ನೈಋತ್ಯ ರೈಲ್ವೆಯ ( South Western Railway ) ಕೆಲ ರೈಲುಗಳ(Train) ಸಂಚಾರದಲ್ಲಿ ಮರು ಸಂಚಾರ, ರದ್ದು(Cancel ), ಮಾರ್ಗ ಬದಲಾವಣೆ ಮಾಡಿರೋದಾಗಿ ತಿಳಿಸಿದೆ. ಈ ಮೂಲಕ ಪ್ರಯಾಣಿಕರಿಗೆ (Passengers) ಅನುಕೂಲವಾದಂತ ಬಹುಮುಖ್ಯ ಮಾಹಿತಿಯನ್ನು (Information)ಬಿಡುಗಡೆ ಮಾಡಿದೆ ಹಲವು ಕೆಲಸಕ್ಕೆ ಸಂಬಂಧಿತ (ಥಿಕ್ ವೆಬ್ ಸ್ವಿಚ್ಗಳ) ಕಾಮಗಾರಿ ಸಲುವಾಗಿ ಲೈನ್ ಬ್ಲಾಕ್(Line black)ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ.
ಗದಗ - ಹೊಟಗಿ ಭಾಗದ ಆಲಮಟ್ಟಿ - ಜಡ್ರಾಮಕುಂಟಿ ನಿಲ್ದಾಣಗಳ ನಡುವ ದಿನಾಂಕ 09.02.2022 ರಿಂದ 28.02.2022 ರವರೆಗೆ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಇರುವ ಕಾರಣ ಈ ಕೆಳಗಿನ ರೈಲಿನ ನಿಯಂತ್ರಣಯನ್ನು ಮಾಡಲಾಗುತ್ತದೆ.
1)ಸೋಲಾಪುರ್ - ಧಾರವಾಡ ಪ್ಯಾಸೆಂಜರ್ ಟ್ರೈನ್(Solapur-Dharwad Passenger Train) : ಫೆ. 9, 11, 13, ಫೆ.14, 16, 18, 20, ಫೆ.28ರವರೆಗೆ 21, 23, 25, 27 ಹಾಗೂ 28 ರಂದು ಸೋಲಾಪುರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07321 ಸೋಲಾಪುರ್ ಧಾರವಾಡ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 90 ನಿಮಿಷಗಳವರೆಗೆ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಇದನ್ನೂ ಓದಿ: KSR ರೈಲು ನಿಲ್ದಾಣದಲ್ಲಿ ನಮಾಜ್, ರೈಲ್ವೆ ಅಧಿಕಾರಿಗಳ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ
2)ಸೋಲಾಪುರ್ - ಧಾರವಾಡ ಪ್ಯಾಸೆಂಜರ್ ಟ್ರೈನ್((Solapur-Dharwad Passenger Train): ಫೆ.10
, 12, 17, 19, 24, ಹಾಗೂ ಫೆ.26ರಂದು ಸೋಲಾಪುರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07321 ಸೋಲಾಪುರ್ ಧಾರವಾಡ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲನ್ನು ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 150 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಈ ರೈಲುಗಳ ನಿಲುಗಡೆ ಸಮಯ ಹೆಚ್ಚಳ(TRAIN STOPPAGE TIMINGS)
ಸಾಗರ ಜಂಬಗಾರು(SAGAR JAMBAGARU) ನಿಲ್ದಾಣದಲ್ಲಿ(Station) ನಿಲುಗಡೆಯ ಸಮಯ ಹೆಚ್ಚಳ: ರೈಲು ಸಂಖ್ಯೆ 16227/16228 ಮೈಸೂರು - ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್(Mysuru - Talguppa - Mysuru Express) ನ್ನು ಫೆ. 10 ರಿಂದ ಆಗಸ್ಟ್ 9 ರವರೆಗೆ ಅಂದರೆ 6 ತಿಂಗಳ ಕಾಲ ಪಾರ್ಸಲ್ ಲೋಡಿಂಗ್ ಕಾರಣ ಸಾಗರ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ರೈಲಿನ ನಿಲುಗಡೆ ಸಮಯವನ್ನು 2 ನಿಮಿಷದಿಂದ 5 ನಿಮಿಷಕ್ಕೆ ಹಚ್ಚಿಸಲು ನಿರ್ಧರಿಸಲಾಗಿದೆ.
ಹೀಗಾಗಿ ರೈಲು ಸಂಖ್ಯೆ 16227 ಮೈಸೂರು - ತಾಳಗುಪ್ಪ ಎಕ್ಸ್ ಪ್ರೆಸ್ ರೈಲು(Mysuru - Talguppa - Mysuru Express) ಸಾಗರ ಜಂಬಗಾರು ನಿಲ್ದಾಣಕ್ಕೆ 06:30/06:32 AM ಬದಲಾಗಿ 06:30/06:35 AM ಆಗಮಿಸಿ/ನಿರ್ಗಮಿಸುತ್ತದೆ.
ಇನ್ನು ರೈಲು ಸಂಖ್ಯೆ 16228 ತಾಳಗುಪ್ಪ - ಮೈಸೂರು ಎಕ್ಸ್ ಪ್ರೆಸ್ ರೈಲು ಸಾಗರ ಜಂಬಗಾರು ನಿಲ್ದಾಣಕ್ಕೆ 08:36/08:38 PM ಬದಲಾಗಿ 08:36/08:41 PM ಆಗಮಿಸಿ/ನಿರ್ಗಮಿಸುತ್ತದೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ, 18 ಪ್ಯಾಸೆಂಜರ್ ರೈಲುಗಳು ರದ್ದು; ಇಲ್ಲಿದೆ ಮಾಹಿತಿ
ಇನ್ನು ನೈರುತ್ಯ ರೈಲ್ವೆ ಇಲಾಖೆಯು, ಸಂಶಿ - ಯಲವಿಗಿ ಭಾಗದಲ್ಲಿ ಗುಡಿಗೇರಿ ಮೊದಲನೇ ಹಂತದ ದ್ವಿಪಥೀಕರಣ ಕಾರ್ಯದ ನಿಮಿತ್ತ ರೈಲುಗಳ ಸೇವೆಯ ರದ್ಧತಿ / ಭಾಗಶಃ ರದ್ಧತಿ / ರೈಲುಗಳ ನಿಯಂತ್ರಣ ಹಾಗೂ ಮಾರ್ಗ ಬದಲಾವಣೆಯನ್ನು ಸೂಚಿಸಲಾಗಿತ್ತು ಪ್ರಸ್ತುತ, ಸದರಿ ಕಾಮಗಾರಿಯ ರದ್ದಾದ ಕಾರಣ ಕಳೆದ ವಾರ ರದ್ದಾದ ರೈಲು ಸೇವೆಯ ಮರು ಸಂಚಾರ ಆರಂಭ ಮಾಡಿರುವುದಾಗಿ ನೈರುತ್ಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡಿತ್ತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ