ಮಂಗಳೂರು: ಆ ಮನೆಯವರು ವರ್ಷಗಳಿಂದ ಕನಸು ಕಟ್ಟಿ ಕೊನೆಗೂ ತಮ್ಮ ಆಸೆಯಂತೆ ಮನೆ ನಿರ್ಮಾಣ ಮಾಡಿದ್ದರು. ಕಂಡ ಕನಸು ನೆರವೇರಿದ ಹಿನ್ನೆಲೆಯಲ್ಲಿ ಆಪ್ತರ ಸಮ್ಮುಖದಲ್ಲಿ ಶುಭ ಕಾರ್ಯಕ್ರಮ ಮಾಡಿ ಹೊಸ ಮನೆಗೆ ಕಾಲಿಡುವ ಸಂತಸದಲ್ಲಿದ್ದರು. ಈ ನಡುವೆ ನಡೆದ ಘಟನೆಯೊಂದು ಮನೆ ಮಂದಿಗೆ ಶಾಕ್ ನೀಡಿದ್ದು, ಹೊಸ ಮನೆಗೆ ಕಾಲಿಡುವ ಸಂತಸದಲ್ಲಿದ್ದ ಮನೆ ಮಂದಿಗೆ ನಿರಾಸೆಯನ್ನು ತಂದಿದೆ. ಹೌದು, ಗೃಹಪ್ರವೇಶದ (House Warming Function) ಸಂತಸದಲ್ಲಿದ್ದ ಮನೆಯವರಿಗೆ ಚಾಲಕಿ ಕಳ್ಳನೋರ್ವ (Thieve) ತನ್ನ ಕೈಚಳಕ ತೋರಿಸಿದ್ದಾನೆ. ಮನೆಯಲ್ಲಿ ಎಲ್ಲರೂ ಇದ್ದಾಗಲೇ, ಒಳನುಗ್ಗಿ ಸೈಲೆಂಟ್ ಆಗಿ ಮನೆಯಲ್ಲಿದ್ದ ವಸ್ತುಗಳನ್ನು ಕದ್ದು (Theft in Home) ಎಸ್ಕೇಪ್ ಆಗಿದ್ದಾನೆ. ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು (Mangaluru) ಹೊರವಲಯದ ಕೋಟೆಕಾರಿನ ಅಡ್ಕಬೈಲು ಎಂಬಲ್ಲಿ ನಡೆದಿದೆ.
ಹೋಮದ ಹೊಗೆಯನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡ ಕಳ್ಳ
ಕನಸಿನ ಮನೆ ನಿರ್ಮಾಣ ಮಾಡಿದ್ದ ಸ್ಮಿತಾ-ದಾಮೋದರ್ ದಂಪತಿ ನೂತನವಾಗಿ ಕಟ್ಟಿಸಿದ್ದ ಮನೆಯ ಗೃಹ ಪ್ರವೇಶ ಕಾರ್ಯವನ್ನು ಮಾಡಿಸುತ್ತಿದ್ದರು. ಇದರ ಭಾಗವಾಗಿ ವಾಸ್ತು ಹೋಮವನ್ನು ಮಾಡಿಸಿದ್ದರು. ಮನೆಯಲ್ಲಿ ಹೋಮ ನಡೆಯುತ್ತಿದ್ದ ಕಾರಣ ಇಡೀ ಮನೆಯಲ್ಲಿ ಹೋಮದ ಹೊಗೆ ತುಂಬಿಕೊಂಡಿತ್ತು. ಈ ಸಂದರ್ಭನ್ನೇ ಬಳಸಿಕೊಂಡ ಕಳ್ಳನೋರ್ವ ಎಲ್ಲರೂ ಮನೆಯಲ್ಲಿ ಇರುವಾಗಲೇ ಒಳ ಬಂದಿದ್ದಾನೆ.
ಇದನ್ನೂ ಓದಿ: Theft Case: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ, 17 ಕೋಟಿ 54 ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್
ಮನೆಗೆ ಎಂಟ್ರಿ ಕೊಟ್ಟಿದ್ದ ಕಳ್ಳ ನೇರ ಮನೆಯ ಕೊಠಡಿಗೆ ತೆರಳಿ ಕೊಠಡಿಯಲ್ಲಿದ್ದ 15 ಸಾವಿರ ರೂಪಾಯಿ ನಗದು, ಮೊಬೈಲ್ ಚಾರ್ಜರ್, ಬೆಳೆಬಾಳುವ ಕಾಸ್ಮೋಟಿಕ್ಸ್ ವಸ್ತುಗಳನ್ನು ಕದ್ದು ಮನೆಯವರ ಎದುರೇ ಎಸ್ಕೇಪ್ ಆಗಿದ್ದಾನೆ. ಗೃಹ ಪ್ರವೇಶ ಕಾರ್ಯಕ್ರಮದ ಮುನ್ನ ದಿನ ಘಟನೆ ನಡೆದಿದೆ.
ನೆರೆ ಮನೆಯಲ್ಲೂ ಕೈಚಳಕ ತೋರಿದ ಕಳ್ಳ
ಬರ್ಮುಡಾ ಶಾರ್ಟ್ಸ್ ಧರಿಸಿ ಮನೆಯೊಳಗೆ ಬಂದಿದ್ದ ಕಳ್ಳತನ ಗುರುತು ಮನೆಯಲ್ಲಿ ಹೋಮ ವಿಡಿಯೋ ಮಾಡುತ್ತಿದ್ದ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಮದ ಹೊಗೆ ಸಂಪೂರ್ಣ ಮನೆಯನ್ನು ಆವರಿಸಿದ್ದ ಹಿನ್ನೆಲೆಯಲ್ಲಿ ಕಳ್ಳನನ್ನು ಗುರುತಿಸಲು ಆಗಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.
ಇನ್ನು, ಚಾಲಕಿ ಕಳ್ಳ ಹೋಮ ನಡೆಯುತ್ತಿದ್ದ ಮನೆ ಮಾತ್ರವಲ್ಲದೇ, ಅದರ ಪಕ್ಕದ ಮನೆಯನ್ನೂ ಟಾರ್ಗೆಟ್ ಮಾಡಿದ್ದಾನೆ. ಪಕ್ಕದ ಮನೆಯ ಕಪಾಟು ಹೊಡೆದು ಅದರಲ್ಲಿದ್ದ ಸುಮಾರು 1 ಲಕ್ಷ 49 ಸಾವಿರ ರೂಪಾಯಿ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ.
ಮಹಿಳೆಯ ಮಾಂಗಲ್ಯ ಸರ ಕಳ್ಳತನದ ವೇಳೆ ಸಿಕ್ಕಿಬಿದ್ದ ಕಳ್ಳ
ಮಹಿಳೆಯ ಕೊರಳಿನಿಂದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗುವ ವೇಳೆ ಕಳ್ಳನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರದ (Doddaballapura) ರೈಲ್ವೆ ಸ್ಟೇಷನ್ (Railway Station) ರಸ್ತೆಯ ಸ್ಕೌಟ್ ಕ್ಯಾಂಪ್ ರಸ್ತೆ ಬಳಿ ನಡೆದಿದೆ.
ಇದನ್ನೂ ಓದಿ: Gold Theft: ಊಟದ ಗ್ಯಾಪಲ್ಲಿ ಮನೆಯನ್ನೇ ದೋಚಿದ ಕಳ್ಳರು; 66 ಲಕ್ಷ ಮೌಲ್ಯದ ಹಣ, ಚಿನ್ನಾಭರಣ ಲೂಟಿ
ಮಹಿಳೆಯೊಬ್ಬರು ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದ್ದು, ಮಹಿಳೆಯೊಬ್ಬರೇ ಇರುವುದನ್ನು ಗಮನಿಸಿ ಕಳ್ಳ ಕೃತ್ಯ ಎಸಗಿದ್ದಾನೆ. ಇನ್ನು, ಮಹಿಳೆ ಈ ವೇಳೆ ಸಹಾಯಕ್ಕಾಗಿ ಕೂಗಾಡಿದ್ದು, ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ