ಸರಗಳ್ಳ ದಂಪತಿಗಳ ಬಂಧನ; 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಕೋಣನಕುಂಟೆ ಪೊಲೀಸರು

ಈ ಕಳ್ಳ ದಂಪತಿಗಳು ಕಳೆದ ಹಲವು ವರ್ಷಗಳಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸುಮಾರು 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ಇವರ ಮೇಲಿದೆ ಎನ್ನಲಾಗುತ್ತಿದೆ.

news18-kannada
Updated:December 17, 2019, 11:14 AM IST
ಸರಗಳ್ಳ ದಂಪತಿಗಳ ಬಂಧನ; 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಕೋಣನಕುಂಟೆ ಪೊಲೀಸರು
ಕಳ್ಳ ದಂಪತಿಗಳಾದ ಚೆಲುವರಾಯ ಮತ್ತು ಮಂಜುಳ.
  • Share this:
ಬೆಂಗಳೂರು (ಡಿಸೆಂಬರ್ 17); ಮಹಿಳೆಯರು ಮತ್ತು ವೃದ್ಧೆಯರ ಗಮನವನ್ನು ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಕಳ್ಳ ದಂಪತಿಗಳನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ, ದಂಪತಿಗಳಿಂದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣವನ್ನೂ ವಶಕ್ಕೆ ಪಡೆಯಲಾಗಿದೆ.

ಬಂಧಿತ ದಂಪತಿಗಳನ್ನು ಮಂಜುಳ ಅಲಿಯಾಸ್ ಕಳ್ಳಿ ಮಂಜಿ ಮತ್ತು ಚೆಲುವರಾಯ ಅಲಿಯಾಸ್ ಚೆಲುವ ಎಂದು ಗುರುತಿಸಲಾಗಿದೆ.

ಈ ಕಳ್ಳ ದಂಪತಿಗಳು ಕಳೆದ ಹಲವು ವರ್ಷಗಳಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಸುಮಾರು 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ಇವರ ಮೇಲಿದೆ ಎನ್ನಲಾಗುತ್ತಿದೆ.

crime 01
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳ ದಂಪತಿಗಳು.


ಜ್ಯುವೆಲ್ಲರಿ ಶಾಪ್​ಗಳಿಂದ ಹೊರ ಬರುತ್ತಿದ್ದ ವಯೋವೃದ್ಧೆಯರೆ ಇವರ ಟಾರ್ಗೆಟ್. ವಯೋವೃದ್ಧರು ಹಾಗೂ ಚಿನ್ನಾಭರಣ ಹಾಕಿಕೊಂಡು ಓಡಾಡುವ ಮಹಿಳೆಯರ ಪರಿಚಯ ಮಾಡಿಕೊಳ್ಳುತ್ತಿದ್ದ ಮಂಜುಳ ಅವರ ಬಳಿ ಸಲೀಸಾಗಿ ಮಾತು ಬೆಳೆಸಿ ನಂಬಿಕಸ್ಥ ಮನೋಭಾವವನ್ನು ಮೂಡಿಸುತ್ತಿದ್ದಳು.

ಹೀಗೆ ಮಾತನಾಡಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ಮಂಜುಳ ನಂತರ ತನ್ನ ಪತಿಯ ಮೂಲಕ ದರೋಡೆ ಮಾಡಿಸುತ್ತಿದ್ದಳು. ಹೀಗಾಗಿ ಸುಬ್ರಮಣ್ಯಪುರ ಎಸಿಪಿ ಮಹಾದೇವ್ ಹಾಗೂ ಇನ್ಸ್​ಪೆಕ್ಟರ್​ ಧರ್ಮೇಂದ್ರ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಕೊನೆಗೂ ಈ ಕಳ್ಳ ದಂಪತಿಗಳನ್ನು ಪತ್ತೆಹಚ್ಚುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಬಿಎಸ್​ವೈ ಸರ್ಕಾರ ಸೇಫ್ ಆದ್ರೂ ಮುಂದುವರೆದ ಆಪರೇಷನ್ ಕಮಲ; ಜೆಡಿಎಸ್ ಪಕ್ಷದ ಮತ್ತಿಬ್ಬರು ಶಾಸಕರು ಬಿಜೆಪಿ ತೆಕ್ಕೆಗೆ?
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ