• Home
  • »
  • News
  • »
  • state
  • »
  • ಒಂದೇ ರಾತ್ರಿ 3 ಅಪಾರ್ಟ್​ಮೆಂಟ್​ನ 40 ಪ್ಲಾಟ್​ಗಳಲ್ಲಿ ಚಪ್ಪಲಿ, ಶೂ ಕದ್ದ ಖತರ್ನಾಕ್ ಕಳ್ಳರು

ಒಂದೇ ರಾತ್ರಿ 3 ಅಪಾರ್ಟ್​ಮೆಂಟ್​ನ 40 ಪ್ಲಾಟ್​ಗಳಲ್ಲಿ ಚಪ್ಪಲಿ, ಶೂ ಕದ್ದ ಖತರ್ನಾಕ್ ಕಳ್ಳರು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಲೊಟೋಸ್ ಲೀಫ್ ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನ ಎಸಗಿದ ಬಳಿಕ ಅದೇ ಗ್ಯಾಂಗ್ ಸುತ್ತಮುತ್ತಲಿನ ಮತ್ತೆರಡು ಅಪಾರ್ಟ್​ಮೆಂಟ್​ನಲ್ಲಿಯೂ ಕಳ್ಳತನ ಮಾಡಿದ್ದಾರೆ. ಒಟ್ಟಾರೆ ಒಂದೇ ರಾತ್ರಿಯಲ್ಲಿ 3 ಅಪಾರ್ಟ್​ಮೆಂಟ್​ಗಳ 40 ಪ್ಲಾಟ್​ಗಳಲ್ಲಿ ಕಳ್ಳತನ ಮಾಡಿದ್ದಾರೆ. ಮೂರು ಅಪಾರ್ಟ್​ಮೆಂಟ್​ ಅಸೋಸಿಯೇಷನ್​ಗಳು ಸಹ ಇದರ ಬಗ್ಗೆ ಪರಿಶೀಲನೆ ಮಾಡಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಬೆಳ್ಳಂದೂರು ಪೊಲೀಸರಿಗೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು; ಸಿಲಿಕಾನ್ ಸಿಟಿಗೆ ವಿಚಿತ್ರ ಕಳ್ಳರ ಗ್ಯಾಂಗ್ ಎಂಟ್ರಿ‌ ಕೊಟ್ಟಿದೆ. ಒಂದೇ ರಾತ್ರಿಯಲ್ಲಿ ಮೂರು ಅಪಾರ್ಟ್ಮೆಂಟ್ ಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿಲ್ಲ. ಬದಲಿಗೆ ಮನೆಯ ಹೊರಗೆ ಬಿಟ್ಟಿರುವ ದುಬಾರಿ ಬೆಲೆಯ ಶೂ ಹಾಗೂ ಚಪ್ಪಲಿಗಳನ್ನು ಕದ್ದೊಯ್ದಿದ್ದಾರೆ.

ಆಗಸ್ಟ್​ 2ರಂದು ಬೆಳ್ಳಂದೂರಿನ ಕನವನಹಳ್ಳಿ ಬಳಿಯ ಲೊಟೋಸ್ ಲೀಫ್ ಅನ್ನೋ ಅಪಾರ್ಟ್ಮೆಂಟ್ ನಲ್ಲಿ ಕಳ್ಳತನ ನಡೆದಿದೆ. ಇಲ್ಲಿ 15 ಪ್ಲಾಟ್​ಗಳಲ್ಲಿ ಕಳ್ಳತನ ನಡೆದಿದೆ. ಲೊಟೋಸ್ ಲೀಫ್ ಅಪಾರ್ಟ್ಮೆಂಟ್ ನಲ್ಲಿ 20 ಪ್ಲಾಟ್​ಗಳಿದ್ದು, ಅದರಲ್ಲಿ 15 ಪ್ಲಾಟ್​ಗಳಲ್ಲಿ ಕಳ್ಳತನ ನಡೆದಿದೆ. ಮನೆಯ ಮುಂದೆ ಇದ್ದ ದುಬಾರಿ ಬೆಲೆಯ ಚಪ್ಪಲಿ ಹಾಗೂ ಶೂಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇನ್ನು ಕಳ್ಳರು ಅಪಾರ್ಟ್​ಮೆಂಟ್​ಗೆ ಬರುವ ಹಾಗೂ ಕಳ್ಳತನ ಮಾಡಿಕೊಂಡು ಹೋಗುವ ವಿಶುಯಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಲೊಟೋಸ್ ಲೀಫ್ ಅಪಾರ್ಟ್​ಮೆಂಟ್​ನಲ್ಲಿ ಕಳ್ಳತನ ಎಸಗಿದ ಬಳಿಕ ಅದೇ ಗ್ಯಾಂಗ್ ಸುತ್ತಮುತ್ತಲಿನ ಮತ್ತೆರಡು ಅಪಾರ್ಟ್​ಮೆಂಟ್​ನಲ್ಲಿಯೂ ಕಳ್ಳತನ ಮಾಡಿದ್ದಾರೆ. ಒಟ್ಟಾರೆ ಒಂದೇ ರಾತ್ರಿಯಲ್ಲಿ 3 ಅಪಾರ್ಟ್​ಮೆಂಟ್​ಗಳ 40 ಪ್ಲಾಟ್​ಗಳಲ್ಲಿ ಕಳ್ಳತನ ಮಾಡಿದ್ದಾರೆ. ಮೂರು ಅಪಾರ್ಟ್​ಮೆಂಟ್​ ಅಸೋಸಿಯೇಷನ್​ಗಳು ಸಹ ಇದರ ಬಗ್ಗೆ ಪರಿಶೀಲನೆ ಮಾಡಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಬೆಳ್ಳಂದೂರು ಪೊಲೀಸರಿಗೆ ನೀಡಿದ್ದಾರೆ.

ಇದನ್ನು ಓದಿ: Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ

ಇನ್ನು ಲಾಕ್​ಡೌನ್​ಗೂ ಮುನ್ನ ಇದೇ ರೀತಿ ‌ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಆಗಿದ್ದು ಬಂದೋಬಸ್ತ್ ಹಾಗೂ ಕೊರೋನಾದಿಂದ ಸುಮ್ಮನಾಗಿದ್ದರು. ಈಗ ಮತ್ತೆ ಅದೇ ಗ್ಯಾಂಗ್ ಕಳ್ಳತನ ಮಾಡ್ತಾ ಇರಬಹುದು ಅಂತ ಭಾವಿಸಿದ್ದು ಪೊಲೀಸರು ತನಿಖೆ ಶುರುಮಾಡಿದ್ದಾರೆ. ಒಟ್ಟಿನಲ್ಲಿ ಬೆಲೆ ಬಾಳುವ ಚಪ್ಪಲಿ ಹಾಗೂ ಶೂಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದು ಅಪಾರ್ಟ್​ಮೆಂಟ್ ವಾಸಿಗಳಿಗೆ ತಲೆನೋವು ಉಂಟು ಮಾಡಿದೆ.

Published by:HR Ramesh
First published: