ಹುಬ್ಬಳ್ಳಿಯಲ್ಲಿ ಸಕ್ರಿಯಗೊಂಡ ಖದೀಮರ ಗ್ಯಾಂಗ್; ಅಶ್ಲೀಲ ವಿಡಿಯೋ ಜೋಡಿಸಿ ಬ್ಲ್ಯಾಕ್​ಮೇಲ್​

ವೀಡಿಯೋ ಕಾಲ್ ಮಾಡಿದಾಗ ಎದುರುಗಡೆ ವ್ಯಕ್ತಿಯ ಫೋಟೋವನ್ನು ಸ್ಕ್ರೀನ್ ಕ್ಯಾಪ್ಚರ್ ಮಾಡೋ ಖದೀಮರು, ಬಳಿಕ ಆ ಫೋಟೋ ಅನ್ನು ಅಶ್ಲೀಲ ವೀಡಿಯೋಕ್ಕೆ ಹೊಂದಾಣಿಕೆ ಮಾಡ್ತಾರೆ. ಅಲ್ಲಿಂದ ಅವರ ನಿಜವಾದ ಆಟ ಶುರುವಾಗುತ್ತದೆ.

Whatsapp

Whatsapp

  • Share this:
ಹುಬ್ಬಳ್ಳಿ(ಮಾ.20):  ಯುವಕರೇ ಎಚ್ಚರ. ಎಚ್ಚರ...! ವಾಟ್ಸಪ್ ಹಾಗೂ ಫೇಸ್‌ಬುಕ್‌ ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದೀರಾ?  ಚಾಟಿಂಗ್ ಮಾಡುವುದಕ್ಕೆ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೀರಾ ಹಾಗಿದ್ದರೇ ಹುಷಾರ... ಸ್ವಲ್ಪ ಯಾಮಾರಿದರೂ ನಿಮ್ಮ ಜೇಬಿಗೆ ಬಿಳುತ್ತೇ ಕತ್ತರಿ. ಏನಿದು ಸಾಮಾಜಿಕ ಜಾಲತಾಣದಲ್ಲಿ ವಂಚನೆ ಅಂತೀರಾ ಹಾಗಿದ್ದರೇ ಈ ಸ್ಟೋರಿ ಓದಿ.

ಸಾರ್ವಜನಿಕರೇ ಎಚ್ಚರ... ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿದ್ದರೇ ಹುಷಾರ್.. ವಿಡಿಯೋ ಕಾಲ್ ಮೂಲಕ ಮಾಡ್ತಾರೆ ಕಲೆಕ್ಷನ್...! ಅದ್ರಲ್ಲಿಯೂ ಯುವಕರೇ ಈ ಖದೀಮರ ಟಾರ್ಗೆಟ್.... ವಿಡಿಯೋ ಕಾಲ್ ಮಾಡಿ ವಂಚನೆ ಮಾಡ್ತಾರೆ. ಹೌದು. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಭಾರೀ ಸದ್ದು ಮಾಡುತ್ತಿದೆ. ಅದು ಅಸಲಿಯೋ ನಕಲಿಯೋ ಎನ್ನುವ ತನಿಖೆ ನಡೆಯುತ್ತಿದೆ. ಈ ನಡುವೆ  ಬ್ಲಾಕ್ ಮೇಲಿಂಗ್ ದಂಧೆಯನ್ನೇ ಉದ್ಯೋಗವಾಗಿಸಿಕೊಂಡ ಕಿರಾತಕರ ಗ್ಯಾಂಗ್ ಹುಬ್ಬಳ್ಳಿಯಲ್ಲಿ ಸಕ್ರಿಯವಾಗಿದೆ.

ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ಹೊಡೆಯುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಮಾನ.. ಮರ್ಯಾದೆ ಹರಾಜು ಹಾಕ್ತಾರೆ ಖದೀಮರು. ಹೌದು... ವಾಟ್ಸಪ್ ವೀಡಿಯೋ ಕಾಲ್ ಮಾಡಿ, ನಿಮ್ಮ ವೀಕ್ ನೆಸ್ ತಿಳಿದುಕೊಂಡು ಹಣದ ಬೇಡಿಕೆ ಇಟ್ಟು, ವಂಚನೆ ಮಾಡಲಾಗುತ್ತಿದೆ. ಮಾನ, ಮರ್ಯಾದೆಗೆ ಅಂಜುವವರನ್ನೇ ಇವರು ಟಾರ್ಗೆಟ್ ಮಾಡಿಕೊಂಡು ಅಪರಿಚಿತ ನಂಬರ್ ನಿಂದ ವಾಟ್ಸಪ್ ವೀಡಿಯೋ ಕಾಲ್ ಮಾಡ್ತಾರೆ.

World Sparrow Day: ಗುಬ್ಬಚ್ಚಿ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ ಮಂಡ್ಯದ ಪಕ್ಷಿಪ್ರೇಮಿ ಕುಟುಂಬ..!

ಅದರಲ್ಲಿ ಯುವತಿಯೊಬ್ಬಳು ನಿಮ್ಮ ಮುಂದೆ ಸಂಪೂರ್ಣ ಬೆತ್ತಲಾಗ್ತಾಳೆ‌. ನಿಮ್ಮನ್ನೂ ನಗ್ನವಾಗುವಂತೆ ಪ್ರಚೋದಿಸ್ತಾಳೆ ಐನಾತಿ ಲೇಡಿ. ಸ್ವಲ್ಪ ಯಾಮಾರಿದರೂ ಸಿಡಿ ಹೊರಗಡೆ ಬರೋದು ಗ್ಯಾರಂಟಿ. ಇಂತಹದ್ದೇ ಒಂದು ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ವೀಡಿಯೋ ಕಾಲ್ ಮಾಡಿದಾಗ ಎದುರುಗಡೆ ವ್ಯಕ್ತಿಯ ಫೋಟೋವನ್ನು ಸ್ಕ್ರೀನ್ ಕ್ಯಾಪ್ಚರ್ ಮಾಡೋ ಖದೀಮರು, ಬಳಿಕ ಆ ಫೋಟೋ ಅನ್ನು ಅಶ್ಲೀಲ ವೀಡಿಯೋಕ್ಕೆ ಹೊಂದಾಣಿಕೆ ಮಾಡ್ತಾರೆ. ಅಲ್ಲಿಂದ ಅವರ ನಿಜವಾದ ಆಟ ಶುರುವಾಗುತ್ತದೆ.

ಈ ರೀತಿಯ ಫೇಸ್‌ಬುಕ್‌ ಹಾಗೂ ವಾಟ್ಸಪ್ ಮೂಲಕ ಚಾಟಿಂಗ್ ಮಾಡಿ ಮೊದಲು 50 ಸಾವಿರ ಹಣ ಕೇಳುತ್ತಾರೆ. ಕೊಡಲ್ಲ ಅಂದರೆ ಎಡಿಟ್ ಮಾಡಿದ ವೀಡಿಯೋ ತೋರಿಸಿ ಬ್ಲಾಕ್ ಮೇಲೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಹಣ ನೀಡದಿದ್ದರೆ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಕೂಡ ಧಮ್ಕಿ ಹಾಕ್ತಾರೆ.

ಕೊನೆಗೆ 20 ಸಾವಿರ ಕೊಟ್ಟರೆ ವೀಡಿಯೋ ಡಿಲೀಟ್ ಮಾಡೋ ಅಭಯವನ್ನು ವಂಚಕರು ನೀಡ್ತಾರೆ. ಪ್ರತಿಷ್ಠಿತ ಮನೆತನದ ಯುವಕರನ್ನು ಈ ಖದೀಮರ ಟಾರ್ಗೆಟ್ ಮಾಡುತ್ತಾರೆ. ಇಂತಹುದೇ ಭಯದಲ್ಲಿ ಸಿಲುಕಿದ ಆಕಾಶ್ ಎಂಬ ಯುವಕ ಈಗ ಸೈಬರ್ ಪೊಲೀಸ್ ಠಾಣೆ ಮೊರೆ ಹೋಗಿದ್ದಾನೆ. ಈ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸಾಮಾಜಿಕ ಕಾರ್ಯಕರ್ತ ಶ್ರೀಧರ್ ಮನವಿ ಮಾಡಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ಇಂತಹ  ಬ್ಲಾಕ್ ಮೇಲಿಂಗ್ ದಂಧೆ ನಡೆದಿದೆ. ಇದನ್ನೇ ಕಸುಬು ಮಾಡಿಕೊಂಡ ಖದೀಮರು ಯುವಕರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ಸದ್ಯ ಇಂತಹುದೇ ಭಯದಲ್ಲಿ ಸಿಲುಕಿದ ಹುಬ್ಬಳ್ಳಿಯ ಯುವಕ, ಯುವತಿ ಹೇಳಿದಂತೆ ಕೇಳಿ ಕಂಗಾಲಾಗಿದ್ದಾನೆ.

ಬಳಿಕ ಹುಬ್ಬಳ್ಳಿ ಸೈಬರ್ ಕ್ರೈಂ ಮೊರೆ ಹೋಗಿದ್ದು,ಇಂತಹ ಕ್ರೈಂಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜನರೂ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ.
Published by:Latha CG
First published: