• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sandalwood Tree: ಹಾಸನದಲ್ಲಿ ನಿರ್ಮಾಣವಾಗಿದೆ ಗಂಧದಬೀಡು; ಬೆಲೆ ಬಾಳುವ ಶ್ರೀಗಂಧದ ಮೇಲೆ ಮರಗಳ್ಳರ ಕಣ್ಣು

Sandalwood Tree: ಹಾಸನದಲ್ಲಿ ನಿರ್ಮಾಣವಾಗಿದೆ ಗಂಧದಬೀಡು; ಬೆಲೆ ಬಾಳುವ ಶ್ರೀಗಂಧದ ಮೇಲೆ ಮರಗಳ್ಳರ ಕಣ್ಣು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಸನ ಜಿಲ್ಲೆಯಲ್ಲಿ ಶ್ರೀಗಂಧದ ಮರಗಳು ಬೆಳೆದು ನಿಂತಿವೆ. ಜೊತೆಗೆ ಬೆಲೆಬಾಳುವ ಶ್ರೀಗಂಧದ ಚೋರರ ಹಾವಳಿ ಕೂಡ ಹೆಚ್ಚಾಗಿದೆ. ಶ್ರೀಗಂಧದಲ್ಲಿ 23 ವೆರೈಟಿ ಕೆಜಿಗೆ 200 ರಿಂದ 12000 ರೂ ಬೆಲೆ ಇದೆ. ಗಂಧದ ಮರಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ

ಮುಂದೆ ಓದಿ ...
  • Share this:

ಹಾಸನ (ಜೂ 5): ಕರ್ನಾಟಕ ರಾಜ್ಯವನ್ನು ಗಂಧದಗುಡಿ ಎಂಬ ಹೆಸರಿನಿಂದ‌ ಕರೆಯಲಾಗುತ್ತದೆ.‌ ಏಕೆಂದರೆ ಗಂಧಕ್ಕೆ ಅಷ್ಟು ಮಹತ್ವವಿದೆ. ಹಾಸನ (Hassan) ಜಿಲ್ಲೆಯಲ್ಲೂ ಸಾವಿರಾರು ಎಕರೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಗಂಧದ ಮರಗಳು (Sandalwood Tree) ಬೆಳೆದಿದ್ದು ಮರಗಳ್ಳರ ಹಾವಳಿ ಹೆಚ್ಚಿದೆ. ಹಾಸನ ತಾಲ್ಲೂಕಿನ ರಾಮದೇವರಹಳ್ಳ ಮೀಸಲು ಅರಣ್ಯದಲ್ಲಿ (Forest) 2051 ಎಕರೆ ವೀಸ್ತಿರ್ಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಗಂಧದ ಮರಗಳು ಬೆಳೆದಿವೆ. ಇದರ ನಡುವೆ ಹಾಸನ ಹಳೇಬೀಡು ರಸ್ತೆ ಹಾದು ಹೋಗುತ್ತದೆ. ಇಲ್ಲಿ ಗಂಧದ ಮರಗಳ್ಳನ್ನು ಕಡಿದು ಕದ್ದು ಸಾಗಿಸುವ ಮರಗಳ್ಳರ ಹಾವಳಿ ಹಲವಾರು ವರ್ಷಗಳಿಂದಲೂ ಇದೆ‌.


ಹಾಸನದಲ್ಲಿ ಗಂಧದ ಮರಗಳ್ಳರ ಹಾವಳಿ


ಏಕಾಏಕಿ ಮರಗಳನ್ನು ಕಡಿಯುವುದಿಲ್ಲ. ಮೊದಲು ಕಾಡಿನಲ್ಲಿ ಅಲೆದಾಡಿ ಸುಮಾರು ಐದರಿಂದ ಹತ್ತು ವರ್ಷ ವಯಸ್ಸಿನ ಗಂಧದ ಮರಗಳ ಬುಡವನ್ನು ಮುಕ್ಕಾಲು ಭಾಗ ಕತ್ತರಿಸಿ ಹೋಗುತ್ತಾರೆ. ಅದು ಒಣಗಿ ಸುವಾಸನೆ ಬೀರಲು ಸುಮಾರು ಒಂದರಿಂದ ಎರಡು ತಿಂಗಳು ಬೇಕಾಗುತ್ತದೆ. ಆ ಸಮಯ ಆದ ನಂತರ ಬುಡದಿಂದ ಮೂರರಿಂದ ನಾಲ್ಕು ಅಡಿ ಮರವನ್ನು ಕತ್ತರಿಸಿಕೊಂಡು ಹೋಗಿ ಮಾರಾಟ ಮಾಡುತ್ತಾರೆ.


ಕಳ್ಳರಿಗೆ ಕಡಿವಾಣ ಹಾಕಲು ಶತಪ್ರಯತ್ನ


ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದರು, ಗಂಧದ ಮರಗಳ ಕಳ್ಳ ಸಾಗಾಣಿಕೆ ಕಡಿಮೆಯಾದರು ಸಂಪೂರ್ಣ ನಿಂತಿಲ್ಲ. ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. 2051 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ 320 ಹೆಕ್ಟೇರ್ ಅಂದರೆ 800 ಎಕರೆ ಗಂಧದ ಮರಗಳಿರುವ ಪ್ರದೇಶಕ್ಕೆ ಚೈನ್‌ಲಿಂಕ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಹಿಂದೆ ಐದು ಮಂದಿ ವಾಚರ್ಸ್ ಕಾರ್ಯ ನಿರ್ವಹಿಸುತ್ತಿದ್ದರು. ಈಗ 14 ಮಂದಿ 24 ಗಂಟೆಗಳ ಅರಣ್ಯ ಸಂಪತ್ತು ಕಾಪಾಡಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿ‌ಎಫ್ಓ ಬಸವರಾಜು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Cheating: ಆನ್​ಲೈನ್​ನಲ್ಲಿ ‘ಎಣ್ಣೆ‘ ಬುಕ್ ಮಾಡಿದವನಿಗೆ ಮಕ್ಮಲ್ ಟೋಪಿ; ಮದ್ಯಪಾನ ಖರೀದಿಸಲು ಹೋಗಿ 89,545ರೂ ಕಳ್ಕೊಂಡ


24 ಗಂಟೆ ಸಿಬ್ಬಂದಿಗಳ ಗಸ್ತು


ರಾತ್ರಿ ವೇಳೆ ಗಂಧ ಕಡಿದು ಸಾಗಿಸುವಾಗ ಎರಡು ಶೂಟೌಟ್ ನಡೆದಿದ್ದು ಇಬ್ಬರು ಮರಗಳ್ಳರು ಸಾವನ್ನಪ್ಪಿದ್ದಾರೆ. ಕಳೆದ ಮೂರು ವರ್ಷದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇನ್ನೂ ಹೆಚ್ಚಿನ ಭದ್ರತೆ ಒದಗಿಸಲು ಡಾಗ್ ಸ್ವ್ಯಾಡ್‌ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ವರ್ಷದಿಂದ ಸರ್ಕಾರ ಅನುಮತಿ ನೀಡುವ ಭರವಸೆಯಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ತಿಳಿಸಿದ್ದಾರೆ.


ವಾಚ್ ಟವರ್ ನಿರ್ಮಾಣ 


ಇದರ ಜೊತೆಗೆ ವಾಚ್ ಟವರ್ ನಿರ್ಮಾಣ ಹಾಗೂ ಈ ವರ್ಷ 300 ಮೀಟರ್ ಚೈನ್‌ಲಿಂಕ್ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಗಂಧದ ಮರಗಳಲ್ಲಿ 23 ವೆರೈಟಿಗಳಿವೆ. ಕೆಜಿಗೆ 200 ರಿಂದ 12000 ರೂ ಬೆಲೆ ಬಾಳುತ್ತದೆ. ಇದರಿಂದಲೇ ಗಂಧದ ಕಳ್ಳರ ಹಾವಳಿ ಹೆಚ್ಚಿತ್ತು ಇದೀಗ ಸಂಪೂರ್ಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡು ಅರಣ್ಯ ಸಂಪತ್ತನ್ನು ಉಳಿಸಲಾಗುವುದು ಎಂದಿದ್ದಾರೆ.


ಇನ್ನೂ ಸ್ಥಳೀಯರು ಸಹ ಅತ್ಯಮೂಲ್ಯವಾದ ಸಂಪತ್ತನ್ನು ಈಗಾಗಲೇ ಲೂಟಿ ಮಾಡಲಾಗಿದೆ. ಹತ್ತಾರು ವರ್ಷಗಳಿಂದಲೂ ರಾಮದೇವರಹಳ್ಳದ ಮೀಸಲು ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಗಂಧದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗಿದೆ.


ಇದನ್ನೂ ಓದಿ: RSS ಬಗ್ಗೆ ಮಾತಾಡಿದ್ರೆ ಬಂದ್ರೆ ಹುಷಾರ್; ನೀವೇ ಸುಟ್ಟು ಹೋಗ್ತೀರಾ, ಸಿದ್ದುಗೆ ಸಚಿವ ಅಶೋಕ್ ಟಾಂಗ್


ಹಾಸನ ನಗರದಲ್ಲೂ ಗಂಧದ ಮರಗಳ ಕಳ್ಳತನ


ಅಷ್ಟೇ ಹಾಸನ ನಗರದಲ್ಲೂ ಗಂಧದ ಮರಗಳ ಕಳ್ಳತನ ಮಾಡಲಾಗಿದೆ. ಕೇಲವ ಭದ್ರತೆ ಒದಗಿಸಿದರೆ ಸಾಲದು. ಗಂಧದ ಮರ ಕಳ್ಳ ಸಾಗಾಣೆ ಬಗ್ಗೆ ತನಿಖೆ ನಡೆಯಬೇಕು. ಈ ಬೃಹತ್ ಜಾಲದ ಹಿಂದೆ ಇರುವವರನ್ನು ಮಟ್ಟಹಾಕಿದರೆ ಶ್ರೀಗಂಧದ ಮರಗಳಿಗೆ ಉಳಿವಿದೆ. ಈ ನಿಟ್ಟಿನಲ್ಲಿ ಸರ್ಕಾರ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Published by:ಪಾವನ ಎಚ್ ಎಸ್
First published: