Theft: ವರಮಹಾಲಕ್ಷ್ಮಿಗೆ ಹಾಕಿದ್ದ ಚಿನ್ನದ ಆಭರಣವನ್ನೇ ಕದ್ದ ಕಳ್ಳರು!

ರಾತ್ರಿ ಮನೆಯವರೆಲ್ಲಾ ಮಲಗಿದ ಮೇಲೆ ಬಂದ ಕದೀಮರು ಕೋಲು ಬಳಸಿ ಕಿಟಕಿಯ ಮೆಸ್ ಓಪನ್ ಮಾಡಿದ್ದಾರೆ. ಬಳಿಕ ದೇವರಿಗೆ ಹಾಕಿದ್ದ 100 ಗ್ರಾಂ ಚಿನ್ನದ ಸರ ಮತ್ತು 300 ಗ್ರಾಂ ಬೆಳ್ಳಿಯ ದೇವಿಯ ಮುಖವಾಡವನ್ನು ಕದ್ದು ಪರಾರಿಯಾಗಿದ್ದಾರೆ.

ವರಮಹಾಲಕ್ಷ್ಮಿ ಹಬ್ಬ ಆಚರಣೆ

ವರಮಹಾಲಕ್ಷ್ಮಿ ಹಬ್ಬ ಆಚರಣೆ

  • Share this:
ಬೆಂಗಳೂರು (ಆ.ಒ7): ವರಮಹಾಲಕ್ಷ್ಮಿಗೆ (Varamahalakshmi) ಹಾಕಿದ್ದ ಬಂಗಾರವನ್ನೇ (Gold) ರಾತ್ರೋ ರಾತ್ರಿ ಕದ್ದು ಪರಾರಿಯಾಗಿದ್ದಾರೆ. ನಗರದ ಮಹಾಲಕ್ಷ್ಮಿಲೇಔಟ್ (Mahalakshmilayout) ಠಾಣಾ ವ್ಯಾಪ್ತಿಯ ಸತ್ಯನಾರಾಯಣ ಲೇಔಟ್ ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೋಹನ (Mohan) ಎಂಬುವವರ ಮನೆಯಲ್ಲಿ ಹಬ್ಬದ ದಿನವೇ ಕಳ್ಳರು (Thieves) ತಮ್ಮ ಕೈಚಳ ತೋರಿದ್ದಾರೆ. ಮನೆಯ ಕಿಟಕಿ ಬಳಿ ವರಮಹಾಲಕ್ಷ್ಮಿಯನ್ನು ಕೂರಿಸಲಾಗಿತ್ತು.

 ಕೋಲಿನಲ್ಲಿ ಕಿಟಕಿ ತೆರೆದು ಕಳ್ಳತನ

ರಾತ್ರಿ ಮನೆಯವರೆಲ್ಲಾ ಮಲಗಿದ ಮೇಲೆ ಬಂದ ಕದೀಮರು ಕೋಲು ಬಳಸಿ ಕಿಟಕಿಯ ಮೆಸ್ ಓಪನ್ ಮಾಡಿದ್ದಾರೆ. ಬಳಿಕ ದೇವರಿಗೆ ಹಾಕಿದ್ದ 100 ಗ್ರಾಂ ಚಿನ್ನದ ಸರ ಮತ್ತು 300 ಗ್ರಾಂ ಬೆಳ್ಳಿಯ ದೇವಿಯ ಮುಖವಾಡವನ್ನು ಕದ್ದು ಪರಾರಿಯಾಗಿದ್ದಾರೆ.

Goddess Varamahalakshi idol price hike mrq

ಮನೆ ಮಾಲೀಕರಿಂದ ಪೊಲೀಸ್ ಠಾಣೆಗೆ ದೂರು

ಮನೆಯವರು ಮಲಗಿರುವ ಸಮಯದಲ್ಲಿ ಬಂಗಾರವನ್ನು ಕದ್ದು ಕದೀಮರು ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಎದ್ದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಮನೆ ಮಾಲೀಕ ಮೋಹನ್​ ಅವರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ದೇವರ ಹುಂಡಿಯಲ್ಲಿದ್ದ ಹಣ ಕಳ್ಳತನ

ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಕಳ್ಳರ ಕಾಟ ಎದುರಾಗಿದೆ. ದೇವಾಲಯದಲ್ಲಿ ಸತತ ನಾಲ್ಕನೇ ಬಾರಿ ಕಳ್ಳರು ದೇವಾಲಯದ ಹುಂಡಿ ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ. ಜನ ತಮ್ಮ ಕಷ್ಟಗಳನ್ನ ದೇವರು ಪರಿಹರಿಸುತ್ತಾರೆ ಎಂದು ದೇವಾಲಯಕ್ಕೆ ಹೋಗ್ತಾರೆ, ಭಕ್ತಿ ಭಾವದಿಂದ ಪೂಜೆ ಪುನಸ್ಕಾರ ಮಾಡಿ, ದೇವರಿಗೆ ಹರಕೆ ಹೊತ್ತು ಹುಂಡಿಗೆ ಕಾಣಿಕೆ ಹಾಕುತ್ತಾರೆ. ಆದ್ರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಆ ಭಗವಂತನಿಗೆ ಕಷ್ಟಗಳು ಬಂದೊದಗಿದೆ. ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲೆ ನಿರಂತರ ಕಳ್ಳರು ದಾಳಿಮಾಡುತ್ತಿದ್ದು, ಭಕ್ತರನ್ನು ಕಾಪಾಡುವ ದೇವರಿಗೆ ರಕ್ಷಣೆ ಇಲ್ಲದಂತಾಗಿದೆ.

ಸತತ 4 ಬಾರಿ ದೇವಾಲಯಕ್ಕೆ ನುಗ್ಗಿ ಕಳ್ಳತನ

ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿ ಬಳಿಯ ಕಾಡಂಚಿನ ಬೆಟ್ಟದಲ್ಲಿ ನೆಲಸಿರುವ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಕೊಂಡು ಹುಂಡಿಗೆ ಹಣ ಹಾಕ್ತಿದ್ದಾರೆ. ಆದ್ರೆ ಈ ದೇವಾಲಯವನ್ನೇ ಟಾರ್ಗೆಟ್ ಮಾಡಿರುವ ಖದೀಮರು ಒಂದಲ್ಲ ಎರಡಲ್ಲ ಸತತ 4 ಬಾರಿ ದೇವಾಲಯಕ್ಕೆ ನುಗ್ಗಿ ಹುಂಡಿ ಒಡೆದು ಹುಂಡಿಯಲ್ಲಿದ್ದ ಹಣ ಹಾಗೂ ದೇವರ ಒಡವೆಗಳನ್ನು ಕದ್ದೊಯ್ದಿದ್ದಾರೆ.

ಚಿಂದಿ ಆಯುತ್ತಾ ಬಂದು ಮನೆಗೆ ಹಾಕ್ತಿದ್ದ ಕನ್ನ

ಚಿಂದಿ ಆಯುತ್ತ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
‘ಪಶ್ಚಿಮ ಬಂಗಾಳದ ಸಮೀರ್ ಎರಾನ್ ಹಾಗೂ ಮೊಹಮ್ಮದ್ ದಿನ್ನು ಬಂಧಿತರು. ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಅವರಿಬ್ಬರು, ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಅವರಿಂದ ₹ 20 ಲಕ್ಷ ಮೌಲ್ಯದ 390 ಗ್ರಾಂ ಚಿನ್ನಾಭರಣ ಹಾಗೂ ಆಟೊ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರ ಹೇಳಿದರು.

ಇದನ್ನೂ ಓದಿ: Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆಲ್ಸ!

ಬಾಗಲಗುಂಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ನಿತ್ಯವೂ ಚಿಂದಿ ಆಯುತ್ತಿದ್ದ ಆರೋಪಿಗಳು, ಅದನ್ನು ಗುಜರಿ ಅಂಗಡಿಗೆ ಮಾರಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು. ಹಣ ಸಾಲದಿದ್ದರಿಂದ ಕಳ್ಳತನಕ್ಕೆ ಮುಂದಾಗಿದ್ದರು. ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸಿ, ನಿಗಾ ಇಟ್ಟು ಕಳ್ಳತನ ಮಾಡುತ್ತಿದ್ದರು ಎಂದೂ ತಿಳಿಸಿದರು.

ದೂರುದಾರರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಮೇ 3ರಂದು ದೆಹಲಿಗೆ ಹೋಗಿದ್ದರು. ಬಾಲ್ಕನಿಯ ಬಾಗಿಲಿನ ಗ್ರೀಲ್ ಮುರಿದು ಒಳನುಗ್ಗಿದ್ದ ಆರೋಪಿಗಳು, ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದ
Published by:Pavana HS
First published: