ಕೆಜಿಎಫ್​ ಪೊಲೀಸರ ನಿದ್ದೆಗೆಡಿಸುತ್ತಿರುವ ಕಳ್ಳರು; ಒಂದೇ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್​, ಎಟಿಎಂ ಲೂಟಿ

ಆಂಧ್ರದ ಕುಪ್ಪಂನಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅದೇ ಕಳ್ಳರು ಇಲ್ಲಿ ಕೂಡ ಕೈವಾಡ ತೋರಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಎಚ್ಚೆದಿದ್ದು, ಇದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ. 

ಎಟಿಎಂ ದರೋಡೆ ಮಾಡಿದ ಕಳ್ಳರು

ಎಟಿಎಂ ದರೋಡೆ ಮಾಡಿದ ಕಳ್ಳರು

  • Share this:
ಕೋಲಾರ (ಫೆ.03): ಚಿನ್ನದ ಗಣಿ ನಾಡಿನಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್​ಗೆ ಲೂಟಿ ಹಾಕುವ ಮೂಲಕ ಇಲ್ಲಿನ ಚಾಲಕಿ ಕಳ್ಳುರು ಪೊಲೀಸರಿಗೆ ತಲೆ ನೋವು ತಂದಿಟ್ಟಿದ್ದಾರೆ. 

ಕೆಜಿಎಫ್​ನಲ್ಲಿ ಹದಿನೈದು ದಿನಗಳ ಅಂತರದಲ್ಲಿ ಈ ಕಳ್ಳರು ಎಟಿಎಂ ಲೂಟಿ ಮಾಡಿದ್ದು, ಮೂರು ಲಕ್ಷಕ್ಕೂ ಹಣ ದೋಚಲಾಗಿದೆ. ಜ.15ರಂದು ತಾಲೂಕಿನ ಕ್ಯಾಸಂಬಳ್ಳಿ ಹೋಬಳ್ಳಿಯಲ್ಲಿನ ಇಂಡಿಯಾ ಒನ್​​ ಎಟಿಎಂ ಕೇಂದ್ರದ ಬಾಗಿಲು ಮುರಿದು, ಎಟಿಎಂ ಮುರಿದು 1 ಲಕ್ಷಕ್ಕೂ ಅಧಿಕ ಹಣವನ್ನು ಕದ್ದೊಯ್ಯಲಾಗಿದೆ.

ಇದಾದ 15 ದಿನದ ಅಂತರದಲ್ಲಿ ಜ.30 ರಂದು ಕೆಜಿಎಫ್​ ನಗರದ ಹೊರವಲಯದ ಸಂಗನಹಳ್ಳಿ ಬಳಿಯಿರುವ ಐಸಿಐಸಿಐ ಬ್ಯಾಂಕ್ ಕಿಟಕಿ ಮುರಿದು ಕನ್ನ ಹಾಕಿರುವ ಕಳ್ಳರು 1 ಲಕ್ಷದ 60 ಸಾವಿರ ಹಣ ದೋಚಿದ್ದಾರೆ. ಇನ್ನು ಕಳ್ಳತನ ಮಾಡುವಾಗ ತಮ್ಮ ಸುಳಿವು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಚಾಲಕಿ ಕಳ್ಳರು, ಸಿಸಿಟಿವಿ ಹಾನಿ ಮಾಡಿದ್ದಾರೆ. ಇದರಿಂದಾಗಿ ಈಗ ಈ ಕಳ್ಳತ ಪತ್ತೆ ದೊಡ್ಡ ತಲೆನೋವಾಗಿದೆ.

ಆಂಧ್ರ ಕಳ್ಳರ ಕೈ ಚಳಕ

ಇನ್ನು ಈ ಬ್ಯಾಂಕ್​ ಲೂಟಿ ಹಿಂದೆ ಆಂಧ್ರ ಕಳ್ಳರ ಕೈ ಚಳಕವಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆಂಧ್ರದ ಕುಪ್ಪಂನಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅದೇ ಕಳ್ಳರು ಇಲ್ಲಿ ಕೂಡ ಕೈವಾಡ ತೋರಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಎಚ್ಚೆದಿದ್ದು, ಇದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ.

ಇದನ್ನು ಓದಿ: ಕೆಸಿ ವ್ಯಾಲಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡು ಕೆರೆ ಒಡಲಿಗೆ ಕೈ ಹಾಕಿದ ಕಿಡಿಗೇಡಿಗಳು

ಭದ್ರತೆ ಇಲ್ಲದಿರುವುದೇ ಕಳ್ಳರಿಗೆ ಲಾಭಾ

ಇನ್ನು ನಗರದ ಪ್ರಮುಖ ಬ್ಯಾಂಕ್​ ಹಾಗೂ ಎಂಟಿಎಂ ಕೇಂದ್ರಗಳಿಗೆ ಭದ್ರತೆ ಇಲ್ಲದಿರುವುದೇ ಕಳ್ಳರಿಗೆ ದೊಡ್ಡ ಲಾಭಾವಾಗಿದೆ. ಸಿಸಿಟಿವಿ ಇದ್ದರೂ ರಾತ್ರಿ ಸಮಯದಲ್ಲಿ ಸೆಕ್ಯೂರಿಟಿ ಗಾರ್ಡ್​ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು, ಸಿಸಿಟಿವಿ ಧ್ವಂಸ ಮಾಡಿ ಈ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.

(ವರದಿ: ರಘರಾಜ್​)
First published: