ATMನಲ್ಲಿ ಮನಿ ಡ್ರಾ ಮಾಡೋದಕ್ಕೆ ಹೆಲ್ಪ್ ಮಾಡ್ತಿದ್ದ, ಕಾರ್ಡ್ ಎಗರಿಸಿ ಎಸ್ಕೇಪ್ ಆಗ್ತಿದ್ದ! ಅಂತೂ ಬಲೆಗೆ ಬಿದ್ದ ಖದೀಮ

ಎಂಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಈತ ನಂತರ ಜ್ಯುವೆಲ್ಲರಿ ಶಾಪ್‍ಗಳಲ್ಲಿ ತೆರಳಿ ಕಾರ್ಡ್ ಸ್ವೈಪ್ ಮಾಡಿ ಚಿನ್ನವನ್ನು ಖರೀದಿಸುತ್ತಿದ್ದನೆಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಪೊಲೀಸರ ಬಲೆಗೆ ಬಿದ್ದ ಖದೀಮ

ಪೊಲೀಸರ ಬಲೆಗೆ ಬಿದ್ದ ಖದೀಮ

  • Share this:
ಚಿಕ್ಕಮಗಳೂರು: ಎಂಟಿಎಂನಿಂದ (ATM) ಹಣ ತೆಗೆಯಲು (Money Draw) ಸಹಾಯ (Help) ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ (ATM Card) ಬದಲಾಯಿಸಿ ವಂಚಿಸುತ್ತಿದ್ದ ಆರೋಪಿಯನ್ನು (Accused) ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು (Chikkamagalur Police) ಯಶಸ್ವಿಯಾಗಿದ್ದಾರೆ. ತಮಿಳುನಾಡು (Tamil Nadu) ರಾಜ್ಯದ ತೇನಿ ಜಿಲ್ಲೆಯ ತಂಬಿರಜು ಬಂಧಿತ ಆರೋಪಿ. ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಕಾಫಿ ಬೆಳೆಗಾರ ಉದಯಕುಮಾರ್ ಎಂಬುವರು ಕರ್ನಾಟಕ ಬ್ಯಾಂಕ್ ಎಟಿಎಂನಲ್ಲಿ (Karnataka Bank ATM) ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಆರೋಪಿ ತಂಬಿರಜು ಎಟಿಎಂ ಕಾರ್ಡ್‍ನ್ನು ಬದಲಾ ಯಿಸಿ ವಂಚಿಸಿದ್ದ.

ಕಾರ್ಡ್ ಎಗರಿಸಿ, ಚಿನ್ನ ಖರೀದಿಸಿದ್ದ ಆರೋಪಿ

ಚಿಕ್ಕಮಗಳೂರು ನಗರದಲ್ಲಿ 25 ಸಾವಿರ ರೂ. ಡ್ರಾ ಮಾಡಿ ಬಳಿಕ ಜ್ಯೂವೆಲರಿ ಶಾಪ್ ವೊಂದರಲ್ಲಿ 75 ಸಾವಿರ ರೂ. ಸ್ವೈಪ್ ಮಾಡಿ ಚಿನ್ನ ಖರೀದಿಸಿದ್ದ ಈ ಸಂಬಂಧ ಉದಯಕುಮಾರ್ ಅವರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿ ಬಂಧನಕ್ಕಾಗಿ ಪೊಲೀಸ್ ತಂಡ ರಚನೆ

ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು.

ಈ ತಂಡದಲ್ಲಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿ ಬಂಧ ನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹಾಗೂ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಸಬ್‍ ಇನ್ಸ್‌ಪೆಕ್ಟರ್ ಆದರ್ಶ, ಗೋಣಿಬೀಡು ಪೊಲೀಸ್ ಠಾಣೆಯ ಸಬ್  ಇನ್ಸ್‌ಪೆಕ್ಟರ್  ಧನಂಜಯ್, ಸಿಬ್ಬಂದಿ ಗಿರೀಶ್, ಲೋಹಿತ್, ವಸಂತಕುಮಾರ್, ಲೋಕೇಶ್, ಸುನೀಲ್, ಪ್ರದೀಪ್, ಉಮೇಶ್ ಮತ್ತಿತರರು ಇದ್ದರು.

ಇದನ್ನೂ ಓದಿ: Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು

ಮಡಿಕೇರಿಯಲ್ಲಿ ಆರೋಪಿಗೆ ಕೋಳ

ತಕ್ಷಣ ಕಾರ್ಯಾಪ್ರವೃತ್ತವಾದ ಈ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಮಡಕೇರಿಯಲ್ಲಿ ಆರೋಪಿ ತಂಬಿರಜು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಹಲವು ಪ್ರಕರಣಗಳು ಬೆಳಕಿಗೆ

ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್. ಪೇಟೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಹಾಗೂ ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಹಾ ಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಮೋಸ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ.

ತಮಿಳುನಾಡಲ್ಲೂ 11 ಪ್ರಕರಣ ದಾಖಲು

ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಈತ ನಂತರ ಜ್ಯೂವೆಲೆರಿ ಶಾಪ್‍ಗಳಲ್ಲಿ ತೆರಳಿ ಕಾರ್ಡ್ ಸ್ವೈಪ್ ಮಾಡಿ ಚಿನ್ನವನ್ನು ಖರೀದಿಸುತ್ತಿದ್ದನೆಂಬುದು ತನಿಖೆ ವೇಳೆ ತಿಳಿದು ಬಂದಿದೆ. ಈತನ ಮೇಲೆ ತಮಿಳುನಾಡಿನಲ್ಲಿ 11ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ.

ಇದನ್ನೂ ಓದಿ: Hubballi: ಸಹೋದರರಿಗೆ ಚಾಕುವಿನಿಂದ ಇರಿದು ಎಸ್ಕೇಪ್; ಇಂದು ನೇರವಾಗಿ ಕೋರ್ಟ್​ಗೆ ಬಂದು ಶರಣಾದ ಆರೋಪಿಗಳು

 ಬಂಧಿತನಿಂದ ಹಣ, ಕಾರ್ಡ್, ಚಿನ್ನಾಭರಣ ಜಪ್ತಿ

ಬಂಧಿತ ಆರೋಪಿಯಿಂದ 70 ವಿವಿಧ ಬ್ಯಾಂಕ್‍ಗಳ ಎಟಿಎಂ ಕಾರ್ಡ್, 60 ಗ್ರಾಂ. ಚಿನ್ನ, 35 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.
Published by:Annappa Achari
First published: