New Year Celebration: ಹೊಸ ವರುಷ, ಹೊಸ ಹರುಷ ಎಂಬ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ ಎಂಬುದಕ್ಕೆ ಸಾಕ್ಷಿ ವರ್ಷಾಂತ್ಯದಲ್ಲಿ (Year End) ಅನೇಕರನ್ನು ಕಾಡುವ ಒಂದು ರೀತಿಯ ಸಂಕಟ ಹಾಗೂ ಭಯವಾಗಿದೆ ಎಂದು ವರದಿಯೊಂದು ತಿಳಿಸಿದೆ. ಹೊಸ ವರುಷವೆಂಬುದು ಕೆಲವರಿಗೆ ಮೋಜು, ಪಾರ್ಟಿಯ (Party) ನೆನಪನ್ನು ಉಂಟು ಮಾಡಿದರೆ ಇನ್ನು ಕೆಲವರು ಕಳೆದ ವರ್ಷದಲ್ಲಿ ಸಾಧಿಸದೇ ಇರುವ ಗುರಿಗಳು (Acheievment), ಅನುಭವಿಸಿದ ನೋವುಗಳು, ಹತಾಶೆ ಹಾಗೂ ಒಂದು ರೀತಿಯ ಭಯಕ್ಕೆ ಒಳಗಾಗುತ್ತಾರೆ ಎಂದು ಮನಃಶಾಸ್ತ್ರಜ್ಞರು (Psychologists) ತಿಳಿಸುತ್ತಾರೆ.
ವರ್ಷಾಂತ್ಯದಲ್ಲಿ ಕಾಡುವ ಭಯ
2022 ಕೊನೆಗೊಳ್ಳುತ್ತಿದ್ದಂತೆ ಕೆಲವೊಬ್ಬರು ಬೆಂಗಳೂರಿಗರು ವರ್ಷಾಂತ್ಯದ ಒಂದು ರೀತಿಯ ಸಂಕಟ ಹಾಗೂ ನೋವನ್ನು ಅನುಭವಿಸುತ್ತಾರೆ ಎಂಬುದು ವರದಿಯಾಗಿದ್ದು ಇದನ್ನು ಮನಃಶಾಸ್ತ್ರಜ್ಞರು ಒಂದು ಬಗೆಯ ದುಃಖ, ಕಿರಿಕಿರಿ, ಆತ್ಮಾವಲೋಕನ ಮಾಡಿಕೊಳ್ಳುವುದು ಹಾಗೂ ಬಳಲಿಕೆಯ ಭಾವನೆಗಳಾಗಿವೆ ಎಂದು ತಿಳಿಸುತ್ತಾರೆ.
ವರ್ಷದ ಅಂತ್ಯ ಎಂಬುದು ಕಳೆದು ಹೋದ ತಿಂಗಳುಗಳನ್ನು ಪ್ರತಿಬಿಂಬಿಸುತ್ತದೆ ಹಾಗೂ ಆ ಸಮಯದ ಸಂತಸ ಹಾಗೂ ದುಃಖದ ನೆನಪನ್ನು ಮರುಕಳಿಸುತ್ತದೆ. ಇದರಿಂದ ಖಿನ್ನತೆ ಹಾಗೂ ಆತಂಕ ಸಹಜವಾಗಿಯೇ ಉಂಟಾಗುತ್ತದೆ.
ಒಂದು ರೀತಿಯ ವ್ಯಾಕುಲತೆಗೆ ಒಳಗಾಗುವ ಜನರು ವರ್ಷದ ಮೊದಲ ಹಾಗೂ ಕೊನೆಯ ತಿಂಗಳುಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ ಎಂದು ಮನಃಶಾಸ್ತ್ರಜ್ಞೆ ನಿತ್ಯಾ ಜೆ ರಾವ್ ತಿಳಿಸುತ್ತಾರೆ
ಗುರಿ ಸಾಧಿಸದೇ ಇರುವ ಖಿನ್ನತೆ
ವರ್ಷದ ಆರಂಭದಲ್ಲಿ ಹೆಚ್ಚಿನವರು ಏನನ್ನಾದರೂ ಸಾಧಿಸಬೇಕೆಂಬ ಉದ್ದೇಶ ಹಾಗೂ ಗುರಿಯನ್ನು ಇರಿಸಿಕೊಂಡಿರುತ್ತಾರೆ. ಆದರೆ ಕಾರಣಾಂತರಗಳಿಂದ ಅದನ್ನು ಸಾಧಿಸಲೇ ಸಾಧ್ಯವಾಗದಿರುವುದು ವರ್ಷದ ಕೊನೆಯಲ್ಲಿ ಅದನ್ನು ನೆನಪಾಗಿಸುತ್ತದೆ.
ಇದರಿಂದ ವರ್ಷದ ಅಂತ್ಯದ ಸಮಯದಲ್ಲಿ ಒಂದು ರೀತಿಯ ಕೊರಗು ಜನರು ಅನುಭವಿಸುತ್ತಾರೆ ಹಾಗೂ ತಾವು ಅಸಮರ್ಥರು ಎಂಬುದಾಗಿ ತಮ್ಮನ್ನು ತಾವು ಕಾಣುತ್ತಾರೆ ಎಂದು ನಿತ್ಯಾ ಹೇಳುತ್ತಾರೆ.
ಪ್ರಕ್ರಿಯೆಯನ್ನು ಆನಂದದಿಂದ ಸ್ವೀಕರಿಸಿ
ಇಂತಹ ನಿರಾಶೆಗಳನ್ನು ಹತಾಶೆಗಳನ್ನು ಹತ್ತಿಕ್ಕಲು ಸುಲಭ ವಿಧಾನವನ್ನು ತಿಳಿಸುವ ನಿತ್ಯಾ, ವರ್ಷದಿಂದ ವರ್ಷಕ್ಕೆ ಹೊಸದಾದ ಯಾವುದೇ ಗುರಿ ಹಾಗೂ ಉದ್ದೇಶಗಳನ್ನು ಇರಿಸಿಕೊಳ್ಳಬಾರದು ಬದಲಿಗೆ ನೀವು ಏನನ್ನಾದರೂ ಸಾಧಿಸಬೇಕು ಎಂದಾದಲ್ಲಿ ಅದನ್ನು ಕೂಡಲೇ ಕಾರ್ಯರೂಪಕ್ಕೆ ಇಳಿಸಿ ಏಕೆ ಹೊಸ ವರ್ಷಕ್ಕಾಗಿ ಇರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಾರೆ.
ಹೊಸ ವರ್ಷ ಹಾಗೂ ವರ್ಷಾಂತ್ಯ ಎಂಬುದು ಸಂತಸ ಹಾಗೂ ದುಃಖ, ಕಷ್ಟ ಹಾಗೂ ಸುಖದ ನೆನಪುಗಳನ್ನು ಮನದಲ್ಲಿ ಮೂಡಿಸುತ್ತವೆಯಾದರೂ ಯಾವುದೇ ನೆನಪುಗಳು ಮನಸ್ಸನ್ನು ಅತಿಯಾಗಿ ಕಾಡಬಾರದು. ಅದೊಂದು ಪ್ರಕ್ರಿಯೆ ಹಾಗೂ ಅದು ಕಳೆದುಹೋಯಿತು ಎಂಬ ನಿಟ್ಟಿನಲ್ಲಿ ಅದನ್ನು ಕಾಣಬೇಕು ಎಂದು ಸಲಹೆ ನೀಡಿದ್ದಾರೆ.
ಸಲಹೆಗಳೇನು?
ಇಂತಹ ಹತಾಶೆ ಸೋಲುಗಳನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಸಲಹೆ ನೀಡಿರುವ ತಜ್ಞೆ ಪ್ರಯಾಣ ಉತ್ತಮ ಪರಿಹಾರ ಎಂದು ತಿಳಿಸಿದ್ದಾರೆ.
ಸಾಧ್ಯವಾದಷ್ಟು ಹೊಸ ಸ್ಥಳಗಳಿಗೆ ಪ್ರಯಾಣಿಸುವುದು, ಅಲ್ಲಿನ ಜನರ ರೀತಿನೀತಿಗಳನ್ನು ಕಲಿತುಕೊಳ್ಳುವುದು, ಸಂಪ್ರದಾಯಗಳನ್ನು ತಿಳಿದುಕೊಳ್ಳುವುದು ಮೊದಲಾದ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಹತಾಶೆ ದುಃಖಗಳನ್ನು ನಿಯಂತ್ರಿಸುವುದು ಹೇಗೆ?
ವಿಟಮಿನ್ ಡಿ ಹಾಗೂ ಬಿ12 ನ ಕೊರತೆಯು ವರ್ಷಾಂತ್ಯದ ದುಃಖ ಹಾಗೂ ಹತಾಶೆಯನ್ನು ಹೆಚ್ಚಿಸುತ್ತದೆ ಎಂದು ನಿತ್ಯಾ ಅಭಿಪ್ರಾಯಪಡುತ್ತಾರೆ. ಬಿ12 ಮಟ್ಟವನ್ನು ಆಗಾಗ್ಗೆ ಪರಿಶೀಲಿಸಿಕೊಳ್ಳುತ್ತಿರುವುದು ಮುಖ್ಯವಾಗಿದೆ ಹಾಗೂ ಸೂರ್ಯನ ಬಿಸಿಲಿಗೆ ಆಗಾಗ್ಗೆ ಅಡ್ಡಾಡುವುದನ್ನು ಅಭ್ಯಾಸವಾಗಿಟ್ಟುಕೊಳ್ಳಿ ಎಂದು ನಿತ್ಯಾ ಸಲಹೆ ನೀಡುತ್ತಾರೆ.
ಪ್ರತಿ ತಿಂಗಳು ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಬರೆಯಿರಿ ಹಾಗೂ ಅತ್ಯಂತ ವಿಶೇಷವಾದ ನೆನಪುಗಳನ್ನು ನೋಟ್ ಮಾಡಿಕೊಳ್ಳಿ ಹೀಗಾದಾಗ ಸೋಲಿನಲ್ಲೂ ಗೆಲ್ಲುವೆನು ಎಂಬ ಆಶಾಭಾವನೆ ಮೂಡುತ್ತದೆ ಎಂದು ನಿತ್ಯಾ ತಿಳಿಸಿದ್ದಾರೆ.
ಕೊನೆಯ ನಿಮಿಷದಲ್ಲಿ ಗುರಿ ಮುಟ್ಟುತ್ತೇನೆ ಎಂಬ ಅಮಿತ ವಿಶ್ವಾಸದಿಂದ ನಿಮ್ಮನ್ನು ನೀವು ತಳ್ಳಬೇಡಿ ಎಂದು ಮನಃಶಾಸ್ತ್ರಜ್ಞೆ ಶ್ರೇಯಾ ಗಿರಿಯಾ ತಿಳಿಸುತ್ತಾರೆ. ಆದಷ್ಟು ಗುರಿಗಳನ್ನು ಇರಿಸಿಕೊಳ್ಳಿ ಹಾಗೂ ಗುರಿ ಮುಟ್ಟದೇ ಇದ್ದಲ್ಲಿ ಹತಾಶರಾಗಬೇಡಿ ಎಂದು ಸಾಂತ್ವಾನ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ