊಂದಿಕೊಂಡಂತೆ ಇರುವ ವೃಕ್ಷೋದ್ಯಾನ. ಇದು ಹಾರಂಗಿ ಹಿನ್ನೀರಿನಲ್ಲಿ (Harangi Backwater) ಶನಿವಾರದಿಂದ ಕಾರ್ಯಾರಂಭ ಮಾಡಿರುವ ಜಿಲ್ಲೆಯ ಮೂರನೇ ಸಾಕಾನೆ ಶಿಬಿರದ ದೃಶ್ಯ ಕಾವ್ಯ. ಇದನ್ನು ನೋಡುವುದೇ ಮಹಾದಾನಂದ. ಮತ್ತೊಂದೆಡೆ ಪಕ್ಕದಲ್ಲಿಯೇ ಹಾರಂಗಿ ಉದ್ಯಾನವನ ಇದ್ದು, ಅಲ್ಲಿರುವ ಕಾರಂಜಿಯನ್ನು ಕಣ್ತುಂಬಿಕೊಳ್ಳಬಹುದು.


ಕೊಡಗು ಪ್ರವಾಸೋದ್ಯಮಕ್ಕೆ (Kodagu Tourism) ಮತ್ತೊಂದು ಗರಿ ಎಂಬಂತೆ ಜಿಲ್ಲೆಯಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆಗೊಂಡಿದೆ. ಸಾಕಾನೆ ಶಿಬಿರ ಹಾಗೂ ವೃಕ್ಷೋದ್ಯಾನ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿವೆ.


ನೂತನ ಸಾಕಾನೆ ಶಿಬಿರ ಆರಂಭ


ಜಿಲ್ಲೆಯಲ್ಲಿ ಈಗಾಗಲೇ ದುಬಾರೆ ಹಾಗೂ ಮತ್ತಿಗೋಡುಗಳಲ್ಲಿ ಎರಡು ಸಾಕಾನೆ ಶಿಬಿರಗಳಿದ್ದವು. ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಬರೋಬ್ಬರಿ 32 ಸಾಕಾನೆಗಳಿದ್ದವು. ಆದರೆ ಅಷ್ಟೊಂದು ಆನೆಗಳ ಒತ್ತಡ ತಡೆದುಕೊಳ್ಳಲು ಆ ಶಿಬಿರಕ್ಕೆ ಆಗದ ಹಿನ್ನೆಲೆ ಮತ್ತು ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರೀಂ ಕೋರ್ಟ್ (Supreme Court) ಆದೇಶದ ಹಿನ್ನೆಲೆಯಲ್ಲಿ ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ ಆರಂಭಿಸಲಾಗಿದೆ.


third elephant camp start in coorg rsk mrq
ಹಾರಂಗಿ ಹಿನ್ನೀರು


ಈಗಾಗಲೇ ದುಬಾರೆ ಸಾಕಾನೆ ಶಿಬಿರದಿಂದ ಇಲ್ಲಿಗೆ 7 ಸಾಕಾನೆಗಳನ್ನೂ ಸ್ಥಳಾಂತರ ಮಾಡಲಾಗಿದೆ. ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಆರಂಭವಾಗಿರುವ ಸಾಕಾನೆ ಶಿಬಿರ ಮತ್ತಿಗೋಡು ಹಾಗೂ ದುಬಾರೆ ಸಾಕಾನೆ ಶಿಬಿರಗಳಿಗಿಂತ ವಿಭಿನ್ನವಾಗಿದೆ.


40 ಎಕರೆ ಪ್ರದೇಶದಲ್ಲಿ ನಿರ್ಮಾಣ


ಸುಮಾರು 2 ಸಾವಿರ ಏಕರೆಯ ವಿಶಾಲವಾದ ಅರಣ್ಯ ಪ್ರದೇಶವಿದ್ದು, ಅದರಲ್ಲಿ 40 ಎಕರೆ ಪ್ರದೇಶದಲ್ಲಿ ಈ ಶಿಬಿರ ನಿರ್ಮಿಸಲಾಗಿದೆ. ಹೀಗಾಗಿ ಇದು ಪ್ರವಾಸಿಗರ ಮನಸೂರೆಗೊಳ್ಳುವಂತಹ ಆಕರ್ಷಕ ತಾಣವಾಗಿದೆ.


third elephant camp start in coorg rsk mrq
ಸಾಕಾನೆ


ಇದನ್ನೂ ಓದಿ:  Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ


ಹಿನ್ನೀರು ಪ್ರದೇಶದಲ್ಲಿ ಆನೆಗಳ ಮಜ್ಜನ, ಆನೆಗಳ ಆಹಾರ ವಿತರಣೆ ಮೊದಲಾದ ಚಟುವಟಿಕೆಗಳಿವೆ. ಅದನ್ನ ಹೊರತುಪಡಿಸಿದ್ರೆ ಶಿಬಿರದಲ್ಲಿ ಬಗೆ ಬಗೆಯ ಮರಗಳ ವೃಕ್ಷೋದ್ಯಾನ ತಲೆ ಎತ್ತಿದೆ. ಮಕ್ಕಳಿಗೆ ಆಡವಾಡಲು ಪ್ರತ್ಯೇಕ ಆಟದ ಸ್ಥಳಾವಕಾಶವಿದೆ. ಜೊತೆಗೆ ಬೋಟಿಂಗ್ ವ್ಯವಸ್ಥೆ ಕೂಡ ಇದ್ದು ಪ್ರವಾಸಿಗರು ಅದನ್ನು ಎಂಜಾಯ್ ಮಾಡಬಹುದು.


ಸೂರ್ಯಾಸ್ತಮಾನದ ಕ್ಷಣವೇ ಅದ್ಭುತ


ಎಲ್ಲದಕ್ಕಿಂತ ಅದ್ಭುತ ಅಂದ್ರೆ ಇಲ್ಲಿನ ಸೂರ್ಯಾಸ್ತಮಾನದ (Sunset) ಕ್ಷಣವೇ ಅದ್ಭುತ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತಮಾನದ ದೃಶ್ಯ ಕಣ್ತುಂಬಿಕೊಳ್ಳೋದು ಅವಿಸ್ಮರಣೀಯ. ಸಂಜೆಯಾಗುತ್ತಲೇ ಕೆಂಬಣ್ಣಕ್ಕೆ ತಿರುಗುವ ಸೂರ್ಯ ದೂರದ ಬೆಟ್ಟ, ಗುಡ್ಡ ನಡುವೆ ಮರೆಯಾಗುತ್ತಿದ್ದರೆ, ಆ ಬಿಂಬ ಹಿನ್ನೀರಿನಲ್ಲಿ ಸೂರ್ಯ ಮುಳುಗಿ ಕರಗಿ ಹೋದನೇ ಎಂಬಂತ ಮನಮೋಹಕ, ರಮಣೀಯ ಕ್ಪಣ ಮನಸ್ಸಿಗೆ ಮುದ ನೀಡುತ್ತದೆ. ಆ ಮೂಲಕ ಪ್ರವಾಸಿಗರನ್ನು ಹಾರಂಗಿ ಸಾಕಾನೆ ಶಿಬಿರ ಕೈಬೀಸಿ ಕರೆಯುತ್ತಿದೆ.


third elephant camp start in coorg rsk mrq
ಸಾಕಾನೆಗಳು


ಇದನ್ನೂ ಓದಿ:  Hubballi Crime News: ದೀಪಕ್ ಪಟದಾರಿ ಕೊಲೆ ಪ್ರಕರಣ; ಮತ್ತಿಬ್ಬರ ಬಂಧನ, ಓರ್ವ ನಾಪತ್ತೆ


ಇಂತಹ ಶಿಬಿರಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (MLA Appachcu Ranjan) ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಆನೆ ಶಿಬಿರ ಆರಂಭಿಸಿರುವುದರಿಂದ ಇಲ್ಲಿನ ಜನರಿಗೆ ವ್ಯಾಪಾರ ವಹಿವಾಟುಗಳ ಮೂಲಕ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ ಎಂದರು. ದುಬಾರೆ ಸಾಕಾನೆ ಶಿಬಿರದಿಂದ ಆರು ಆನೆಗಳನ್ನು ಸ್ಥಳಾಂತರ ಮಾಡಲಾಗಿದೆ.

Published by:Mahmadrafik K
First published: