ಪೊಲೀಸರ ಎದುರೇ ತಂಗುದಾಣ ಬಿಚ್ಚಿ, ಲಾರಿಗೆ ತುಂಬಿಕೊಂಡು ಹೋದ ಖತರ್ನಾಕ್ ಖದೀಮರು!

news18
Updated:September 1, 2018, 8:44 AM IST
ಪೊಲೀಸರ ಎದುರೇ ತಂಗುದಾಣ ಬಿಚ್ಚಿ, ಲಾರಿಗೆ ತುಂಬಿಕೊಂಡು ಹೋದ ಖತರ್ನಾಕ್ ಖದೀಮರು!
news18
Updated: September 1, 2018, 8:44 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.1): ಎಷ್ಟೇ ಭದ್ರತೆ, ಪೊಲೀಸರ ಕಾವಲು ಇದ್ದರೂ ಕಳ್ಳರು ತಮ್ಮ ಕೈಚಳಕ ತೋರಿಬಿಡುತ್ತಾರೆ ಎಂಬುದಕ್ಕೆ ಬೆಂಗಳೂರಿನ ಸದಾಶಿವನಗರದ ಪೊಲೀಸ್ ಠಾಣೆಯ ಸಮೀಪ ನಡೆದ ಕಳ್ಳತನೇ ಸಾಕ್ಷಿ. ಪೊಲೀಸರ ಎದುರೇ ಖದೀಮರು ಬಸ್​ಸ್ಟಾಪ್ ಚೌಕಟ್ಟನ್ನು ಬಿಚ್ಚಿ, ಲಾರಿಯಲ್ಲಿ ತುಂಬಿಕೊಂಡು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಬಗ್ಗೆ ಪೊಲೀಸರು, "ಇತ್ತೀಚೆಗೆ ಯಾರೋ, ಪೊಲೀಸ್ ಠಾಣೆಯ ಸಮೀಪದಲ್ಲಿರುವ ತಂಗುದಾಣದ ಚೌಕಟ್ಟಿನ ಕಬ್ಬಿಣವನ್ನು ಬಿಚ್ಚುತ್ತಿದ್ದರು, ಬಿಚ್ಚಿದ ನಂತರ ಅಲ್ಲೇ ನಿಲ್ಲಿಸಿಕೊಂಡಿದ್ದ ಲಾರಿಯಲ್ಲಿ ಅವುಗಳನ್ನೆಲ್ಲ ತುಂಬಿಕೊಂಡು ಹೋದರು. ಯಾರೋ ಬಿಬಿಎಂಪಿ ಸಿಬ್ಬಂದಿ ಕೆಲಸ ಮಾಡುತ್ತಿರಬೇಕು ಎಂದು ನಾವು ಸುಮ್ಮನೆ ನೋಡುತ್ತಿದ್ದೆವು. ತಂಗುದಾಣ ಕಳುವಾಗಿದೆ ಎಂದು ಬಿಬಿಎಂಪಿ ದೂರು ದಾಖಲಿಸಿದಾಗಲೇ ಇದು ಕಳ್ಳತನ ಎಂಬುದು ನಮ್ಮ ಅರಿವಿಗೆ ಬಂದಿದ್ದು," ಎಂದು ಹೇಳುತ್ತಾರೆ.

ತಂಗುದಾಣ ಕಳುವಾಗಿರುವ ಬಗ್ಗೆ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರು ಪ್ರಕರಣ ದಾಖಲಿಸಿದ್ದಾರೆ.

ಖಾಸಗಿ ಸಹಭಾಗಿತ್ವದಲ್ಲಿ ಈ ತಂಗುದಾಣವನ್ನು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ತಂಗುದಾಣದಲ್ಲಿ ಜಾಹೀರಾತು ಪ್ರದರ್ಶಿಸುವವರು ಅದರ ನಿರ್ಮಾಣ ವೆಚ್ಚ 1.5 ಲಕ್ಷ ಭರಿಸಿದ್ದರು. ಹತ್ತು ವರ್ಷಗಳ ಹಳೆಯದಾದ ತಂಗುದಾಣ ಬದಲಿಸಲು ಪಾಲಿಕೆ ಪರಿಶೀಲನೆ ನಡೆಸುವಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪ್ರವೀಣ್ ಲಿಂಗಯ್ಯ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿ ಕ್ಯಾಮರಾಗಳ ಫೂಟೇಜ್​ಗಳನ್ನು ಪರಿಶೀಲಿಸುತ್ತಿದ್ದಾರೆ.

ತಗಡು, ಕಬ್ಬಿಣವನ್ನೂ ಕದ್ದೊಯ್ಯುತ್ತಾರೆ ಅಂದರೆ ಅವರು ಎಂಥ ಖದೀಮರು ಇರಬೇಕು. ಇದು ಗುಜರಿ ಸಂಗ್ರಹಕಾರರ ಕೃತ್ಯವೇ ಇರಬೇಕು ಎಂದು ಅವರು ಶಂಕಿಸಿದ್ದಾರೆ.
Loading...

ಇತ್ತೀಚೆಗೆ ನಗರದಲ್ಲಿ ಬಸ್​ ನಿಲ್ದಾಣಗಳ ಭಾಗಗಳನ್ನು ಕದ್ದೊಯ್ಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸದಾಶಿವನಗರ ಮತ್ತು ನಂದಿನಿ ಲೇಔಟ್​ನಲ್ಲಿ ಎರಡು ತಿಂಗಳ ಹಿಂದೆ ಬಿಸ್​ ನಿಲುಗಡೆ ತಾಣದ ಕಬ್ಬಿಣದ ಚೌಕಟ್ಟುಗಳ ಕಳ್ಳತನವಾಗಿತ್ತು.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...