ಮಂಗಳೂರು: ನಗರದ ಉತ್ತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ(Dakshina Kannada) ಕಳ್ಳತನ ಪ್ರಕರಣವೊಂದು ದಾಖಲಾಗಿತ್ತು. ಹೂವಿನ ವ್ಯಾಪಾರಿ (Businessman) ಒಬ್ಬರು ತಮ್ಮ ಅಂಗಡಿಯಲ್ಲಿಟ್ಟಿದ್ದ 9 ಲಕ್ಷ ರೂಪಾಯಿ ಹಣವನ್ನು ದುಷ್ಕರ್ಮಿ ಒಬ್ಬ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಅಲ್ಲದೇ ಸಿಸಿಟಿವಿ (CCTV) ಡಿವಿಆರ್ ಕೂಡ ಕದ್ದು ಕೊಂಡ್ಯೊದಿದ್ದ. ಈ ಪ್ರಕರಣದಲ್ಲಿ ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು (Mangaluru Police) ಕಳ್ಳತನ ಹಣ ರಿಕವರಿ ಮಾಡಲು ಮುಂದಾದಗ ಶಾಕಿಂಗ್ ಅಂಶಗಳು ಬೆಳಕಿಗೆ ಬಂದಿದೆ.
ಕುಸಿದು ಬಿದಿದ್ದ ಪಾಳು ಕಟ್ಟಡದಲ್ಲಿ ಹಣ ಹುದುಗಿಸಿಟ್ಟಿದ್ದ ಕಳ್ಳ
ಕಳ್ಳತನ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ವ್ಯಕ್ತಿಯನ್ನು 48 ವರ್ಷದ ಬೆಳ್ತಂಗಡಿ ನಿವಾಸಿ ಹಮೀದ್ (48) ಎಂದು ಗುರುತಿಸಲಾಗಿದೆ. ಇನ್ನು ಹೂವಿನ ಅಂಗಡಿಯಿಂದ ಕಳ್ಳತನ ಮಾಡಿದ್ದ ಹಣದಲ್ಲಿ ಆರೋಪಿ 3.20 ಲಕ್ಷ ರೂಪಾಯಿ ತೆಗೆದುಕೊಂಡು ಮೋಜು ಮಸ್ತಿ ಮಾಡಿದ್ದ.
ಉಳಿದ ಹಣವನ್ನು ತನಗೆ ಅಗತ್ಯವಿರುವ ಸಂದರ್ಭದಲ್ಲಿ ತೆಗೆದುಕೊಳ್ಳೋಣಾ ಅಂತ ನೆಲ್ಲಿಕಾಯಿ ರಸ್ತೆಯlಲ್ಲಿ ಪಾಳು ಬಿದ್ದಿದ್ದ ಕಟ್ಟಡದಲ್ಲಿ ಹುದುಗಿಸಿಟ್ಟು ತೆರಳಿದ್ದ.
ಕೆಲ ಸಮಯದ ಬಳಿಕ ತನ್ನಲ್ಲಿರುವ ಹಣ ಖಾಲಿಯಾಗುತ್ತಿದ್ದಂತೆ ಅರೋಪಿ ಹಮೀದ್ ಹುದುಗಿಸಿಟ್ಟಿದ್ದ ಹಣವನ್ನು ಕೊಂಡೊಯ್ಯುವ ಯೋಜನೆ ಹಾಕಿ ಮತ್ತೆ ಪಾಳು ಮನೆ ಬಳಿ ಆಗಮಿಸಿದ್ದ. ಆದರೆ ಪಾಳು ಬಿದ್ದ ಕಟ್ಟಡವನ್ನು ಮಾಲೀಕರು ನೆಲಸಮ ಮಾಡಿದ್ದರು. ಆದರೆ ಅಂದು ಮನೆ ನೆಲಸಮ ಮಾಡುವ ವೇಳೆ ಭೂಮಿಯಲ್ಲಿಟ್ಟ ಹಣ ಜೆಸಿಬಿ ಆಪರೇಟರ್ ಕಣ್ಣಿಗೆ ಬಿದ್ದಿತ್ತು.
ಜೆಸಿಬಿ ಆಪರೇಟರ್ ಸಿಕ್ಕಿತ್ತು ಕಂತೆ ಕಂತೆ ಹಣ
ಹಣ ನೋಡಿದ ಬಳಿಕ ಅಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರನ್ನು ಕರೆದು ಹಣ ಹಂಚಿಕೊಂಡು ತಮಗೇನು ಗೊತ್ತಿಲ್ಲ ಎಂಬಂತೆ ಸುಮ್ಮನಾಗಿದ್ದರು. ಆದರೆ ಈ ನಡುವೆ ಪೊಲೀಸರು ಕಳ್ಳರ ಮೇಲೆ ನಿಗಾ ಇಟ್ಟಿದ್ದ ವೇಳೆ ಅರೋಪಿ ಹಮೀದ್ ಸಿಕ್ಕಿ ಬಿದ್ದಿದ್ದ. ಪೊಲೀಸರ ವಿಚಾರಣೆ ವೇಳೆ ತಾನೇ ಹೂವಿನ ಅಂಗಡಿಯಲ್ಲಿ ಕಳ್ಳ ಮಾಡಿದ್ದು, ಹಣವನ್ನು ಪಾಳು ಮನೆಯಲ್ಲಿ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದನಂತೆ.
ಆರೋಪಿ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆ ತೆರವು ಮಾಡಿರುವುದು ಕಂಡು ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಅಂದು ಅಲ್ಲಿ ಕೆಲಸ ಮಾಡಿದ್ದ ಜೆಸಿಬಿ ಆಪರೇಟರ್ನನ್ನು ಕರೆದು ವಿಚಾರಣೆ ನಡೆಸಿದ ವೇಳೆ ಹಣ ಸಿಕ್ಕ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ, ನಮ್ಮ ಕುಟುಂಬದಲ್ಲಿ ಬಹಳ ಕಷ್ಟವಿತ್ತು. ದೇವರೇ ನಮಗೆ ಹಣ ಕೊಟ್ಟ ಅಂತ ನಾವು ಕಷ್ಟಕ್ಕೆ ಬಳಕೆ ಮಾಡಿಕೊಂಡಿದ್ದೇವು ಎಂದು ಜೆಸಿಬಿ ಆಪರೇಟರ್ ತಿಳಿಸಿದ್ದ. ಸದ್ಯ ಪೊಲೀಸರು ಕಳ್ಳತನವಾಗಿದ್ದ 9 ಲಕ್ಷ ರೂಪಾಯಿ ಹಣದಲ್ಲಿ 5.80 ಲಕ್ಷ ರೂಪಾಯಿಯನ್ನು ರಿಕವರಿ ಮಾಡಿದ್ದಾರೆ.
ಇದನ್ನೂ ಓದಿ: Santro Ravi: 14 ದಿನ ಜೈಲುಪಾಲಾದ ಬ್ರೋಕರ್ ಸ್ಯಾಂಟ್ರೋ ರವಿ; ವಿಚಾರಣೆ ವೇಳೆ ಪೊಲೀಸರಿಗೆ ಆವಾಜ್!
ಇನ್ನು, ಸಿಕ್ಕ ಹಣ ಬಳಕೆ ಮಾಡಿಕೊಂಡರೆ ಅದು ಕಳ್ಳತನ ಆಗೋದಿಲ್ಲ. ಆದರೆ ಈಗ ಪ್ರಕರಣ ಬೆಳಕಿಗೆ ಬಂದಿರೋ ಕಾರಣ ಹಣವನ್ನು ವಾಪಸ್ ನೀಡುವಂತೆ ಸೂಚಿಸಿದ್ದೇವೆ. ಅವರು ಹಣ ಕಷ್ಟಕ್ಕೆ ಬಳಸಿಕೊಂಡಿದ್ದೀವಿ, ಮತ್ತೆ ವಾಪಸ್ ಕೊಡ್ತೀವಿ ಎಂದು ಹೇಳಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ. ಆರೋಪಿ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕುಖ್ಯಾತ ಕಳ್ಳನ ಮೇಲೆ ಈಗಾಗಲೇ ಜಿಲ್ಲೆಯಲ್ಲಿ 22 ವಾರೆಂಟ್ ಇರುವುದು ಕೂಡ ತಿಳಿದು ಬಂದಿದೆ. ಅಲ್ಲದೇ ರಾಜ್ಯದಾದ್ಯಂತ ಸುಮಾರು 35ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆಯಂತೆ. ಸದ್ಯ ಪ್ರಕರಣಗಳ ಹೆಚ್ಚಿನ ತನಿಖೆಯನ್ನು ನಡೆಸಿರುವ ಪೊಲೀಸರು ಆರೋಪಿಯನ್ನು ಜೈಲಿಗೆ ತಳ್ಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ