ನಿಧಿಗಾಗಿ ಶತಮಾನಗಳ ಹಿಂದಿನ ದೇವಾಲಯವನ್ನೇ ಕೆಡವಿದ ಕಳ್ಳರು!


Updated:September 5, 2018, 9:18 AM IST
ನಿಧಿಗಾಗಿ ಶತಮಾನಗಳ ಹಿಂದಿನ ದೇವಾಲಯವನ್ನೇ ಕೆಡವಿದ ಕಳ್ಳರು!

Updated: September 5, 2018, 9:18 AM IST
ರಘುರಾಜ್ ನ್ಯೂಸ್ 18 ಕನ್ನಡ

ಕೋಲಾರ(ಸೆ.05): ಇತ್ತೀಚೆಗೆ ಆ ಗ್ರಾಮದಲ್ಲಿ ಶತಮಾನಗಳ ಶಿವನ ದೇಗುಲವೊಂದು ಪತ್ತೆಯಾಗಿತ್ತು, ಜನರೆಲ್ಲ ದೇಗುಲ ಸ್ವಚ್ಚಮಾಡಿ ಶಿವನ ದೇಗುಲವನ್ನ ಪುನರ್ ನಿರ್ಮಿಸಲು ಪಣ ತೊಟ್ಟಿದ್ದರು, ಆದರೆ ದೇಗುಲದಲ್ಲಿ ನಿಧಿಯಿದೆ ಎಂಬ ವದಂತಿಯಿಂದ ನಿಧಿಗಳ್ಳರು ದೇಗುಲವನ್ನೇ ವಿರೂಪ ಮಾಡಿ ಪ್ರತಿದಿನ ನಿಧಿಗಾಗಿ ಪೂಜೆ ಮಾಡಿ, ನಿಧಿ ಹುಡುಕಾಟ ಮಾಡುತ್ತಿದ್ದಾರೆ. ಅಷ್ಟಕ್ಕು ಆ ದೇಗುಲ ಎಲ್ಲಿದೆ? ಇಲ್ಲಿದೆ ವಿವರ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ಹೊರವಲಯದಲ್ಲಿ ಪುರಾತನ ದೇವಾಲಯವೊಂದು ಪತ್ತೆಯಾಗಿತ್ತು. ಪ್ರತಿನಿತ್ಯ ನೂರಾರು ಜನರು ಓಡಾಡುವ ರಸ್ತೆಯ ಸಮೀಪ ಚೋಳರ ಕಾಲದ ಸುಂದರ ಶಿಲ್ಪಕಲೆಯುಳ್ಳ ಐತಿಹಾಸಿಕ ಶಿವನ ದೇವಾಲಯವೊಂದು ಅಚಾನಕ್ಕಾಗಿ ಬೆಳಕಿಗೆ ಬಂದಿದೆ. ದೇವಾಲಯ ಸುಮಾರು ಸಾವಿರ ವರ್ಷದಷ್ಟು ಹಳೆಯದಾಗಿದ್ದು, ಈ ಬೃಹತ್ ಸುಂದರ ಶಿಲ್ಪಕಲೆಯನ್ನು ಹೊಂದಿರುವ ದೇವಾಲಯ ಹಲವು ಕಾರಣಗಳಿಂದ ಕಣ್ಮರೆಯಾಗಿತ್ತು. ದೇವಾಲಯದ ಸುತ್ತಮುತ್ತ ಗಿಡ ಮರಗಳು ಬೆಳೆದು ದೇವಾಲಯ ಕಣ್ಣಿಗೆ ಕಾಣದಂತೆ ಪೊದೆಗಳಲ್ಲಿ ಹುದುಗಿಹೋಗಿತ್ತು. ಕಳೆದ ಒಂದು ವಾರದ ಹಿಂದೆ ಟೇಕಲ್ ಗ್ರಾಮದ ಸಮೀಪ ಬೆಂಗಳೂರಿನ ಆಡುಗೋಡಿ ಪಾಲಿಕೆ ಸದಸ್ಯರಾಗಿರುವ ಮುನಿರಾಜು ತಮ್ಮ ಜಮೀನು ಸ್ವಚ್ಛಗೊಳಿಸುವ ಸಂಬಂಧ ಈ ಜಾಗಕ್ಕೆ ಬಂದಾಗ ಅಚಾನಕ್ಕಾಗಿ ದೇವಾಲಯ ಕುರುಹು ಕಂಡುಬಂದಿದೆ ಬಳಿಕ ಸ್ಥಳೀಯ ಮುಖಂಡರು ಈ ದೇವಾಲಯ ಇರುವ ಸ್ಥಳಕ್ಕೆ ತೆರಳಿ ಅಚಾನಕ್ಕಾಗಿ ಪತ್ತೆಯಾದ ದೇವಾಲಯವನ್ನು ವೀಕ್ಷಿಸಿ ರಕ್ಷಿಸಿದ್ದರು.

ಇನ್ನು ದೇಗುಲ ಪತ್ತೆಯಾದ ಹಿನ್ನಲೆ ನಿಧಿಗಳ್ಳರ ಕಣ್ಣು ಐತಿಹಾಸಿಕ ದೇಗುಲದ ಮೇಲೆ ಬಿದ್ದಿದೆ, ರಾತ್ರೋ ರಾತ್ರಿ ಪಾಳುಬಿದ್ದ ದೇಗುಲಕ್ಕೆ ಆಗಮಿಸುವ ಕಳ್ಳರು ದೇಗುಲದ ಮುಂಬಾಗಿಲು, ಗರ್ಭಗುಡಿ ದ್ವಾರ, ಗರ್ಭಗುಡಿ ಮೂರ್ತಿಯ ಕೆಳಭಾಗದಲ್ಲಿ ಕ್ಷುದ್ರ ಪೂಜೆ ಸಲ್ಲಿಸಿ ನಿಧಿಗಾಗಿ ಭಾರೀ ಶೋಧ ನಡೆಸಿದ್ದಾರೆ, ಇದ್ರಿಂದ ದೇಗುಲ ಮತ್ತಷ್ಟು ಶಿಥಿಲಾವಸ್ತೆಗೆ ತಲುಪಿದ್ದು, ಪಾಳು ಬಿದ್ದ ದೇಗುಲಕ್ಕೆ ಯಾರಾದ್ರು ಹೋದ್ರೆ ಪ್ರಾಣಕ್ಕೆ ಸಂಚಕಾರ ತರುವಂತಿದೆ, ದೇಗುಲ ಜೀರ್ಣೋದ್ದಾರ ಮಾಡಲೆಂದು ಶ್ರಮಿಸ್ತಿರುವ ಕೆಲ ಜನರು ನಿಧಿಗಳ್ಳರ ಅಟ್ಟಹಾಸದಿಂದ ಬೇಸತ್ತಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ದೇಗುಲವನ್ನ ಭದ್ರಪಡಿಸುವಂತೆ ಆಗ್ರಹಿಸಿದ್ದಾರೆ.

ಶತಮಾನಗಳ ದೇಗುಲವಾದ್ದರಿಂದ ಮಣ್ನು ಕುಸಿತ ಉಂಟಾಗಿ ದೇಗುಲ ಸ್ವಲ್ಪ ಒಳಬಾಗಕ್ಕೆ ಹೂತುಹೂಗಿದೆ, ಆದ್ರೆ ದೇಗುಲದ ಒಳಕ್ಕೆ ಪ್ರವೇಶಿಸಿ ನೋಡಿದಾಗ ದೇಗುಲದೊಳಗಿನ ಸುಂದರ ಕಲಾಕೃತಿ, ಹಾಗು ಶಿವನ ಮಹಿಮೆ ಸಾರುವ ಕಲಾಕೃತಿಗಳು ಎಂತರವನ್ನ ಮೂಕ ಪ್ರೇಕ್ಷಕರನ್ನಾಗಿತ್ತದೆ, ಹಾಗಾಗಿ ದೇಗುಲವನ್ನ ಕೂಡಲೇ ಸಂಬಂದ ಪಟ್ಟ ಇಲಾಖೆ ರಕ್ಷಿಸಿ ಕಾಪಾಡಬೇಕೆಂದು ಭಕ್ತರು ಮನವಿ ಮಾಡಿದ್ದಾರೆ.

ನೂರೊಂದು ಶಿವನ ದೇಗುಲ, ನೂರೊಂದು ಲಿಂಗ ನೂರೊಂದು ಕೆರೆ ಹೊಂದಿರುವ ಟೇಕಲ್ ಹೋಬಳಿ ಇತಿಹಾಸದಲ್ಲಿ ಚೋಳರ ಕಾಲದ ಪವಿತ್ರ ಶಿವ ಆರಾಧನೆ ಸ್ತಳವನ್ನಾಗಿಕೊಂಡು ಭಕ್ತ ಭಾವಗಳಿಂದ ದೇಗುಲಗಳು ಕಂಗೊಳಿಸುತ್ತಿದೆ. ಆದರೆ ಟೇಕಲ್‍ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಿತಿಮೀರಿದ್ದು, ಕೆಲ ಐತಿಹಾಸಿಕ ದೇಗುಲಗಳ ಅಸ್ತಿತ್ವವೇ ಇಲ್ಲದಂತಾಂಗಿದೆ, ಜೊತೆಗೆ ನಿಧಿಗಳ್ಳರ ಹಾವಳಿಯೂ ಮಿತಿಮೀರಿದ್ದು, ದೇಗುಲವನ್ನೇ ಕೆಡವಿ ನಿಧಿಗಾಗಿ ರಾತ್ರೋ ರಾತ್ರಿ ಶೋಧ ನಡೆಸ್ತಿದ್ದಾರೆ, ಇನ್ನಾದರೂ ಮಾಲೂರು ತಾಲೂಕು ಆಡಳಿತ ಹಾಗು ಪುರಾತತ್ವ ಇಲಾಖೆ ಟೇಕಲ್‍ನ ಶಿವನ ದೇಗುಲವನ್ನ ರಕ್ಷಿಸಿ ಉಳಿಸಿ, ಬೆಳೆಸಿ, ನಮ್ಮ ಇತಿಹಾಸದ ಗತವೈಭವ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...